‘ಕೋಳಿ ಮೊದಲಾ, ಮೊಟ್ಟೆ ಮೊದ್ಲಾ’….? – ತಲೆ ಹಾಳು ಮಾಡುವ ಪ್ರಶ್ನೆಗೆ ಕೊನೆಗೂ ಸಿಕ್ತು ವಿಜ್ಞಾನಿಗಳಿಂದ ಆನ್ಸರ್…!

ನ್ಯೂಸ್ ಆ್ಯರೋ : ಅನೇಕ ಬಾರಿ ಕೆಲವು ಪ್ರಶ್ನೆಗಳು ಅದೆಷ್ಟೇ ಯೋಚಿಸಿದರೂ ಉತ್ತರ ಸಿಗದೆ ಪ್ರಶ್ನೆಯಾಗಿಯೇ ಉಳಿದಿರುತ್ತದೆ. ಅಂತಹ ಗೊಂದಲಕ್ಕೀಡು ಮಾಡುವ ಪ್ರಶ್ನೆಗಳಲ್ಲಿ ‘ ಕೋಳಿ ಮೊದಲಾ, ಅಥವಾ ಮೊಟ್ಟೆ ಮೊದ್ಲಾ’ ಅನ್ನೋ ಪ್ರಶ್ನೆ ಕೂಡಾ ಒಂದು. ಈ ಪ್ರಶ್ನೆಗೆ ಅನೇಕ ಪ್ರತಿಕ್ರಿಯೆಗಳು, ಸಮರ್ಥನೆಗಳು ಇದ್ದರೂ ಕೂಡಾ ಸೈದ್ಧಾಂತಿಕವಾಗಿ ಬಿಡಿಸಲಾಗದ ಪ್ರಶ್ನೆಯಾಗಿಯೇ ಇದು ಉಳಿದಿತ್ತು. ಇದೀಗ ವಿಜ್ಞಾನಿಗಳಿಂದ ಇದಕ್ಕೆ ಉತ್ತರ ಸಿಕ್ಕಿದೆ.

ಶೆಫೀಲ್ಡ್ ಮತ್ತು ವಾರ್ವಿಕ್ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ಹಳೆಯ ಒಗಟನ್ನು ಭೇಧಿಸುವುದಾಗಿ ಹೇಳಿಕೊಂಡಿದ್ದಾರೆ. ಮೊದಲು ಬಂದದ್ದು ಕೋಳಿ ಎಂದು ಸಾಬೀತಾಗುತ್ತದೆ. ಗಮನಾರ್ಹವಾಗಿ ಉತ್ತರವನ್ನು ಕಂಡುಕೊಳ್ಳಲು ಇದು ಮೊದಲ ಸಂಶೋಧನೆಯಲ್ಲ.

ವಿಜ್ಞಾನಿಗಳು ಈ ಬಗ್ಗೆ ಏನ್ ಹೇಳ್ತಾರೆ ಗೊತ್ತಾ..?

ಮೊಟ್ಟೆಯ ಚಿಪ್ಪುಗಳ ರಚನೆಯು ಕೋಳಿಯ ಅಂಡಾಶಯದಲ್ಲಿ ಮಾತ್ರ ಕಂಡುಬರುವ ಪ್ರೋಟೀನ್ ನ ಮೇಲೆ ಅವಲಂಬಿತವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದ್ದರಿಂದ ಮೊಟ್ಟೆಯು ಕೋಳಿಯೊಳಗೆ ಇದ್ದರೆ ಮಾತ್ರ ಅಸ್ತಿತ್ವದಲ್ಲಿರುತ್ತದೆ ಎಂದು ಹೇಳಿದ್ದಾರೆ.‌

ಇನ್ನೊಂದು ಕಡೆ ಒವೊಕ್ಲೆಡಿಡಿನ್ 17 ಅಥವಾ OC-17 ಎಂಬ ನಿರ್ದಿಷ್ಟ ಪ್ರೋಟೀನ್ ನ ಶೆಲ್ ಬೆಳವಣಿಗೆಯನ್ನು ವೇಗಗೊಳಿಸಲು ವೇಗವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಗಟ್ಟಿಯಾದ ಕವಚವು ಹಳದಿ ಲೋಳೆ ಮತ್ತು ಅದರ ರಕ್ಷಣಾತ್ಮಕ ದ್ರವಗಳನ್ನು ಇರಿಸಲು ಅವಶ್ಯವಾಗಿದೆ, ಆದರೆ ಮರಿಗಳು ಒಳಗೆ ಬೆಳರಯುತ್ತದೆ ಎಂದು ವಿವರಿಸಿದ್ದಾರೆ.

ರಿಸರ್ಚ್ ಮಾಡಿದ ಪ್ರಕಾರ :

ಮೊಟ್ಟೆಯ ರಚನೆಯ ಮೇಲೆ ‘ಝೂಮ್ ಇನ್’ ಮಾಡುವ ಸಂಪರ್ಕ ಕಂಪ್ಯೂಟರ್ ಅನ್ನು ಬಳಸುವುದರೊಂದಿಗೆ ಇದನ್ನು ನಡೆಸಲಾಯಿತು. ಎಡಿನ್ ಬರ್ಗ್ ನಲ್ಲಿ ನೆಲೆಗೊಂಡಿರುವ HECToR ಎಂಬ ಕಂಪ್ಯೂಟರ್ ಅದು ತೀರ್ಮಾನಿಸಿದ ಶೆಲ್ ನ ರಚನೆಯ ಆರಂಭಿಕ ಹಂತದಲ್ಲಿ ಸ್ಫಟಿಕೀಕರಣವನ್ನು ಪ್ರಾರಂಭಿಸುವಲ್ಲಿ OC-17 ನಿರ್ಣಾಯಕವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ವಿಜ್ಞಾನ, ಸಂಶೋಧನೆ, ವಿಜ್ಞಾನಿಗಳ ಅಧ್ಯಯನದಿಂದ ಅದೇನೇ ಪ್ರೂವ್ ಆದ್ರೂ ಕೂಡಾ ಜನರು ಮಾತ್ರ ಇಂದಿಗೂ ಆ ಪ್ರಶ್ನೆಗೆ ಉತ್ತರ ಸಿಗದೆ ಹುಡುಕುತ್ತಲೇ ಇದ್ದಾರೆ. ಆ ಮಟ್ಟಿಗೆ ಈ ದ್ವಂದ್ವ ಮನೆಮಾಡಿದೆ.