IND vs SA T20 : ಸೂರ್ಯನ ಸ್ಫೋಟಕ ಶತಕ, ಕುಲ್ದೀಪ್ ನ ಮಾರಕ ಬೌಲಿಂಗ್ – ಗೆಲ್ಲಲೇಬೇಕಾದ ಪಂದ್ಯ ಜಯಿಸಿದ ಯುವಪಡೆ, ಟುಸ್ ಆಯ್ತು ದಕ್ಷಿಣ ಆಫ್ರಿಕಾ ಸರಣಿ ಗೆಲುವಿನ ಆಸೆ…!

IND vs SA T20 : ಸೂರ್ಯನ ಸ್ಫೋಟಕ ಶತಕ, ಕುಲ್ದೀಪ್ ನ ಮಾರಕ ಬೌಲಿಂಗ್ – ಗೆಲ್ಲಲೇಬೇಕಾದ ಪಂದ್ಯ ಜಯಿಸಿದ ಯುವಪಡೆ, ಟುಸ್ ಆಯ್ತು ದಕ್ಷಿಣ ಆಫ್ರಿಕಾ ಸರಣಿ ಗೆಲುವಿನ ಆಸೆ…!

ನ್ಯೂಸ್ ಆ್ಯರೋ: ಒಂದು ಕಡೆ ಪ್ರೊ ಕಬಡ್ಡಿ ನಡೆಯುತ್ತಿದೆ. ಇನ್ನೊಂದು ಕಡೆ ಇಂಟ್ರೆಸ್ಟಿಂಗ್ ಕ್ರಿಕೆಟ್ ಪಂದ್ಯಾಟ. ಕ್ರಿಕೆಟ್ ಅಭಿಮಾನಿಗಳಿಗಂತೂ ರೋಚಕ ರಸದೌತಣ. ನಿನ್ನೆ ನಡೆದ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಶತಕ ಮತ್ತು ಕುಲ್ದೀಪ್‌ ಯಾದವ್‌ ಅವರ ಭರ್ಜರಿ ಬೌಲಿಂಗ್‌ನಿಂದ ಭಾರತ ದಕ್ಷಿಣ ಆಫ್ರಿಕ ವಿರುದ್ಧ ಕೊನೆಯ ಟಿ20 ಪಂದ್ಯವನ್ನು 106 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಡ್ರಾ ಮಾಡಿಕೊಂಡಿದೆ.

ಅಲ್ಲದೆ ಗೆಲ್ಲಲೇಬೇಕಾದ ಪಂದ್ಯಗಳನ್ನು ಗೆಲ್ಲುವ ಹವ್ಯಾಸ ಬೆಳೆಸಿಕೊಂಡಿರುವ ಟೀಂ ಇಂಡಿಯಾ ಮತ್ತೊಂದು ಗೆಲುವಿನೊಂದಿಗೆ ಗೆಲುವಿನ ಅಂತರವನ್ನು 11-10ರೊಂದಿಗೆ ಮತ್ತಷ್ಟು ಹೆಚ್ಚಿಸಿಕೊಂಡಿತು.

ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ದ.ಆಫ್ರಿಕಾ ತಂಡ…!

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 13.5 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್‌ ಆಯ್ತು. ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಹೋದ ಆಫ್ರಿಕಾಗೆ ಡೇವಿಡ್‌ ಮಿಲ್ಲರ್‌ ಸ್ವಲ್ಪ ಶಕ್ತಿ ತುಂಬಿದರು. ಆದರೆ ಕುಲ್ದೀಪ್‌ ಯಾದವ್‌ ದಾಳಿಗೆ ಇಳಿಯುತ್ತಿದ್ದಂತೆ ವಿಕೆಟ್‌ ಪತನಗೊಳ್ಳಲು ಆಂಭವಾಯಿತು. 4 ವಿಕೆಟ್‌ ನಷ್ಟಕ್ಕೆ 75 ರನ್‌ಗಳಿಸಿದ ದಕ್ಷಿಣ ಆಫ್ರಿಕಾ ನಂತರ 20 ರನ್‌ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಿತ್ತು. ಡೇವಿಡ್‌ ಮಿಲ್ಲರ್‌ 35 ರನ್‌ ಹೊಡೆದರೆ ನಾಯಕ ಮ್ಯಾಕ್ರಾಮ್‌ 25 ರನ್‌ ಹೊಡೆದು ಔಟಾದರು.

2.5 ಓವರ್‌ ಎಸೆದು 17 ರನ್‌ ನೀಡಿ ಕುಲ್ದೀಪ್‌ ಯಾದವ್‌ 5 ವಿಕೆಟ್‌ ಪಡೆದರೆ ಜಡೇಜಾ 2 ವಿಕೆಟ್‌ ಕಿತ್ತರು. ಮುಕೇಶ್‌ ಕುಮಾರ್‌ ಮತ್ತು ಆರ್ಶ್‌ದೀಪ್‌ ಸಿಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಬಿರುಸಿನ ಅರ್ಧ ಶತಕದೊಂದಿಗೆ ಯಶಸ್ವಿ ಜೈಸ್ವಾಲ್ ತಂಡವನ್ನು ಆಧರಿಸಿದರೆ, ಶತಕ ಸಿಡಿಸಿ ತಂಡವನ್ನು ಆರಂಭಿಕ ಅಪಾಯದಿಂದ ಪಾರು ಮಾಡಿದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮೊದಲ ಪಂದ್ಯ ಮಳೆಗೆ ಅಹುತಿಯಾಗಿದ್ದರೆ ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ 5 ವಿಕೆಟ್ ಗಳ ಜಯ ಸಾಧಿಸಿತ್ತು. ಡಿ.17 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಯುವರಾಜ್ ಸಿಂಗ್ ತಮ್ಮ ಜನ್ಮದಿನದಂದು ಅಂದರೆ 12 ಡಿಸೆಂಬರ್ 2009 ರಂದು ಮೊಹಾಲಿಯಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 23 ರನ್‌ ನೀಡಿ ಮೂರು ವಿಕೆಟ್ ಪಡೆದಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇಲ್ಲಿಯವರೆಗೆ ಭಾರತದ ಪರ 34 ಟಿ20 ಪಂದ್ಯಗಳನ್ನಾಡಿರುವ ಕುಲ್ದೀಪ್ 6.68 ರ ಅದ್ಭುತ ಎಕಾನಮಿಯಲ್ಲಿ 58 ವಿಕೆಟ್ಗಳನ್ನು ಪಡೆದಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *