ಅರೆ! ಏನಿದು? ಚಲಿಸುತ್ತಿರುವ ಬೈಕ್ ನಲ್ಲಿ ಯುವತಿಯರ ಲಿಪ್ ಲಾಕ್ – ವೈರಲ್ ಆಯ್ತು ವಿಡಿಯೋ…!!

ಅರೆ! ಏನಿದು? ಚಲಿಸುತ್ತಿರುವ ಬೈಕ್ ನಲ್ಲಿ ಯುವತಿಯರ ಲಿಪ್ ಲಾಕ್ – ವೈರಲ್ ಆಯ್ತು ವಿಡಿಯೋ…!!

ನ್ಯೂಸ್ ಆ್ಯರೋ‌ : ಬೈಕ್ ಮೇಲೆ ಕುಳಿತು ಅದು ಚಲಿಸುತ್ತಿರುವಾಗ ಸ್ಟಂಟ್ ಮಾಡುತ್ತಿರುವ ಪ್ರಕರಣ ಇತ್ತೀಚೆಗೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಯುವಕರು ಈ ರೀತಿ ಮಾಡಿದರೆ ಈ ಪ್ರಕರಣ ಮಾತ್ರ ಭಿನ್ನ. ಯುವತಿಯರಿಬ್ಬರು ಚಲಿಸುತ್ತಿರುವ ಬೈಕ್ ಮೇಲೆ ಅತಿರೇಕದ ವರ್ತನೆ ತೋರಿದ್ದು, ವೀಡಿಯೋ ವೈರಲ್ ಆಗಿದೆ.

ಈ ಯುವತಿಯರು ಚಲಿಸುತ್ತಿರುವ ಬೈಕ್​​​ನಲ್ಲಿ ಎದುರು ಬದುರು ಕುಳಿತು, ಸ್ಟಂಟ್ ಮಾಡಿಕೊಂಡು ಪರಸ್ಪರ ತಬ್ಬಿಕೊಂಡು ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ವೀಡಿಯೋ ತಮಿಳುನಾಡಿದ್ದು ಎಂದು ಹೇಳಲಾಗಿದೆ. ಈ ಬೈಕ್​​ ತಮಿಳುನಾಡು ನೋಂದಣಿ ಫಲಕವನ್ನು ಹೊಂದಿದೆ ಎಂದು ತಿಳಿದು ಬಂದಿದೆ.

ಈ ವೀಡಿಯೋವನ್ನು ಸ್ಟಾರ್ಸ್ ಜಾರ್ಖಂಡ್ (@stars_of_jharkhand) ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈಗ ವೀಡಿಯೋವನ್ನು ಅಳಿಸಲಾಗಿದೆ. ಆದರೆ ಇದು ಯೂಟ್ಯೂಬ್ ನಲ್ಲಿ ವೈರಲ್​​ ಆಗಿದೆ. ಈ ವೀಡಿಯೋ ನೋಡಿ ನೆಟ್ಟಿಗರು ಫುಲ್ ಗರಂ ಆಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಇಬ್ಬರು ಯುವತಿಯರ ವರ್ತನೆಯನ್ನು ವಿರೋಧಿಸಿ, ಹಲವಾರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಬೈಕ್​​​ನ್ನು ಬ್ಯಾಲೆನ್ಸ್​​ ಮಾಡಿಕೊಂಡು ಕಿಸ್​​ ಮಾಡಿದ ನಿಮ್ಮ ಧೈರ್ಯಕ್ಕೆ ಮೆಚ್ಚಬೇಕು ಎಂದು ಹೇಳಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *