Viral: Even after 4 weeks, the person who made the record of 'long hangover' did not stop drinking beer!

ಇದು ಯಾವ ಬ್ರ್ಯಾಂಡಪ್ಪಾ..? 4ವಾರವಾದ್ರೂ ಬಿಯರ್ ನ ಅಮಲು ಬಿಡ್ಲಿಲ್ಲ…! – ‘ಲಾಂಗ್ ಹ್ಯಾಂಗೋವರ್’ ದಾಖಲೆ ಮಾಡಿದ ವ್ಯಕ್ತಿ…

ನ್ಯೂಸ್ ಆ್ಯರೋ : ಮದ್ಯಸೇವನೆ ಅನ್ನುವಂತದ್ದು ಒಂದು ರೀತಿಯ ಚಟ. ಈ ಚಟ ಪ್ರಾರಂಭ ಮಾಡಿಕೊಂಡರೆ ಬಿಡೋದಂತೂ ಕಷ್ಟ. ಇತ್ತೀಚೆಗಂತೂ ಮದ್ಯ ವ್ಯಸನ ಮಾಡಿದ್ರೆ ಅದು ಶೋಕಿ. ಇದರಿಂದ ಕ್ಯಾನ್ಸರ್, ಯಕೃತ್ತಿನ ಖಾಯಿಲೆ, ಪಾರ್ಶ್ವವಾಯು, ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಇನ್ನು ಕುಡಿದ ಅಮಲಿನಲ್ಲಿ ತೂರಾಡುವವರ ಗತಿ ವಿವರಿಸಬೇಕೆ..? ಅವರು ಎಲ್ಲಿ ಬಿದ್ದಿದ್ದಾರೆ ಎಂಬ ಪರಿಜ್ಞಾನವೂ ಅವರಿಗಿರಲ್ಲ.

ಆದರೆ ಇಲ್ಲೊಬ್ಬ ವ್ಯಕ್ತಿಯ ಅವಸ್ಥೆ ನೋಡಿ. ಆತ ಬಿಯರ್ ಕುಡಿದು ಒಂದೆರಡು ದಿನವಲ್ಲ. ಬರೋಬ್ಬರಿ 4 ವಾರವಾದ್ರೂ ಆತನಿಗೆ ಅದರ ಅಮಲಿನಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಈ ವಿಚಿತ್ರ ಘಟನೆ ಸ್ಕಾಟ್ಲೆಂಡಿನಲ್ಲಿ ನಡೆದಿದೆ.

ಸ್ಕಾಟ್ಲೆಂಡ್‌ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಕಂಠ ಪೂರ್ತಿ ಬಿಯರ್​ ಕುಡಿದಿದ್ದಾನೆ. ಆದರೆ ಆಶ್ಚರ್ಯವೆನೆಂದರೆ 4 ವಾರವಾದರೂ ಬಿಯರ್ ನ ಅಮಲು ಬಿಟ್ಟಿಲ್ಲ. ಕೊನೆಗೆ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಮೂಲಕ ‘ಲಾಂಗ್ ಹ್ಯಾಂಗೋವರ್’ ಹೊಂದಿರುವ ವ್ಯಕ್ತಿ ಎಂಬ ದಾಖಲೆಯನ್ನು ಮಾಡಿದ್ದಾನೆ.

ಈತನ ಸಿಟಿ ಸ್ಕ್ಯಾನ್ ರಿಪೋರ್ಟ್ ನೋಡಿ ವೈದ್ಯರೇ ಶಾಕ್..!

‘ದಿ ಲ್ಯಾನ್ಸೆಟ್’ ಎಂಬ ನಿಯತಕಾಲಿಕೆಯ ಪ್ರಕಾರ ಈ 37 ವರ್ಷದ ವ್ಯಕ್ತಿಯನ್ನು ಆಲಸ್ಯ, ತಲೆನೋವು ಮತ್ತು ಕಣ್ಣು ಮಂಜಾಗುತ್ತಿದೆ ಎಂಬ ಸಮಸ್ಯೆಯಿಂದಾಗಿ ಮೊದಲಿಗೆ ಆಸ್ಪ್ರತೆಗೆ ದಾಖಲಿಸಲಾಗಿದೆ. ಆದರೆ ಆ ವ್ಯಕ್ತಿಗೆ ಇಂತಹ ಸಮಸ್ಯೆಗಳು ಏಕೆ ಬರುತ್ತಿವೆ ಎಂದು ಆರಂಭದಲ್ಲಿ ವೈದ್ಯರಿಗೂ ಅರ್ಥವಾಗಲಿಲ್ಲ.

ಸಿಟಿ ಸ್ಕ್ಯಾನ್ ಮಾಡಿ, ಫಲಿತಾಂಶ ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. ವ್ಯಕ್ತಿಯ ಮೆದುಳಿನ ಸುತ್ತ ಏನೋ ಸಮಸ್ಯೆ ಇದೆ ಎಂದು ವೈದ್ಯರಿಗೆ ತಿಳಿದುಬಂದಿದೆ.

28ಲೀಟರ್ ಬಿಯರ್ ಕುಡಿದಿದ್ದ ಭೂಪ..!

ಆಶ್ಚರ್ಯಚಕಿತರಾದ ವೈದ್ಯರು ವ್ಯಕ್ತಿಯ ಜೀವನಶೈಲಿಯ ಬಗ್ಗೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಆತ ತಾನು ಒಂದು ತಿಂಗಳ ಹಿಂದೆ 60 ಪಿಂಟ್‌ಗಳು ಅಂದರೆ ಸುಮಾರು 28 ಲೀಟರ್‌ ಬಿಯರ್‌ ಕುಡಿದಿರುವುದಾಗಿ ಹೇಳಿಕೊಂಡಿದ್ದಾನೆ.

ವೈದ್ಯರು ಆತನ ರಕ್ತವನ್ನು ಪರೀಕ್ಷಿಸಿದಾಗ ಆತನ ದೇಹದಲ್ಲಿ ಲೂಪಸ್ ಹೆಪ್ಪುರೋಧಕ ಅಂಶ ಹೆಚ್ಚಿರುವುದು ಕಂಡುಬಂದಿದೆ. ಈ ಮೂಲಕ ‘ಲಾಂಗ್ ಹ್ಯಾಂಗೊವರ್’ ಹೊಂದಿರುವ ವ್ಯಕ್ತಿ ಎಂಬ ದಾಖಲೆಯನ್ನು ಮಾಡಿದ್ದಾನೆ. ಆದರೆ ಒಂದಂತೂ ಸತ್ಯ ಅಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ ಈತ ಬದುಕುಳಿದಿರೋದೆ ಮೇಲು…!!