ಫೇಸ್ ಬುಕ್ ನಲ್ಲಿ ಚಿಗುರೊಡೆದ ಲವ್ ಸ್ಟೋರಿ – ಪ್ರೀತಿಗಾಗಿ 6000 ಕಿಮೀ ಕ್ರಮಿಸಿ ಬಂದಳು ಸ್ವೀಡನ್ ಬೆಡಗಿ

ಫೇಸ್ ಬುಕ್ ನಲ್ಲಿ ಚಿಗುರೊಡೆದ ಲವ್ ಸ್ಟೋರಿ – ಪ್ರೀತಿಗಾಗಿ 6000 ಕಿಮೀ ಕ್ರಮಿಸಿ ಬಂದಳು ಸ್ವೀಡನ್ ಬೆಡಗಿ

ನ್ಯೂಸ್ ಆ್ಯರೋ : ಇಂದಿನ‌ ಕಾಲಮಾನದಲ್ಲಿ ಪ್ರೀತಿ ಎಂದರೆ ಇಂದು ಹುಟ್ಟಿ ನಾಳೆ ಸಾಯುವ ಅಣಬೆಯಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹುಟ್ಟುವ ಪ್ರೇಮಕತೆಗಳಂತೂ ರಕ್ತದೊಂದಿಗೋ, ಕಣ್ಣೀರಿನೊಂದಿಗೋ ಮುಗಿಯುವಂತಹದ್ದು. ಆದರೆ ಇಲ್ಲೊಂದು ಪ್ರೇಮ‌ಕತೆ ಅವೆಲ್ಲವನ್ನೂ ಮೀರಿದ್ದು. ಫೇಸ್ ಬುಕ್ ನಲ್ಲಿ ಚಿಗುರೊಡೆದ ಪ್ರೀತಿಗಾಗಿ ಇಲ್ಲೊಬ್ಬಳು ಬೆಡಗಿ ಸ್ವೀಡನ್ ದೇಶದಿಂದ ಭಾರತಕ್ಕೆ ಬಂದಿದ್ದಾಳೆ.

ಹೌದು, ಪ್ರೀತಿಗೆ ಅರ್ಥವೇ ಇರದ ಈ ಕಾಲದಲ್ಲೂ ಇಂತಹ ಪ್ರೇಮಿಗಳಿದ್ದಾರೆ ಅಂದರೆ ಆಶ್ಚರ್ಯವಾಗದೇ ಇರಲಾರದು. ಸ್ವೀಡನ್ ದೇಶದ ಕ್ರಿಸ್ಟನ್ ಲೀಬರ್ಟ್ ಎಂಬ ಹುಡುಗಿಯನ್ನು ಭಾರತ ಮೂಲದ ಪವನ್ ಪರಿಚಯಿಸಿಕೊಂಡಿದ್ದ. ಕಾಲಕಳೆದಂತೆ ಇವರಿಬ್ಬರ ನಡುವೆ ಸ್ನೇಹ ಬಲವಾಗಿ, ಅದೇ ಮುಂದೆ ಪ್ರೀತಿಯಾಗಿ ಅರಳಿತು. ಇದೀಗ 6000 ಕಿ.ಮೀ ದಾಟಿ ಪ್ರೀತಿಸಿದ ಹುಡುಗನನ್ನು ಮದುವೆಯಾಗುವ ಉದ್ದೇಶದಿಂದ ಸ್ವೀಡನ್ ದೇಶದಿಂದ ಆಕೆ ಬಂದಿದ್ದಾಳೆ. ಜೊತೆಗೆ ಇದೀಗ ಇವರಿಬ್ಬರು ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ವರದಿಗಳ ಪ್ರಕಾರ ಸ್ವೀಡನ್ ಬೆಡಗಿ ಕ್ರಿಸ್ಟಲ್ ಹಾಗೂ ಪವನ್ ಅವರದ್ದು ಬರೋಬ್ಬರಿ ಹತ್ತು ವರ್ಷಗಳ ಪ್ರೇಮಕತೆ. ಇವರಿಬ್ಬರೂ 2012 ರಲ್ಲಿ ಪೇಸ್ ಬುಕ್ ಮೂಲಕ ಪರಿಚಯವಾಗಿ ಆತ್ಮೀಯರಾಗಿದ್ದರು. ಪವನ್ ಖಾಸಗಿ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿದ್ದಾರೆ. ಕ್ರಿಸ್ಟಲ್ ಕೂಡ ಈ ಹಿಂದೆಯೂ ಭಾರತಕ್ಕೆ ಆಗಿಮಿಸಿದ್ದಾರಂತೆ. ಇವರಿಬ್ಬರ ಪ್ರೇಮಕತೆ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಸಿರುವ ಆಕೆ ‘ನಾನು ಭಾರತವನ್ನು ಅತಿಯಾಗಿ ಪ್ರೀತಿಸುತ್ತೇನೆ. ಈ ಮೊದಲು ಕೂಡ ಭಾರತಕ್ಕೆ ಬಂದಿದ್ದೆ. ಇದೀಗ ಭಾರತೀಯ ಮೂಲದ ಹುಡುಗನನ್ನು ವಿವಾಹವಾಗುತ್ತಿರುವುದಕ್ಕೆ ಖುಷಿಯಿದೆ ಎಂದಿದ್ದಾರೆ. ಪವನ್ ಹಾಗೂ ಕ್ರಿಸ್ಟಲ್ ವಿವಾಹದ ಫೋಟೋಗಳು ಸದ್ಯ ವೈರಲ್ ಆಗುತ್ತಿದ್ದು, ನೆಟ್ಟಿಗರು ಶುಭಾಶಯದ ಮಹಾಪೂರವನ್ನೆ ಹರಿಸುತ್ತಿದ್ದಾರೆ. ಏನೇ ಇರಲಿ, ಇವರಿಬ್ಬರು ಪ್ರೀತಿಯ ಅರ್ಥ ಗೊತ್ತಿಲ್ಲದ ಹದಿಹರೆಯದ ಯುವಕ , ಯುವತಿಯರಿಗೆ ಪ್ರೀತಿಯ ನಿಜಾರ್ಥವನ್ನು ತಿಳಿಸಿದ್ದಂತೂ ಸುಳ್ಳಲ್ಲ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *