3 ಸಾವಿರ ವರ್ಷದ ಹಳೆಯ ವಿಗ್ರಹದಲ್ಲಿ ಇದೇನಿದು ಕ್ಯೂ ಆರ್ ಕೋಡ್ ಪತ್ತೆ – ವೈರಲ್ ಆಗ್ತಿದೆ ಫೋಟೋ…!

ನ್ಯೂಸ್ ಆ್ಯರೋ : ಪ್ರಾಚೀನ ಕಾಲದ ಶಿಲ್ಪಕಲೆ, ಕಲ್ಲುಗಳಲ್ಲಿ ದೇವರ ರಚನೆ ಇಂತಹ ಆಶ್ಚರ್ಯಕರ ಸಂಗತಿಗಳು ಬಯಲಾಗುತ್ತಲೇ ಇರುತ್ತದೆ. ಅದೇ ರೀತಿ ಇದೀಗ ಮತ್ತೊಂದು 3000 ವರ್ಷಗಳಷ್ಟು ಹಳೆಯ ವಿಗ್ರಹ ಪತ್ತೆಯಾಗಿದೆ. ಅದರಲ್ಲಿ ಕ್ಯೂ ಆರ್ ಕೋಡ್ ರಚನೆ ಪತ್ತೆಯಾಗಿರುವುದು ಜನರ ಅಚ್ಚರಿಗೆ ಕಾರಣವಾಗಿದೆ.

ಪುರಾತನ ಪ್ರತಿಮೆಯೊಂದರಲ್ಲಿ ಕ್ಯೂಆರ್ ಕೋಡ್‌ನಂತಹ ಆಕೃತಿ ಪತ್ತೆಯಾಗಿದ್ದು, ಈ ಹಳೆಯದಾದ ವಿಗ್ರಹದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಆನ್‌ಲೈನ್ ಪೇಮೆಂಟ್​​​ಗಾಗಿ ನಾವು ಈಗ ಬಳಸುತ್ತಿರುವ ಅದೇ ಕ್ಯೂಆರ್ ಕೋಡ್ ರೀತಿ ಇರುವುದನ್ನು ಫೋಟೋದಲ್ಲಿ ಕಾಣಬಹುದು.

ಇಂದು ನಾವು ಬಳಸುವ ಕ್ಯೂಆರ್ ಕೋಡ್ ತಂತ್ರಜ್ಞಾನವು 3000 ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿ ಇತ್ತೇ ಎಂಬ ಸಾಕಷ್ಟು ಗೊಂದಲಗಳು ಇದೀಗಾ ನೆಟ್ಟಿಗರಲ್ಲಿ ಹುಟ್ಟಿಕೊಂಡಿದೆ. ಯಾಕೆಂದರೆ ಸುಮಾರು 3000 ವರ್ಷಗಳಷ್ಟು ಹಳೆಯದಾದ ವಿಗ್ರಹವೊಂದರ ತಲೆಯ ಭಾಗದಲ್ಲಿ ಕ್ಯೂಆರ್ ಕೋಡ್​​ನಂತಹ ಆಕೃತಿ ಪತ್ತೆಯಾಗಿದೆ.

ಈ ವಿಗ್ರಹದ ಫೋಟೋವನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಈ ಫೋಟೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಗ್ರಹವು ಅಮೆರಿಕದ ಪ್ರಾಚೀನ ನಾಗರೀಕತೆಯಗಿಂತಲೂ ಹಿಂದಿನದ್ದು ಎಂದು ಪರಿಗಣಿಸಲಾಗಿದೆ. ಈ ಪುರಾತನ ಪ್ರತಿಮೆಯು ಸಾಮಾನ್ಯ ಪ್ರತಿಮೆಗಳಿಗಿಂತ ವಿಭಿನ್ನ ಮತ್ತು ವಿಚಿತ್ರವಾಗಿದೆ.

ಯಾಕೆಂದರೆ ಪ್ರತಿಮೆಯ ತಲೆಯ ಬದಲಿಗೆ ನಾವೀಗ ಆನ್‌ಲೈನ್ ಪೇಮೆಂಟ್​​​ಗಾಗಿ ಬಳಸುತ್ತಿರುವ ಕ್ಯೂಆರ್ ಕೋಡ್ ರೀತಿಯಲ್ಲಿ ಕೆತ್ತಲಾಗಿದೆ. ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಮಾಯಾ ನಾಗರಿಕತೆಯು ಕೆಲವು ಪ್ರಮುಖ ಕಾರ್ಯಗಳಿಗೆ ಇಂತಹ ತಂತ್ರಜ್ಞಾನವನ್ನು ಬಳಸಿರಬಹುದು ಎಂದು ಜನರು ಹೇಳುತ್ತಿದ್ದಾರೆ.

ವೈರಲ್ ಆಗುತ್ತಿರುವ ಫೋಟೋ ನಿಜಾನೋ..? ಸುಳ್ಳೋ..?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ನಿಜವೋ? ಸುಳ್ಳೋ ಎಂದು ಇನ್ನೂ ತಿಳಿದಿಲ್ಲ. ಆದರೆ ಈ ವಿಚಿತ್ರ ವಿಗ್ರಹದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನು ಇತ್ತೀಚೆಗಷ್ಟೇ ‘ಮಿಸ್ಟೀರಿಯಸ್ ವರ್ಲ್ಡ್ ‘ ಎಂಬ ಫೇಸ್ ಬುಕ್ ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದು, 31ಸಾವಿರಕ್ಕೂ ಹೆಚ್ಚು ಲೈಕುಗಳನ್ನು ಪಡೆದುಕೊಂಡಿದೆ. ಸಾವಿರಾರು ಫೇಸ್​ಬುಕ್​​​​ ಬಳಕೆದಾರರು ಬಗೆಬಗೆಯಾಗಿ ಕಾಮೆಂಟ್​​​​ ಸೆಕ್ಷನ್​​ನಲ್ಲಿ ಬರೆದುಕೊಂಡಿದ್ದಾರೆ.