ಕೂದಲು ಆರೈಕೆ ಟಿಪ್ಸ್ ಕೊಟ್ಟು ಈ ಮಹಿಳೆ ಗಳಿಸಿದ ಆದಾಯ ಎಷ್ಟು ಗೊತ್ತೇ? – ದುಡ್ಡು ಮಾಡೋಕೆ ಇವಳಿಂದ ಕಲೀಬೇಕು ನೋಡಿ…!!

ಕೂದಲು ಆರೈಕೆ ಟಿಪ್ಸ್ ಕೊಟ್ಟು ಈ ಮಹಿಳೆ ಗಳಿಸಿದ ಆದಾಯ ಎಷ್ಟು ಗೊತ್ತೇ? – ದುಡ್ಡು ಮಾಡೋಕೆ ಇವಳಿಂದ ಕಲೀಬೇಕು ನೋಡಿ…!!

ನ್ಯೂಸ್ ಆ್ಯರೋ : ಸಾಮಾಜಿಕ ಮಾಧ್ಯಮಗಳು ಸಾಮಾನ್ಯ ಜನರಿಗೂ ಇತ್ತೀಚೆಗೆ ಆದಾಯ ಗಳಿಸಲು ದಾರಿ ಮಾಡಿಕೊಟ್ಟಿದೆ. ಇದರಿಂದಲೇ ಹಲವಾರು ಮಂದಿ ಸ್ಟಾರ್ ಗಳಾಗಿದ್ದಾರೆ.

ನಾವು ಹಾಕುವ ಒಂದು ಒಳ್ಳೆಯ ವಿಡಿಯೋ, ಫೋಟೋ ಗಳಿಗೆ ಗುರುತು ಪರಿಚಯವಿಲ್ಲದವರೂ ನೀಡುವ ಲೈಕ್, ಕಾಮೆಂಟ್ ಗಳು ಕೇವಲ ನಮ್ಮ ಜನಪ್ರಿಯತೆ ಮಾತ್ರ ಹೆಚ್ಚಿಸೋದಿಲ್ಲ, ಗಳಿಕೆಗೂ ದಾರಿಮಾಡಿಕೊಡುತ್ತವೆ. ಈ ನಿಟ್ಟಿನಲ್ಲಿ ಇವತ್ತು ಯುಟ್ಯೂಬ್, ಇನ್ ಸ್ಟಾಗ್ರಾಮ್ ಮೂಲಕ ಸುಲಭವಾಗಿ ಪ್ರತಿಯೊಬ್ಬರೂ ಆದಾಯ ಗಳಿಸಬಹುದು.

ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರೂ ಇದರಲ್ಲಿ ರೀಲ್ಸ್ ಗಳನ್ನು ಹಾಕಿ ಪ್ರತಿ ತಿಂಗಳು ನಲವತ್ತರಿಂದ ಐವತ್ತು ಸಾವಿರ ರೂಪಾಯಿ ಆದಾಯಗಳಿಸುವವರೂ ಇದ್ದಾರೆ. ಇಂಥವರಲ್ಲಿ ಸ್ಕಾಟಿಷ್ ಮಹಿಳೆ ಕೂಡ ಒಬ್ಬರು.

ವಿಭಿನ್ನ ವಿಷಯಗಳನ್ನು ವಿಡಿಯೋ ಮಾಡಿ ಹಾಕಿ ಜನರ ಗಮನ ಸೆಳೆಯುವಲ್ಲಿ ಯಶಸ್ಸಿಯಾಗಿರುವ ಈ ಮಹಿಳೆ ತಿಂಗಳಿಗೆ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಈಕೆಯ ಹೆಸರು ಜಿಯಾ ಒಶೌಗ್ನೆಸ್ಸಿ. ಇತ್ತೀಚಿಗೆ ಈಕೆ ತನ್ನ ಕೂದಲು ತೊಳೆಯುವ ವೀಡಿಯೊ ವೊಂದನ್ನು ಅಪ್ಲೋಡ್ ಮಾಡಿ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾಳೆ ಎಂದರೆ ನಂಬಲೇಬೇಕು.

2021ರಲ್ಲಿ ಟಿಕ್‌ಟಾಕ್‌ನಲ್ಲಿ ವೀಡಿಯೊ ಮಾಡಿ ಹಂಚಿಕೊಳ್ಳಲು ಪ್ರಾರಂಭಿಸಿದ ಜಿಯಾ ಒಶೌಗ್ನೆಸ್ಸಿ ವಯಸ್ಸು 30. ಕೂದಲಿನ ರಕ್ಷಣೆ ಮಾಡುವುದು ಹೇಗೆ ಎನ್ನುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಟಿಕ್ ಟಾಕ್ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಜಿಯಾ ಒಶೌಗ್ನೆಸ್ಸಿ ಜನಪ್ರಿಯತೆ ಹೆಚ್ಚಾಯಿತು. ಜಿಯಾಸ್ ಬೌಲ್ ಮೆಥಡ್ ಎಂಬ ಹೆಸರಿನ ಅವಳ ಆರಂಭಿಕ ವೀಡಿಯೊಗಳು 35 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.

ಇಬ್ಬರು ಮಕ್ಕಳ ತಾಯಿಯಾಗಿರುವ ಜಿಯಾ ಕೆಲಸ ಬಿಟ್ಟು ಬಿಡುವಿನ ಸಮಯದಲ್ಲಿ ಟಿಕ್ ಟಾಕ್ ವಿಡಿಯೋ ರಚನೆ ಮಾಡಿ ಅದನ್ನೇ ಫುಲ್ ಟೈಂ ಉದ್ಯೋಗವನ್ನಾಗಿ ಮಾಡಿಕೊಂಡಳು. ಈಗ ಈ ವಿಡಿಯೋಗಳೇ ಜಿಯಾ ಪಾಲಿಗೆ ಸಾಕಷ್ಟು ಆದಾಯವನ್ನು ತಂದುಕೊಡುತ್ತಿದೆ.

ಸಾಮಾಜಿಕ ಜಾಲತಾಣದಿಂದ ಬಂದ ಆದಾಯದಿಂದ ಆಕೆಯ ಮೇಲಿದ್ದ ಎಂಟು ಲಕ್ಷದ ಸಾಲವೆಲ್ಲ ಮರು ಪಾವತಿ ಮಾಡಿ ಕಳೆದ ವರ್ಷವಷ್ಟೇ ಸ್ವಂತ ಮನೆಯನ್ನು ಖರೀದಿಸಿದ್ದಾಳೆ. ಇದರ ಅಂದಾಜು ಬೆಲೆ 1.8 ಕೋಟಿ ರೂಪಾಯಿ. ಈ ಹಣವೆಲ್ಲ ಸಾಮಾಜಿಕ ಜಾಲತಾಣದಿಂದಲೇ ಬಂದಿದ್ದು ಎನ್ನುತ್ತಾಳೆ ಜಿಯಾ.

ಜಿಯಾ ತಮ್ಮ ಒಂದೇ ವಿಡಿಯೋದಿಂದ ಸಾಕಷ್ಟು ಸಂಪಾದನೆ ಮಾಡುತ್ತಾಳೆ. ಅದರಲ್ಲಿ ಅತೀ ಹೆಚ್ಚು ಎಂದರೆ ನಾಲ್ಕು ಲಕ್ಷ ರೂಪಾಯಿ. ಇದಕ್ಕಾಗಿ ಆಕೆ ಕೇವಲ ಒಂದು ಗಂಟೆ ತೆಗೆದುಕೊಂಡಿದ್ದಾಳೆ.

ಒಟ್ಟಿನಲ್ಲಿ ತಮ್ಮ ಬುದ್ಧಿಮತ್ತೆಯನ್ನು ಸರಿಯಾಗಿ ಬಳಸಿಕೊಂಡರೆ ಸಾಮಾಜಿಕ ಜಾಲತಾಣದಲ್ಲಿ ಕೇವಲ ಜನಪ್ರಿಯತೆ ಮಾತ್ರವಲ್ಲ ಲಕ್ಷಾಂತರ ರೂಪಾಯಿ ಆದಾಯವನ್ನೂ ಗಳಿಸಬಹುದು ಎನ್ನುತ್ತಾಳೆ ಜಿಯಾ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *