
ರಾತ್ರೋರಾತ್ರಿ ಲಕ್ಷಾಧಿಪತಿಯಾದ ಬಡ ಮೀನುಗಾರ..!! – ಈತನಿಗೆ ಸಿಕ್ಕ ಮೀನು ಸೇಲ್ ಆಗಿದ್ದು ಎಷ್ಟು ಲಕ್ಷಕ್ಕೆ ಗೊತ್ತಾ?
- ವೈರಲ್ ನ್ಯೂಸ್
- November 11, 2023
- No Comment
- 91
ನ್ಯೂಸ್ ಆ್ಯರೋ : ದೇಶ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದು, ಜನರು ಒಂದು ಹೊತ್ತಿನ ಅನ್ನಕ್ಕೂ ಪರದಾಡುತ್ತಿದ್ದಾರೆ ಮೀನುಗಾರನೊಬ್ಬನಿಗೆ ನಿಧಿ ಸಿಕ್ಕಿದೆ.
ಇದು ಕಥೆಯಲ್ಲ. ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ನಡೆದಿರುವ ಘಟನೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಅದರಿಂದ ಹೊರಬರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಹಲವು ಪ್ರಯತ್ನಗಳಲ್ಲಿ ಸೋತಿದೆ. ಈ ನಡುವೆ ದೇಶದ ಮೀನುಗಾರನೊಬ್ಬನ ಅದೃಷ್ಟ ಖುಲಾಯಿಸಿದೆ. ಇದರಿಂದ ಆತ ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾನೆ.
ಕರಾಚಿಯ ಮೀನುಗಾರನೊಬ್ಬನಿಗೆ ಬಲು ಅಪರೂಪದ ಮೀನೊಂದು ಸಿಕ್ಕಿದೆ. ಹಲವು ಔಷಧೀಯ ಗುಣವುಳ್ಳ ಈ ಮೀನಿನಿಂದಾಗಿ ಆತ ಲಕ್ಷಾಧಿಪತಿಯಾಗಿದ್ದಾನೆ.
ಇಬ್ರಾಹಿಂ ಹೈದರಿ ಮೀನುಗಾರಿಕಾ ಗ್ರಾಮದಲ್ಲಿ ವಾಸ ಮಾಡುವ ಹಾಜಿ ಬಲೋಚ್ ಎಂಬ ಮೀನುಗಾರನೇ ಈ ಅದೃಷ್ಟವಂತ. ಅವನಿಗೆ ಅರಬ್ಬಿ ಸಮುದ್ರದದಲ್ಲಿ ಗೋಲ್ಡನ್ ಫಿಶ್ ಅಥವಾ ಸೋವಾ ಫಿಶ್ ಎಂದು ಕರೆಯಲ್ಪಡುವ ಮೀನೊಂದು ಸಿಕ್ಕಿದೆ. ಈ ಮೀನು ಕರಾಚಿ ಬಂದರಿನಲ್ಲಿ ಸುಮಾರು 70 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ ಎಂದು ಪಾಕಿಸ್ತಾನದ ಮೀನುಗಾರರ ಸಂಘದ ಮುಬಾರಕ್ ಖಾನ್ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಹೆಚ್ಚು ಬೆಲೆಬಾಳುವ ಮತ್ತು ಅಪರೂಪದ ಮೀನೆಂದು ಪರಿಗಣಿಸಿರುವ ಸೋವಾ ಮೀನಿನ ಹೊಟ್ಟೆಯಲ್ಲಿರುವ ಪದಾರ್ಥಗಳಿಂದ ಹಲವು ರೋಗಗಳನ್ನು ಗುಣಪಡಿಸುವ ಔಷಧೀಯ ಗುಣವಿದೆ ಎನ್ನಲಾಗುತ್ತದೆ. ಈ ಮೀನಿನಲ್ಲಿರುವ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸೆಯಲ್ಲೂ ಬಳಸಲಾಗುತ್ತದೆ. ಈ ಮೀನು ಸಾಮಾನ್ಯವಾಗಿ 20 ರಿಂದ 40 ಕೆ.ಜಿ. ಇರುತ್ತದೆ 1.5 ಮೀಟರ್ ಉದ್ದ ಬೆಳೆಯುತ್ತವೆ.