
ಮಿಕ್ಸಿ ಕೆಟ್ಟು ಹೋದ್ರೆ ಇನ್ಮುಂದೆ ನೋ ಟೆನ್ಶನ್..! – ಈ ವೀಡಿಯೋ ನೋಡಿ ಹೊಸ ಐಡಿಯಾ ಇಲ್ಲಿದೆ…
- ವೈರಲ್ ನ್ಯೂಸ್
- November 20, 2023
- No Comment
- 75
ನ್ಯೂಸ್ ಆ್ಯರೋ : ಮನುಷ್ಯ ಸಂಘಜೀವಿ ಹೇಗೋ ಹಾಗೆಯೇ ಬುದ್ಧಿಜೀವಿ ಕೂಡಾ. ಪ್ರಪಂಚ ಮುಂದುವರೆಯುತ್ತಾ ಹೋದಂತೆ ಮಾನವನ ಬುದ್ಧಿಮತ್ತೆಯೂ ಚುರುಕಾಗುತ್ತಾ ಹೋಗುತ್ತಿದೆ. ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಇವತ್ತು ವಿಜ್ಞಾನಿಗಳೇ. ಹೊಸ ಹೊಸ ಆವಿಷ್ಕಾರವನ್ನು ಮಾಡುತ್ತಲೇ ಇರುತ್ತಾರೆ. ಅದಕ್ಕೆ ಈ ವೀಡಿಯೋ ಕೂಡಾ ಜ್ವಲಂತ ಸಾಕ್ಷಿ.
ವೀಡಿಯೋದಲ್ಲಿ ಏನಿದೆ…?
ಈ ವೀಡಿಯೊವನ್ನು ಸರಿಯಾಗಿ ಗಮನಿಸಿದರೆ ಇದರಲ್ಲಿ ವ್ಯಕ್ತಿಯೊಬ್ಬ ಮಿಕ್ಸಿ ಜಾರ್ ಗೆ ಜ್ಯೂಸ್ ಮಾಡಲು ಹಣ್ಣುಗಳನ್ನು ಹಾಕಿದ್ದಾನೆ. ಆದರೆ ಆತ ಜ್ಯೂಸ್ ಮಾಡಲು ಮಿಕ್ಸಿ ಬಳಸುವ ಬದಲು ಡ್ರಿಲ್ಲಿಂಗ್ ಮಿಷಿನ್ ಬಳಸಿದ್ದಾನೆ.
ಇಲ್ಲಿ ಆತ ಮಿಕ್ಸಿ ಜಾರನ್ನು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಡ್ರಿಲ್ಲಿಂಗ್ ಮಿಷಿನ್ ಹಿಡಿದು ಮಿಕ್ಸಿ ಜಾರಿಗೆ ಸಿಕ್ಕಿಸಿ ಡ್ರಿಲ್ ಮೆಷಿನ್ ಆನ್ ಮಾಡಿದ್ದಾನೆ. ಈ ವೇಳೆ ಮಿಕ್ಸಿ ಜಾರಿನಲ್ಲಿದ್ದ ಹಣ್ಣುಗಳು ಜ್ಯೂಸ್ ಆಗಿ ಮಾರ್ಪಟ್ಟಿದೆ.
ಈ ವೀಡಿಯೋ ಎಷ್ಟು ವೀಕ್ಷಣೆ ಪಡೆದಿದೆ..?
ಈ ವೀಡಿಯೋ ಇದೀಗ ಇನ್ಸ್ಟ್ರಾಗ್ರಾಂನಲ್ಲಿ ಹರಿದಾಡುತ್ತಿದ್ದು ಕೇವಲ ಆರು ದಿನದಲ್ಲಿ 21ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಕೂಡಾ ಹಾಕಿದ್ದಾರೆ.
ಈ ವೀಡಿಯೋ ನೋಡ್ಬೇಕಾದ್ರೆ ಕೆಲವರಿಗೆ ಹಾಸ್ಯಾಸ್ಪದ ಎನಿಸಬಹುದು ಅಥವಾ ಇನ್ನು ಕೆಲವರಿಗೆ ಹೀಗೂ ಮಾಡಬಹುದಾ ಎಂಬ ಪ್ರಶ್ನೆ ಮಾಡಬಹುದು. ಆದರೆ ಇನ್ಮುಂದೆ ಒಂದು ವೇಳೆ ನಿಮ್ಮ ಮನೆಯಲ್ಲೂ ಮಿಕ್ಸಿ ಹಾಳಾಗಿದ್ರೆ ಯೋಚಿಸಬೇಕಿಲ್ಲ.