ಈ ನಾಯಿ ವರ್ಷಕ್ಕೆ 8 ಕೋಟಿ ರೂಪಾಯಿ ಗಳಿಸುತ್ತೆ..! – ಸಿವಿಲ್ ಇಂಜಿನಿಯರ್ ಮನೆ ನಾಯಿಯ ಏನದು ರಿಯಲ್ ಸ್ಟೋರಿ?

ಈ ನಾಯಿ ವರ್ಷಕ್ಕೆ 8 ಕೋಟಿ ರೂಪಾಯಿ ಗಳಿಸುತ್ತೆ..! – ಸಿವಿಲ್ ಇಂಜಿನಿಯರ್ ಮನೆ ನಾಯಿಯ ಏನದು ರಿಯಲ್ ಸ್ಟೋರಿ?

ನ್ಯೂಸ್ ಆ್ಯರೋ‌ : ವಾಷಿಂಗ್ಟನ್ ನಲ್ಲಿ ಮಹಿಳೆಯೊಬ್ಬರು ನಾಯಿಯನ್ನು ನೋಡಿಕೊಳ್ಳುವುದಕ್ಕಾಗಿ ಸಿವಿಲ್ ಎಂಜಿನಿಯರ್ ಕೆಲಸ ತೊರೆದಿದ್ದಾರೆ. ಅರೆ..! ಅವರ್ಯಾಕೆ ಇಂತಹ ವಿಚಿತ್ರ ನಿರ್ಧಾರಕ್ಕೆ ಬಂದಿದ್ದಾರೆ ಎಂದುಕೊಂಡಿದ್ದೀರಾ? ನಿಮ್ಮ ಊಹೆ ತಪ್ಪು. ಯಾಕೆಂದರೆ ಈ ನಾಯಿ ವರ್ಷಕ್ಕೆ 8 ಕೋಟಿ ರೂ.ಗಿಂತ ಅಧಿಕ ಸಂಪಾದಿಸುತ್ತದೆ..!

ಟಕ್ಕರ್ ಹೆಸರಿನ ಗೋಲ್ಡನ್ ರಿಟ್ರೈವರ್ ತಳಿಯ ನಾಯಿ ಇದಾಗಿದೆ. ಇದು ಯೂ ಟ್ಯೂಬ್ ನಲ್ಲಿ ಪ್ರತಿ 30 ನಿಮಿಷದ ಪ್ರೀ ರೋಲ್ ಗೆ 40 ಸಾವಿರ ಡಾಲರ್(33 ಲಕ್ಷ ರೂ.)ಸಂಪಾದಿಸುತ್ತದೆ. ಇನ್ ಸ್ಟಾಗ್ರಾಮ್ ನಲ್ಲಿ ಪ್ರತಿ 3ರಿಂದ 8 ಸ್ಟೋರಿಗಳಿಗೆ 20 ಸಾವಿರ ಡಾಲರ್(16.54 ಲಕ್ಷ ರೂ.)ಗಳಿಸುತ್ತಿದೆ ಎಂದು ಟಕ್ಕರ್ ನ ಮಾಲಕ ಕಟ್ರ್ನಿ ಬಡ್ಜಿನ್ ತಿಳಿಸಿದ್ದಾರೆ.

ಕಟ್ರ್ನಿ ಬಡ್ಜಿನ್ ನ ಪತ್ನಿ ಮೈಕ್ ಸಿವಿಲ್ ಎಂಜಿನಿಯರ್ ಆಗಿದ್ದರು. ಆದರೆ ಆಕೆ ತಾನು ಸಾಕುತ್ತಿದ್ದ ಟಕ್ಕರ್ ಮತ್ತು ಟಾಡ್ ನಾಯಿ ಮರಿಗಳನ್ನು ನೋಡಿಕೊಳ್ಳುವ ಸಲುವಾಗಿ ಕೆಲಸ ಬಿಟ್ಟರು. 2018ರ ಜೂನ್ ನಲ್ಲಿ ಟಕ್ಕರ್ 8 ವಾರಗಳ ಪುಟ್ಟ ಮರಿ. ಆಗ ಅದರ ಹೆಸರಿನಲ್ಲಿ ಇನ್ ಸ್ಟಾಗ್ರಾಮ್ ಪುಟವೊಂದನ್ನು ತೆರೆದು ವೀಡಿಯೋ ಅಪ್ ಲೋಡ್ ಮಾಡಲಾಗಿತ್ತು. ಆ ಮೊದಲ ವೀಡಿಯೋ ವೈರಲ್ ಆಗಿ ಫಾಲೋವರ್ಸ್‍ಗಳ ಸಂಖ್ಯೆ ಹೆಚ್ಚಾಯಿತು.

ಇದೀಗ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಟಕ್ಕರ್ ಯೂ ಟ್ಯೂಬ್ ನಲ್ಲಿ 51 ಲಕ್ಷ, ಫೇಸ್ ಬುಕ್ ನಲ್ಲಿ 43 ಲಕ್ಷ, ಇನ್ ಸ್ಟಾಗ್ರಾಮ್ ನಲ್ಲಿ 34 ಲಕ್ಷ ಹಾಗೂ ಟ್ವಿಟರ್ ನಲ್ಲಿ 62 ಸಾವಿರ ಫಾಲೋವರ್ಸ್ ಹೊಂದಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *