ಬೀದಿಗೆ ಬಿದ್ದ ಕಚ್ಚಾ ಬಾದಾಮ್ ಹಾಡಿನ ವೈರಲ್ ಸಿಂಗರ್ – ಅಷ್ಟೆಲ್ಲಾ ಮಿಂಚಿದ್ರೂ ಹೀಗ್ಯಾಕಾಯ್ತು ಈ ಪ್ರತಿಭೆಗೆ?

ಬೀದಿಗೆ ಬಿದ್ದ ಕಚ್ಚಾ ಬಾದಾಮ್ ಹಾಡಿನ ವೈರಲ್ ಸಿಂಗರ್ – ಅಷ್ಟೆಲ್ಲಾ ಮಿಂಚಿದ್ರೂ ಹೀಗ್ಯಾಕಾಯ್ತು ಈ ಪ್ರತಿಭೆಗೆ?

ನ್ಯೂಸ್ ಆ್ಯರೋ : ಕಚ್ಚಾ ಬಾದಾಮ್‌ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ? ಕೆಲ ತಿಂಗಳ ಹಿಂದೆ ಯಾರ ಮೊಬೈಲ್‌ ನ ವಾಟ್ಸಾಪ್‌ ಸ್ಟೇಟಸ್‌, ಫೇಸ್ಬುಕ್‌ ಸ್ಟೋರಿ, ಯೂಟ್ಯೂಬ್‌ ಹೀಗೆ ಸಾಮಾಜಿಕ ಜಾಲತಾಣದ ಯಾವ ಮೂಲೆ ಮೂಲೆಯೂ ಸೇರಿದಂತೆ ಎಲ್ಲಿ ನೋಡಿದರಲ್ಲಿ ಕಚ್ಚಾ ಬಾದಾಮ್ ಹಾಡಿನದ್ದೇ ಗುನುಗು. ಅಷ್ಟೊಂದು ಫೇಮಸ್‌ ಆಗಿದ್ದ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರನ ಈ ಹಾಡು ಯುವ ಸಮೂಹದಲ್ಲಿ ಬಿರುಗಾಳಿ ಎಬ್ಬಿಸಿ ಎಲ್ಲರ ಮೆಚ್ಚಿನ ಹಾಡಾಗಿ ಪ್ರತಿಯೊಬ್ಬರೂ ಇದನ್ನು ಗುನುಗುವಂತಾಗಿತ್ತು.

ಅಲ್ಲದೇ ಈ ಹಾಡನ್ನು ಬಳಸಿಕೊಂಡು ಸಾಕಷ್ಟು ಸಂಗೀತಾ ಕಂಪನಿಗಳು ಅದಕ್ಕೆ ಹಲವು ರಿಮಿಕ್ಸ್‌ ಮಾಡಿ ಕೋಟ್ಯಾಂತರ ದುಡ್ಡು ಮಾಡಿದ್ದರು. ಆದರೆ ಮೂಲ ಗಾಯಕ ಭುಬನ್‌ ಬಡ್ಯಾಕರ್ ಅವರಿಗೆ ಮಾತ್ರ ಇದರಿಂದ ನಯಾಪೈಸೆಯೂ ಸಿಕ್ಕಲಿಲ್ಲ.

ಇಷ್ಟೆಲ್ಲದರ ಮಧ್ಯೆ ಈ ಹಳ್ಳಿ ಪ್ರತಿಭೆಗೆ ಮತ್ತೆ ಮೋಸವಾಗಿದ್ದು, ತಾನು ವಂಚನೆಗೊಳಗಾಗಿರುವುದಾಗಿ ಸ್ವತಃ ಭುಬನ್ ಬಡ್ಯಾಕರ್ ಹೇಳಿಕೊಂಡಿದ್ದಾರೆ.

ಹೌದು 2021 ರಲ್ಲಿ ಕಚ್ಚಾ ಬಾದಾಮ್‌ ಹಾಡು ವೈರಲ್ ಆಗುವ ಮೊದಲು ಭಿರ್‌ಭೂಮ್ ಮೂಲದ ಉದ್ಯಮಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬರು ‘ಇಂಡಿಯನ್ ಪರ್‌ಫಾರ್ಮಿಂಗ್ ಸೊಸೈಟಿ’ ಹೆಸರಿನಲ್ಲಿ ನನ್ನ ಕಚ್ಚಾ ಬಾದಾಮ್ ಹಾಡು ಮತ್ತು ಟ್ಯೂನ್ ಅನ್ನು ತಮ್ಮದು ಎಂದು ನನ್ನನ್ನು ವಂಚಿಸಿದ್ದಾರೆ ಎಂದು ಬಡ್ಯಾಕರ್ ಆರೋಪಿಸಿದ್ದಾರೆ.

‘ನಾನೀಗ ಆ ಹಾಡನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೋದರೆ ಕಾಪಿರೈಟ್ ಕ್ರೈಮ್ (ಹಕ್ಕು ಸ್ವಾಮ್ಯ) ಬರುತ್ತಿದೆ. ಉದ್ಯಮಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ನನ್ನ ಹಾಡು ಕೇಳಿ 13 ಲಕ್ಷ ನೀಡಿ ಕಾಗದವೊಂದರ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ನನಗೆ ಸರಿಯಾಗಿ ಓದಲು ಬರದಿದ್ದರಿಂದ ಕಾಗದದಲ್ಲಿ ಏನಿತ್ತು ಅನ್ನುವುದು ನನಗೆ ಗೊತ್ತಾಗಿರಲಿಲ್ಲ. ಆದರೆ, ಇದೀಗ ನಾನು ಯೂಟ್ಯೂಬ್‌ನಲ್ಲಿ ಆ ಹಾಡು ಹಾಗೂ ಟ್ಯೂನ್ ಅನ್ನು ಹಾಕಲು ಆಗುತ್ತಿಲ್ಲ’ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹೀಗೆ ಫೇಮಸ್ ಆಗುವುದಕ್ಕೂ ಮೊದಲು ಭುಬನ್‌ ಬಡ್ಯಾಕರ್‌ ಬೀರ್ಭುಮ್ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಗ್ರಾಹಕರನ್ನು ಆಕರ್ಷಿಸಲು ಅವರು ಕಚ್ಚಾ ಬಾದಮ್‌ ಹಾಡನ್ನು ಹಾಡುತ್ತಿದ್ದರು. ಆದರೆ ಈ ಹಾಡಿನ ಟ್ಯೂನ್‌ನಿಂದ ಆಕರ್ಷಿತರಾದ ಯಾರೋ ಒಬ್ಬರು ಇವರು ಹಾಡುತ್ತಿರುವುದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಇದಾದ ಬಳಿಕ ಹಾಡು ಸಾಕಷ್ಟು ವೈರಲ್ ಆಗಿತ್ತು. ಜೊತೆಗೆ ಇದರ ರೀಮಿಕ್ಸ್ ಅನ್ನು ಮಾಡಲಾಯಿತು. ನಂತರ ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಯಿತು. ಈ ವಿಡಿಯೋವನ್ನು 50 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಇನ್ನೂ ಗೋಧೂಳಿಬೆಲೆ ಎಂಬ ಸಂಗೀತಾ ಸಂಸ್ಥೆಯೊಂದು ಕಚ್ಚಾ ಬಾದಾಮ್‌ನ ಮೂಲ ಹಾಡುಗಾರನನ್ನು ಗುರುತಿಸಿ ಮೂರು ಲಕ್ಷ ನಗದು ಹಣವನ್ನು ಅವರಿಗೆ ಬಹುಮಾನವಾಗಿ ನೀಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *