IND vs AUS 4th TEST : ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಲು ಭಾರತಕ್ಕೆ ಗೆಲುವು ಅನಿವಾರ್ಯ – ಮಿಂಚಬೇಕಿದೆ ಸ್ಟಾರ್ ಬ್ಯಾಟರ್ ಗಳು..!!

IND vs AUS 4th TEST : ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಲು ಭಾರತಕ್ಕೆ ಗೆಲುವು ಅನಿವಾರ್ಯ – ಮಿಂಚಬೇಕಿದೆ ಸ್ಟಾರ್ ಬ್ಯಾಟರ್ ಗಳು..!!

ನ್ಯೂಸ್ ಆ್ಯರೋ : ಸತತ ಎರಡನೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಕನಸು ಕಾಣುತ್ತಿರುವ ಟೀಮ್ ಇಂಡಿಯಾ ನಿರ್ಣಾಯಕ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದೆ. ಈ ಸರಣಿಯನ್ನು ಭಾರತ ತಂಡ 3-1 ಅಂತರದಿಂದ ಗೆದ್ದರೆ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಕದನದ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ. ಒಂದು ವೇಳೆ ಭಾರತ ಸೋತರೆ ಶ್ರೀಲಂಕಾದ ಸೋಲಿನ ಜಪ ಮಾಡಬೇಕಾಗುತ್ತದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಸ್ಟ್ರೇಲಿಯಾ ಕಳೆದ ಪಂದ್ಯದ ತಂಡವನ್ನೇ ಕಣಕ್ಕಿಳಿಸಿದರೆ, ಭಾರತ ತಂಡ ಸಿರಾಜ್ ಅವರಿಗೆ ವಿಶ್ರಾಂತಿ ನೀಡಿದ್ದು, ಶಮಿ ಅವರನ್ನು ಆಡಿಸುತ್ತಿದೆ.

ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್​ನಲ್ಲಿ ಆಸರೆಯಾಬೇಕಿದೆ. ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಗಿಲ್, ಭರತ್, ಶ್ರೇಯಸ್ ಅಯ್ಯರ್ ನೆಟ್​ನಲ್ಲಿ ಸಾಕಷ್ಟು ಅಭ್ಯಾಸ ಮಾಡಿದ್ದಾರೆ. ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಇವರ ಜೊತೆ ಸುದೀರ್ಘವಾದ ಸೆಷನ್ ನಡೆಸಿದ್ದರು. ಆಲ್ರೌಂಡರ್​ಗಳಾದ ಜಡೇಜಾ, ಅಶ್ವಿನ್ ಹಾಗೂ ಅಕ್ಷರ್ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

ಅಹ್ಮದಾಬಾದ್‌ ಭಾರತದ ಏಕೈಕ ಫಾಸ್ಟ್‌ ಟ್ರ್ಯಾಕ್‌ ಎಂಬ ಖ್ಯಾತಿ ಪಡೆದಿದ್ದ ಅಂಕಣ. ಇಲ್ಲಿ 1983ರಿಂದ ಮೊದಲ್ಗೊಂಡು ಈವರೆಗೆ 14 ಟೆಸ್ಟ್‌ಗಳನ್ನು ಆಡಲಾಗಿದೆ. ಭಾರತ ಆರನ್ನು ಗೆದ್ದಿದೆ, ಎರಡರಲ್ಲಿ ಸೋತಿದೆ, ಉಳಿದ 6 ಟೆಸ್ಟ್‌ ಡ್ರಾಗೊಂಡಿದೆ. 1983ರಲ್ಲಿ ಇಲ್ಲಿ ಆಡಲಾದ ಪ್ರಥಮ ಪಂದ್ಯದಲ್ಲೇ ವೆಸ್ಟ್‌ ಇಂಡೀಸ್‌ 138 ರನ್ನುಗಳಿಂದ ಭಾರತವನ್ನು ಸೋಲಿಸಿತ್ತು. ನಾಯಕ ಕಪಿಲ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ 83 ರನ್ನಿಗೆ 9 ವಿಕೆಟ್‌ ಉಡಾಯಿಸಿದ್ದು ಇದೇ ಪಂದ್ಯದಲ್ಲಿ. ನವಜೋತ್‌ ಸಿಂಗ್‌ ಸಿದ್ಧು ಅವರ ಪದಾರ್ಪಣ ಪಂದ್ಯವೂ ಇದಾಗಿತ್ತು. ಭಾರತದ ಮತ್ತೊಂದು ಸೋಲು ಎದುರಾದದ್ದು ದಕ್ಷಿಣ ಆಫ್ರಿಕಾ ವಿರುದ್ಧ, 2008ರಲ್ಲಿ. ಅಂತರ ಇನ್ನಿಂಗ್ಸ್‌ ಮತ್ತು 90 ರನ್‌.

1983ರಿಂದ 2012ರ ತನಕ ಇಲ್ಲಿ ನಿರಂತರ ಟೆಸ್ಟ್‌ ಪಂದ್ಯಗಳು ನಡೆಯುತ್ತ ಬಂದವು. ಬಳಿಕ 9 ವರ್ಷಗಳ ದೊಡ್ಡದೊಂದು ಬ್ರೇಕ್‌ ಬಿತ್ತು. ಸ್ಟೇಡಿಯಂ ನವೀಕೃತಗೊಂಡು “ನರೇಂದ್ರ ಮೋದಿ ಸ್ಟೇಡಿಯಂ’ ಎಂದು ನಾಮಕರಣಗೊಂಡಿತು. ಬಳಿಕ 2021ರಲ್ಲಿ ಇಂಗ್ಲೆಂಡ್‌ ವಿರುದ್ಧ 2 ಟೆಸ್ಟ್‌ ನಡೆಯಿತು. ಮೊದಲನೆಯದು ಡೇ ನೈಟ್‌ ಟೆಸ್ಟ್‌. ಇದು ಎರಡೇ ದಿನದಲ್ಲಿ ಮುಗಿಯಿತು. ಫ‌ಲಿತಾಂಶ, ಭಾರತಕ್ಕೆ 10 ವಿಕೆಟ್‌ ಗೆಲುವು. ಅನಂತರದ ಟೆಸ್ಟ್‌ ಮೂರನೇ ದಿನಕ್ಕೆ ಕಾಲಿಟ್ಟಿತು. ಇದನ್ನು ಭಾರತ ಇನ್ನಿಂಗ್ಸ್‌ ಹಾಗೂ 25 ರನ್‌ ಅಂತರದಿಂದ ತನ್ನದಾಗಿಸಿಕೊಂಡಿತ್ತು.

ತಂಡಗಳು ಇಂತಿವೆ..
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೆ.ಎಸ್. ಭರತ್, ಆರ್.ಅಶ್ವಿನ್, ಅಕ್ಸರ್ ಪಟೇಲ್, ಮೊಹ್ಮದ್ ಶಮಿ, ಉಮೇಶ್ ಯಾದವ್.

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್‍ಕಂಬ್, ಕ್ಯಾಮರೊನ್ ಗ್ರೀನ್, ಆಯಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫ, ನಥೇನ್ ಲಯನ್, ಮ್ಯಾಥೀವ್ ಕುಹ್ನೆಮಾನ್.

Related post

ದಿನ‌ ಭವಿಷ್ಯ 29-03-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-03-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ನೀವು ದೀರ್ಘಕಾಲದ ಆಧಾರದ ಮೇಲೆ ಹೂಡಿಕೆ ಮಾಡಿದಲ್ಲಿ ಗಣನೀಯ ಲಾಭ ಮಾಡುತ್ತೀರಿ. ನೀವು…
ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…

Leave a Reply

Your email address will not be published. Required fields are marked *