ಅಂದಿನ ನಿತ್ಯಾನಂದ ರಂಜಿತಾ ಪ್ರಣಯ ಪ್ರಸಂಗದ ಹಿನ್ನೆಲೆ ಗೊತ್ತಾ? – ಗಂಡನನ್ನು ಬಿಟ್ಟಾಕೆ ನಿತ್ಯಾನಂದನ ಬುಟ್ಟಿಗೆ ಬಿದ್ದಿದ್ದು ಹೇಗೆ?

ಅಂದಿನ ನಿತ್ಯಾನಂದ ರಂಜಿತಾ ಪ್ರಣಯ ಪ್ರಸಂಗದ ಹಿನ್ನೆಲೆ ಗೊತ್ತಾ? – ಗಂಡನನ್ನು ಬಿಟ್ಟಾಕೆ ನಿತ್ಯಾನಂದನ ಬುಟ್ಟಿಗೆ ಬಿದ್ದಿದ್ದು ಹೇಗೆ?

ನ್ಯೂಸ್ ಆ್ಯರೋ‌ : ದಶಕದ ಹಿಂದೆ ನಿತ್ಯಾನಂದ ರಾಸಲೀಲೆ ಪ್ರಕರಣ ಭಾರೀ ಸದ್ದು ಮಾಡಿತ್ತು. ನಿತ್ಯಾನಂದ ಹಾಗೂ ನಟಿ ರಂಜಿತಾ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ಸಿಡಿಯೊಂದು ಕೋಲಾಹಲ ಸೃಷ್ಟಿಸಿತ್ತು. ಇದರಿಂದ ನಿತ್ಯಾನಂದ ಸ್ವಾಮಿ ಜೈಲುವಾಸ ಕೂಡ ಅನುಭವಿಸಬೇಕಾಯಿತು. ಬಳಿಕ ನಿತ್ಯಾನಂದ ಸ್ವಾಮಿ ಎಂದಿನಂತೆ ತಮ್ಮ ಕಾಯಕ ಮುಂದುವರಿಸಿದರು. ಈಗಲೂ ರಂಜಿತಾ ಮತ್ತು ಆಕೆಯ ಹೋದರಿ ನಿರ್ಮಲಾ ನಿತ್ಯಾನಂದ ಸ್ವಾಮಿಯ ಜೊತೆಗೆ ಇದ್ದಾರೆ. ಅವರು ಹೇಗೆ ನಿತ್ಯಾನಂದನ ಆಶ್ರಮಕ್ಕೆ ಹತ್ತಿರವಾದರು ಎನ್ನುವುದನ್ನು ಅವರ ತಂದೆ, ಹಿರಿಯ ನಟ ಅಶೋಕ್ ಕುಮಾರ್ ವಿವರಿಸಿದ್ದಾರೆ.

“ದೊಡ್ಡ ಮಗಳು ನಿರ್ಮಲಾಳ ಮದುವೆಯನ್ನು ಸೋದರಳಿಯನ ಜೊತೆ ಮಾಡಿದ್ದೆ. ಇಬ್ಬರು ಅಮೆರಿಕಾದಲ್ಲಿ ಸೆಟ್ಲ್ ಆಗಿದ್ದರು. ರಂಜಿತಾ ಲವ್ ಮ್ಯಾರೇಜ್ ಆಗಿದ್ದಳು. ಅವರಿಬ್ಬರು ರಾಜಸ್ಥಾನದಲ್ಲಿ ವಾಸಿಸುತ್ತಿದ್ದರು. ನಂತರ ಗಂಡನಿಗೆ ಡಿವೋರ್ಸ್ ಕೊಟ್ಟು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಳು. ಅಲ್ಲಿಯವರೆಗೂ ರಂಜಿತಾಗೆ ದೇವರ ಮೇಲೆ ಭಕ್ತಿ ಇರಲಿಲ್ಲ” ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.

“ರಂಜಿತಾ ಗರ್ಭಿಣಿಯಾಗಿದ್ದಾಗ ಸರಿಯಾದ ಚಿಕಿತ್ಸೆ ಸಿಗದೇ ಗರ್ಭಕೋಶವನ್ನೆ ತೆಗೆದು ಹಾಕಲಾಯಿತು. ಅದಕ್ಕೂ ಮುನ್ನ ದೇವಸ್ಥಾನಕ್ಕೂ ಹೋಗದ ರಂಜಿತಾಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿತ್ತು. ಇದೇ ಸಮಯದಲ್ಲಿ ಅಮೆರಿಕಾದಲ್ಲಿದ್ದ ಸಹೋದರಿಯನ್ನು ನೋಡಲು ರಂಜಿತಾ ಹೋಗುತ್ತಿದ್ದಳು. ಅದಾಗಲೇ ನಿರ್ಮಲಾ ಅಮೆರಿಕಾದಲ್ಲಿ ನಿತ್ಯಾನಂದನ ಪ್ರವಚನ ಕೇಳಲು ಹೋಗುತ್ತಿದ್ದಳು. ಆಕೆಯ ಜೊತೆ ರಂಜಿತಾ ಕೂಡ ಹೋಗಲು ಆರಂಭಿಸಿದ್ದಳು” ಎಂದು ಅಶೋಕ್ ಕುಮಾರ್ ವಿವರಿಸಿದ್ದಾರೆ.

“ನಾನು ಒಮ್ಮೆ ಆಶ್ರಮಕ್ಕೆ ಹೋಗಿದ್ದೆ. ರಂಜಿತಾ – ನಿರ್ಮಲಾ ಇಬ್ಬರು ಅಲ್ಲೇ ಇದ್ದರು. ನನ್ನನ್ನು ನೋಡುತ್ತಿದ್ದಂತೆ ನಿತ್ಯಾನಂದ “ಬನ್ನಿ ಬನ್ನಿ. ನನಗೆ ತುಂಬಾ ಖುಷಿ ಆಗುತ್ತಿದೆ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ” ಎಂದ. ನಾನು ಆಗ ”ನಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಯಾಕೆ ಇಲ್ಲಿ ಸೇರಿಸಿಕೊಂಡಿದ್ದೀಯಾ, ವಾಪಸ್ ಕಳಿಸು” ಎಂದೆ.

ಅದಕ್ಕೆ ಆತ ” ಬೇಕಿದ್ದರೆ ಕರೆದುಕೊಂಡು ಹೋಗಿ, ನನ್ನದೇನು ಅಭ್ಯಂತರ ಇಲ್ಲ ಎಂದ. ಮಕ್ಕಳ ಬಳಿ ಬನ್ನಿ ಎಂದರೆ, ನಮಗೆ ಮೋಕ್ಷ ಸಿಕ್ಕಿದೆ. ನಾವು ಈಗ ಇಲ್ಲಿ ಆನಂದದಿಂದ ಇದ್ದೇವೆ. ಬಹಳ ಸಂತೋಷವಾಗಿ ಇದ್ದೇವೆ ಎಂದರು. ಎಷ್ಟೆ ಕರೆದರೂ ಬರಲಿಲ್ಲ” ಎಂದು ಅಶೋಕ್ ಕುಮಾರ್ ದುಃಖದಿಂದ ಹೇಳಿದ್ದಾರೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *