
ವಿಜ್ಞಾನದ ಮೂಲ ವೇದಗಳಾಗಿದ್ದರೂ ವಿದೇಶಿಯರಿಗೆ ಕ್ರೆಡಿಟ್ – ಮನಬಿಚ್ಚಿ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್
- ಕೌತುಕ-ವಿಜ್ಞಾನ
- May 26, 2023
- No Comment
- 610
ನ್ಯೂಸ್ ಆ್ಯರೋ : ವಿಜ್ಞಾನದ ಹಲವು ತತ್ವಗಳು ಹಾಗೂ ವಿಷಯಗಳ ಮೂಲ ವೇದಗಳಾಗಿದ್ದರೂ ಅವುಗಳನ್ನು ಪಾಶ್ಚಿಮಾತ್ಯ ಅನ್ವೇಷಣೆಗಳೆಂದು ಬಿಂಬಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಹರ್ಷಿ ಪಣಿಸಿ ಸಂಸ್ಕøತ ಮತ್ತು ವೇದ ವಿವಿಯ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಲ್ಜಿಬ್ರಾ, ಸ್ಕ್ವೇರ್ ರೂಟ್ಸ್, ಆರ್ಕಿಟೆಕ್ಚರ್, ಮೆಟಲರ್ಜಿ, ವಾಯು ಯಾನದ ವಿವರಗಳು ವೇದಗಳಲ್ಲಿ ಉಲ್ಲೇಖವಾಗಿವೆ. ಆದರೆ ಇವೆಲ್ಲ ಯುರೋಪ್ ಮತ್ತು ಅರಬ್ ದೇಶಗಳ ಮೂಲಕ ಸಾಗಿ ಪಾಶ್ಚಿಮಾತ್ಯ ವಿಜ್ಞಾನಿಗಳ ಸಂಶೋಧನೆ ಎಂದು ಕರೆಯಲ್ಪಟ್ಟಿತು ಎಂದು ಹೇಳಿದ್ದಾರೆ.
ಆ ಕಾಲದಲ್ಲಿ ಸೂಕ್ತ ಲಿಪಿಯಿಲ್ಲದ ಸಂಸ್ಕೃತವನ್ನು ಬಳಸಿದ್ದೇ ಇದಕ್ಕೆ ಕಾರಣ. ಬಳಿಕ ಜನರು ಸಂಸ್ಕೃತಕ್ಕಾಗಿ ದೇವನಾಗರಿ ಲಿಪಿ ಬಳಸಲು ಆರಂಭಿಸಿದರು ಎಂದು ವಿವರಿಸಿದ್ದಾರೆ.
ಖಗೋಳ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಏರೋನಾಟಿಕಲ್ ಕ್ಷೇತ್ರದಲ್ಲಿನ ಆವಿಷ್ಕಾರಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ. ಆದರೆ ಅವುಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ ಸೋಮನಾಥ್ ಖಗೋಳ ವಿಜ್ಞಾನದ ಕೃತಿಯಾದ ಸೂರ್ಯ ಸಿದ್ಧಾಂತದ ಉದಾಹರಣೆ ನೀಡಿದರು.