Dhoni cleaned a fan's bike with the shirt he was wearing: Video viral

ಧರಿಸಿರುವ ಟೀಶರ್ಟ್​​ ಅನ್ನೇ ತೆಗೆದು ಅಭಿಮಾನಿಯ ಬೈಕ್​ ಒರೆಸಿದ ಧೋನಿ – ಕ್ಯಾಪ್ಟನ್ ಕೂಲ್ ಹೀಗೆ ಮಾಡಿದ್ಯಾಕೆ?

ನ್ಯೂಸ್ ಆ್ಯರೋ : ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಎಂ.ಎಸ್. ಧೋನಿ ಅವರಿಗೆ ಬೈಕು, ಕಾರುಗಳ ಮೇಲೆ ವಿಶೇಷ ಒಲವು ಇರುವುದು ಎಲ್ಲರಿಗೂ ಗೊತ್ತೇ ಇದೆ. ಯಮಹಾ, ಡುಕಾಟಿ, ಕವಾಸಕಿ ಮೊದಲಾದ ಪ್ರಸಿದ್ಧ ಬ್ರ್ಯಾಂಡ್ ಗಳು ಆಕರ್ಷಕ ಬೈಕ್ ಗಳ ಸಂಗ್ರಹ ಧೋನಿಯವರಲ್ಲಿದೆ.

ಧೋನಿ ಎಲ್ಲಿ ಸಿಕ್ಕಿದರೂ ಸಾಕು ಅವರೊಂದಿಗೆ ಸೆಲ್ಫಿ ಪಡೆಯಲು, ಆಟೋಗ್ರಾಫ್ ಪಡೆಯಲು ಅಭಿಮಾನಿಗಳು ಕಾತರರಾಗಿರುತ್ತಾರೆ. ಇದೀಗ ಅಭಿಮಾನಿಯೊಬ್ಬರಿಗೆ ಆಟೋಗ್ರಾಫ್ ಕೊಟ್ಟು ಧೋನಿ ದೊಡ್ಡ ಸುದ್ದಿ ಮಾಡಿದ್ದಾರೆ.

ಎಂ.ಎಸ್. ಧೋನಿಯು ಅವರ ಅಭಿಮಾನಿಯೊಬ್ಬರಿಗಾಗಿ ಮೋಟಾರ್​ಸೈಕಲ್​ ಮೇಲೆ ತಮ್ಮ ಆಟೋಗ್ರಾಫ್​ ಹಾಕಿದ್ದಾರೆ. ಇದಕ್ಕೂ ಮೊದಲು ಬೈಕಿನ ಮುಂಭಾಗವನ್ನು ತಮ್ಮದೇ ಟೀ ಶರ್ಟ್​ನಿಂದ ಒರೆಸಿದ್ದು, ಬಳಿಕ ಸಹಿ ಹಾಕಿದ್ದಾರೆ. ಆಟೋಗ್ರಾಫ್ ನೀಡಿದ ಬಳಿಕ ಧೋನಿ ಸವಾರನ ಸೀಟಿನಲ್ಲಿ ಕುಳಿತು ಬೈಕ್ ಅನ್ನು ಪರಿಶೀಲಿಸಿದರು. ಬೈಕ್ ಸ್ಟಾರ್ಟ್ ಮಾಡಿ ಎಂಜಿನ್ ನ ಶಬ್ದ ಮಾಡಿದಾಗ ಅವರ ಮೊಗದಲ್ಲಿ ನಗು ಕಾಣಿಸಿದೆ.

ಬೈಕ್ ಗಳಲ್ಲಿ ವಿಶಿಷ್ಟ ಮತ್ತು ಅಪರೂಪದ ಮಾದರಿಗಳನ್ನು ಹೊಂದಿದ್ದರೂ ಧೋನಿ ಯ ಈ ನಡೆ ಸಾಕಷ್ಟು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇದನ್ನು ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.