ಕಾರ್ತಿಕ ಮಾಸದ ಸೋಮವಾರ ಶಿವನನ್ನು ಪೂಜಿಸುವುದು ಹೇಗೆ..? -ಈ ದಿನ ಶಿವ ಪೂಜೆ ಮಾಡುವುದರ ಪ್ರಯೋಜನಗಳು ಹೀಗಿವೆ…

ಕಾರ್ತಿಕ ಮಾಸದ ಸೋಮವಾರ ಶಿವನನ್ನು ಪೂಜಿಸುವುದು ಹೇಗೆ..? -ಈ ದಿನ ಶಿವ ಪೂಜೆ ಮಾಡುವುದರ ಪ್ರಯೋಜನಗಳು ಹೀಗಿವೆ…

ನ್ಯೂಸ್ ಆ್ಯರೋ : 2023 ರ ಕಾರ್ತಿಕ ಮಾಸವು ಭಾನುವಾರ, ನವೆಂಬರ್‌ 14 ರಿಂದ ಪ್ರಾರಂಭವಾಗಿ ಡಿಸೆಂಬರ್‌ 12 ರಂದು ಕೊನೆಗೊಳ್ಳುತ್ತದೆ. ಆದ್ದರಿಂದ ಕಾರ್ತಿಕ ಮಾಸದ ಸೋಮವಾರ ಅಂದರೆ ಶಿವನ ಆರಾಧನೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಕಾರ್ತಿಕ ಮಾಸದಲ್ಲಿ ಮಾಡುವ ತೀರ್ಥ ಸ್ನಾನ, ಪೂಜೆ, ದೀಪ ದಾನ ವಿಶೇಷ ಫಲ ನೀಡುತ್ತದೆ ಎಂಬ ನಂಬಿಕೆ ಇದೆ. ಕಾರ್ತಿಕ ದಾಮೋದರ ಎಂದು ಸ್ತುತಿಸಿದರೂ ಒಳ್ಳೆಯ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಶಿವ ನಾಮಸ್ಮರಣೆ ಮತ್ತು ಪೂಜೆ ಅತ್ಯಂತ ಫಲಪ್ರದ. ಸೋಮವಾರ ಸ್ನಾನ, ಪೂಜೆ, ಜಪ ಮಾಡುವವರಿಗೆ ಅಶ್ವಮೇಥ ಯಾಗದ ಫಲ ಸಿಗುತ್ತದೆ.

ಶಿವ ಕೇಶವರಿಗೆ ಪ್ರಿಯವಾದ ಕೋಟಿ ಸೋಮವಾರದಂದು ಮಾಡುವ ಪೂಜೆಯು ಅತ್ಯಂತ ಫಲಪ್ರದವಾಗಿದೆ. ಅವರವರ ಸಾಮರ್ಥ್ಯಕ್ಕನುಗುಣವಾಗಿ ಶಿವನ ದೇವಾಲಯ ದರ್ಶನ, ಅಭಿಷೇಕ, ಉಪವಾಸ ಅಥವಾ ನಕ್ತಂ ಅಥವಾ ಏಕಭುಕ್ತಂ ಮಾಡುವುದು ಉತ್ತಮ ಎಂದು ಶಾಸ್ತ್ರ ಗ್ರಂಥ ಹೇಳುತ್ತದೆ.

ಹಿಂದೂ ಧರ್ಮದಲ್ಲಿ, ಸೋಮವಾರವನ್ನು ಸಾಮಾನ್ಯವಾಗಿ ಶಿವನ ಆರಾಧನೆಗೆ ಮೀಸಲಾಗಿಡಲಾಗಿದೆ. ಆದರೆ ಶ್ರಾವಣ ಮತ್ತು ಕಾರ್ತಿಕ ಮಾಸದ ಸೋಮವಾರಗಳನ್ನು ಶಿವ ಭಕ್ತರು ವಿಶೇಷವೆಂದು ಪರಿಗಣಿಸುತ್ತಾರೆ. ದಕ್ಷನ ಶಾಪದಿಂದ ಪಾರಾಗಲು ಮತ್ತು ಭಗವಾನ್ ಶಿವನಿಂದ ಆಶೀರ್ವಾದ ಮತ್ತು ಅವನ ಜಡೆಯಲ್ಲಿ ಸ್ಥಾನ ಪಡೆಯಲು ಚಂದ್ರನು ಸೋಮವಾರ ವ್ರತವನ್ನು ಆಚರಿಸುತ್ತಾನೆ ಎನ್ನುವ ನಂಬಿಕೆಯಿದೆ.

ಕಾರ್ತಿಕ ಮಾಸವು ವಿಷ್ಣುವಿನ ಮಾಸವಾದರೂ ಶಿವನ ಆರಾಧನೆಗೆ ವಿಶೇಷವಾಗಿದೆ. ಕಾರ್ತಿಕ ಮಾಸದಲ್ಲಿ ಶಿವನನ್ನೇಕೇ ಪೂಜಿಸಬೇಕು..? ಕಾರ್ತಿಕ ಮಾಸದಲ್ಲಿ ಶಿವ ಪೂಜೆ ಮಾಡುವುದು ಹೇಗೆ..? ಕಾರ್ತಿಕ ಮಾಸದ ಶಿವ ಪೂಜೆ ಪ್ರಯೋಜನ ಹೀಗಿದೆ.

  • ಇಷ್ಟಾರ್ಥಗಳು ಈಡೇರುವುದು
    ಪೌರಾಣಿಕ ನಂಬಿಕೆಗಳ ಪ್ರಕಾರ, ಸೋಮವಾರದಂದು ಭಗವಾನ್ ಶಿವನನ್ನು ಪೂಜಿಸುವುದರಿಂದ ಆತನು ನಮಗೆ ಅಪಾರ ಶಕ್ತಿಯನ್ನು ನೀಡುವುದಲ್ಲದೆ, ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗಿದೆ. ಅದರಲ್ಲೂ ಕಾರ್ತಿಕ ಮಾಸದಲ್ಲಿ ಸೋಮವಾರದ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಇದು ಶಿವನನ್ನು ಆಚರಿಸಲು ಒಂದು ಮಂಗಳಕರ ಸಂದರ್ಭ ಎಂದು ನಂಬಲಾಗಿದೆ.
  • ಕಾರ್ತಿಕ ಸೋಮವಾರದ ಶಿವ ಪೂಜೆ ಪ್ರಯೋಜನ
    ಕಾರ್ತಿಕ ಮಾಸದ ಸೋಮವಾರದಂದು ಭಗವಾನ್ ಶಿವನನ್ನು ಪೂಜಿಸುವುದರಿಂದ ದೈಹಿಕ ಕಾಯಿಲೆಗಳು, ಕೌಟುಂಬಿಕ ಕಲಹಗಳು, ಹಣದ ಒತ್ತಡಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದಲ್ಲದೇ ಅವಿವಾಹಿತ ಕನ್ಯೆಯರು ಶಿವನನ್ನು ಕಾರ್ತಿಕ ಮಾಸದಲ್ಲಿ ಪೂಜಿಸುವುದರಿಂದ ಶಿವನಂತಹ ವರ ಸಿಗುತ್ತಾನೆ ಮತ್ತು ವಿವಾಹದಲ್ಲಿ ಎದುರಾಗಬಹುದಾದ ಅಡ್ಡಿ – ಆತಂಕಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
  • ಕಾರ್ತಿಕ ಸೋಮವಾರದಂದು ಶಿವನನ್ನು ಹೀಗೆ ಆರಾಧಿಸಿ
    ಕಾರ್ತಿಕ ಸೋಮವಾರದಂದು ಮುಂಜಾನೆ ಸ್ನಾನ ಮಾಡಿದ ನಂತರ, ಯಾವುದೇ ಶಿವ ದೇವಾಲಯಕ್ಕೆ ಹೋಗಿ ಮತ್ತು ಅಲ್ಲಿ ಶಿವಲಿಂಗವನ್ನು ಹಾಲಿನಿಂದ ಅಭಿಷೇಕ ಮಾಡಿ. ಇದರ ನಂತರ ಶ್ರೀಗಂಧ, ಅಕ್ಕಿ, ಹಲಸು, ವೀಳ್ಯದೆಲೆ, ಬಿಲ್ವಪತ್ರೆ ಮತ್ತು ದಾತುರವನ್ನು ಅರ್ಪಿಸಿ. ನಂತರ ಭಗವಾನ್‌ ಶಿವನಿಗೆ ಆರತಿಯನ್ನು ಮಾಡಿ ಮತ್ತು ”ಓಂ ನಮಃ ಶಿವಾಯ” ಎನ್ನುವ ಶಿವ ಮಂತ್ರವನ್ನು ಪಠಿಸಿ.
  • ಶಿವ ಪೂಜೆಯಲ್ಲಿ ಈ ತಪ್ಪನ್ನು ಮಾಡದಿರಿ
    ಶಿವನನ್ನು ಪೂಜಿಸುವಾಗ ತಾಜಾ ಹಾಲನ್ನು ಮಾತ್ರ ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇದರ ಹೊರತಾಗಿ, ಶಿವನಿಗೆ ಅರಿಶಿನವನ್ನು ಅರ್ಪಿಸಬೇಡಿ. ಅಲ್ಲದೆ, ಸುಳ್ಳು ಹೇಳುವುದನ್ನು ತಪ್ಪಿಸಿ. ಇವುಗಳಲ್ಲಿ ಯಾವುದಾದರೂ ಒಂದು ತಪ್ಪನ್ನು ಮಾಡಿದರೂ ಆ ಪೂಜೆಯ ಫಲ ಸಿಗುವುದಿಲ್ಲ.
  • ಶಿವನಿಗೆ ಪ್ರಾರ್ಥನೆ ಸಲ್ಲಿಸಿ
    ಕಾರ್ತಿಕ ಸೋಮವಾರ ಮುಂಜಾನೆ ಸ್ನಾನದ ನಂತರ ಶಿವನಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಬಹುದು ಅಥವಾ ಮನೆಯಲ್ಲಿ ಶಿವನಿಗೆ ಪ್ರಾರ್ಥನೆಗಳನ್ನು ಮಾಡಬಹುದು. ಉಪವಾಸ ವ್ರತವನ್ನು ಸೋಮವಾರದ ಸೂರ್ಯೋದಯದಿಂದ ಮರುದಿನ ಬೆಳಿಗ್ಗೆ ಸೂರ್ಯೋದಯದವರೆಗೆ ಮಾಡಬೇಕಾಗುತ್ತದೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *