ಗಂಡು ಶಾರ್ಕ್‌ ಇಲ್ಲದೆ ಮರಿಗೆ ಜನ್ಮ ನೀಡಿದ ಹೆಣ್ಣು ಶಾರ್ಕ್ ಮೀನು – ಅಮೆರಿಕದ ಝೂನಲ್ಲಿ ನಡೆಯಿತು ಅಚ್ಚರಿ ಘಟನೆ..!!

ಗಂಡು ಶಾರ್ಕ್‌ ಇಲ್ಲದೆ ಮರಿಗೆ ಜನ್ಮ ನೀಡಿದ ಹೆಣ್ಣು ಶಾರ್ಕ್ ಮೀನು – ಅಮೆರಿಕದ ಝೂನಲ್ಲಿ ನಡೆಯಿತು ಅಚ್ಚರಿ ಘಟನೆ..!!

ನ್ಯೂಸ್ ಆ್ಯರೋ : “ಲಿವಿಂಗ್ ಕೋಸ್ಟ್ಸ್” ವಿಭಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಶಾರ್ಕ್ ಕಳೆದ ಆಗಸ್ಟ್‌ನಲ್ಲಿ ಮರಿಗೆ ಜನ್ಮ ನೀಡಿದೆ. ಇದರಲ್ಲೇನಿದೆ ವಿಶೇಷ ಅಂತೀರಾ? ತಾಯಿ ಶಾರ್ಕ್‌ ಎಂದಿಗೂ ಗಂಡು ಜಾತಿಯ ಶಾರ್ಕ್‌ ಜೊತೆ ಸಂತಾನೋತ್ಪತ್ತಿಯ ಕ್ರಿಯೆಯಲ್ಲಿ ಭಾಗಿಯಾಗದೆಯೇ ಮರಿಗೆ ಜನ್ಮ ನೀಡಿರುವುದು ವಿಶೇಷ.

ಮೃಗಾಲಯದ ಅಧಿಕಾರಿಗಳು ಪ್ರಕಾರ, ಫಲವತ್ತಾಗಿಸದ ಅಂಡಾಣು ಅಂದರೆ ಅನ್‌ಫರ್ಟಿಲೈಜ್ಡ್‌ ಎಗ್‌ನಿಂದ ಈ ಮರಿ ಜನಿಸಿದೆ ಎಂದಿದ್ದಾರೆ. ಇಂಥ “ವರ್ಜಿನ್‌ ಬರ್ತ್‌” ಅನ್ನು ಪಾರ್ಥೆನೋಜೆನೆಸಿಸ್ ಎಂದು ಕರೆಯಲ್ಪಡಲಾಗುತ್ತದೆ. ಸ್ತ್ರೀ ಅಲೈಂಗಿಕ ಸಂತಾನೋತ್ಪತ್ತಿ ಪ್ರಕ್ರಿಯೆ, ಸಸ್ಯಗಳು, ಕೀಟಗಳು, ಸರೀಸೃಪಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಕೆಲವು ಜೀವಿಗಳಲ್ಲಿ ಸಾಮಾನ್ಯವಾಗಿದೆ. ಆದರೆ ಶಾರ್ಕ್‌ನಲ್ಲಿ ಇದರ ಪ್ರಮಾಣ ಬಹಳ ಕಡಿಮೆಯಾಗಿದ್ದು, ಇದೊಂದು ಅಚ್ಚರಿಯ ವಿಷಯವಾಗಿದೆ.

ಶೆಡ್ ಅಕ್ವೇರಿಯಂನಲ್ಲಿರುವ ಜೀಬ್ರಾ ಶಾರ್ಕ್ ಆಗಸ್ಟ್‌ 23ಕ್ಕೆ ಮರಿಗೆ ಜನ್ಮ ನೀಡಿದೆ. ಮೃಗಾಲಯದ ಅನಿಮಲ್‌ ಕೇರ್‌ನ ಸಿಬ್ಬಂದಿ ಎರಡು ತಿಂಗಳ ಕಾಲ ಈ ಶಾರ್ಕ್ಅನ್ನು ಸಾರ್ವಜನಿಕರಿಂದ ದೂರವಿಟ್ಟು ಮರಿಯನ್ನು ಮೇಲ್ವಿಚಾರಣೆ ಮಾಡಿದ್ದರು. ಆದರೆ ಈಗ 5 ರಿಂದ 6-ಇಂಚಿನ (13 ರಿಂದ 15 ಸೆಂಟಿಮೀಟರ್) ಹೆಣ್ಣು ಶಾರ್ಕ್ ಅನ್ನು ಮೃಗಾಲಯದ “ಲಿವಿಂಗ್ ಕೋಸ್ಟ್ಸ್” ವಿಭಾಗದಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದ್ದಾರೆ.

ಬ್ರೂಕ್‌ಫೀಲ್ಡ್ ಮೃಗಾಲಯದ ಸಿಬ್ಬಂದಿ ಬುಧವಾರ (ನ. 9) ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದೆ. ಈ ಎಪೌಲೆಟ್ ಶಾರ್ಕ್ ಅತ್ಯಾಕರ್ಷಕ ಕಥೆಯನ್ನು ಹೊಂದಿದೆ ಎಂದು ಬರೆದುಕೊಂಡಿದೆ. “ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ ಈ ಭ್ರೂಣವು ಪುರುಷ ಫಲೀಕರಣದ ಅಗತ್ಯವಿಲ್ಲದೇ ಅಭಿವೃದ್ಧಿಗೊಂಡಿದೆ. ಪಾರ್ಥೆನೋಜೆನೆಸಿಸ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ಶಾರ್ಕ್‌ಗಳಂತಹ ಸಂಕೀರ್ಣ ಕಶೇರುಕಗಳಿಗೆ ಬಹಳ ಅಪರೂಪವಾಗಿದೆ’ ಹೇಳಿದ್ದಾರೆ.

2019ರಲ್ಲಿ ತಾಯಿ ಶಾರ್ಕ್‌ ಬ್ರೂಕ್‌ಫೀಲ್ಡ್‌ ಮೃಗಾಲಯಕ್ಕೆ ನ್ಯೂ ಇಂಗ್ಲೆಂಡ್‌ ಅಕ್ವೇರಿಯಂನಿಂದ ತರಲಾಗಿದೆ. ಇದೇ ಸ್ಥಳದಲ್ಲಿ ಎಪೌಲೆಟ್ ಶಾರ್ಕ್‌ನ ಮೊದಲ ವರ್ಜಿನ್‌ ಬರ್ತ್‌ ಗುರುತಿಸಲಾಗಿದೆ. ಈ ಶಾರ್ಕ್‌ಅನ್ನು ಗಂಡು ಜಾತಿಯ ಸಂಪರ್ಕಕ್ಕೆ ಬಿಟ್ಟಿರಲಿಲ್ಲ. ಕಳೆದ ವರ್ಷ ತನ್ನ 7ನೇ ವಯಸ್ಸಿಗೆ ಇದು ಲೈಂಗಿಕ ಪ್ರಬುದ್ಧತೆ ಪಡೆದುಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದಿನಿಂದ ಪ್ರತಿ ತಿಂಗಳು ಇದು 2 ರಿಂದ 4 ಮೊಟ್ಟೆಗಳನ್ನು ಇಡುತ್ತಿತ್ತು ಎಂದಿದ್ದಾರೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *