ವೈಕುಂಠ ದರ್ಶನಕ್ಕೆ ಆನ್‌ಲೈನ್‌ ಟಿಕೆಟ್ ಖರೀದಿಸಲು ಭಕ್ತರ ಪೈಪೋಟಿ – ಬಿಡುಗಡೆಯಾದ 21 ನಿಮಿಷಗಳಲ್ಲಿ ಟಿಕೆಟ್ ಖಾಲಿ

ವೈಕುಂಠ ದರ್ಶನಕ್ಕೆ ಆನ್‌ಲೈನ್‌ ಟಿಕೆಟ್ ಖರೀದಿಸಲು ಭಕ್ತರ ಪೈಪೋಟಿ – ಬಿಡುಗಡೆಯಾದ 21 ನಿಮಿಷಗಳಲ್ಲಿ ಟಿಕೆಟ್ ಖಾಲಿ

ನ್ಯೂಸ್ ಆ್ಯರೋ : ತಿರುಮಲ ಶ್ರೀವಾರಿ ವೈಕುಂಠದ ದರ್ಶನಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಭಕ್ತರು ಪೈಪೋಟಿ ನಡೆಸಿದ್ದು ಕಂಡುಬಂದಿದೆ. ಆನ್‌ಲೈನ್‌ನಲ್ಲಿ ಟಿಟಿಡಿ ನೀಡಿದ 300 ರೂಪಾಯಿಯ ಎಸ್‌ಇಡಿ ಟಿಕೆಟ್‌ಗಳಿಗೆ ಭಕ್ತರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿ, ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತಿದ್ದಂತೆ ಎಲ್ಲವೂ 21 ನಿಮಿಷಗಳಲ್ಲಿ ಖಾಲಿಯಾಗಿವೆ.

ಶುಕ್ರವಾರ ಬೆಳಗ್ಗೆ 10 ಗಂಟೆಗೆ ವೈಕುಂಠ ದರ್ಶನದ ಟಿಕೆಟ್ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ 21 ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳನ್ನು ಭಕ್ತರು ಬುಕ್ ಮಾಡಿದ್ದಾರೆ. ಇವುಗಳ ಮಾರಾಟದ ಮೂಲಕ ಟಿಟಿಡಿಗೆ 6.75 ಕೋಟಿ ರೂಪಾಯಿ ಆದಾಯ ಬಂದಿದೆ.

ಡಿಸೆಂಬರ್ 23 ರಿಂದ ಜನವರಿ 1 ರವರೆಗೆ ವೈಕುಂಠ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಉದ್ದೇಶಕ್ಕಾಗಿ ಟಿಟಿಡಿ ಆನ್‌ಲೈನ್‌ನಲ್ಲಿ 2.25 ಲಕ್ಷ ಎಸ್‌ಇಡಿ ಟಿಕೆಟ್‌ಗಳನ್ನು ಬಿಡುಗಡೆ ಮಾಡಿತ್ತು. ಈ ಟಿಕೆಟ್‌ಗಳ ಖರೀದಿಗೆ ಭಕ್ತರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ಟಿಕೆಟ್‌ಗಳು ಭಕ್ತರಿಗೆ ಸಾಕಾಗಲಿಲ್ಲ. ಕೇವಲ 21 ನಿಮಿಷದಲ್ಲಿ ಈ ಟಿಕೆಟ್‌ಗಳು ಖಾಲಿಯಾಗಿದ್ದು ಇದು ತಿರುಪತಿ ತಿಮ್ಮಪ್ಪನ ಮೇಲೆ ಭಕ್ತರಿಗಿರುವ ನಂಬಿಕೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ.

ಟಿಟಿಡಿ ಐಟಿ ಜಿಎಂ ಸಂದೀಪ್ ರೆಡ್ಡಿ ಬಗ್ಗೆ ಪ್ರತಿಕ್ರಿಯಿಸಿ, ಪ್ರಸ್ತುತ ಆನ್‌ಲೈನ್ ಟಿಕೆಟ್ ನೀಡಲು ಕ್ಲೌಡ್ ತಂತ್ರಜ್ಞಾನವನ್ನು ಬಳಸಲಾಗುತ್ತಿರುವುದರಿಂದ ಯಾವುದೇ ತೊಂದರೆಯಿಲ್ಲದೆ ಭಕ್ತರು ಬುಕ್ ಮಾಡಿದ್ದಾರೆ.

ಅದಲ್ಲದೆ ವೈಕುಂಠ ದ್ವಾರ ದರ್ಶನಕ್ಕೆ ಸಂಬಂಧಿಸಿದಂತೆ ಒಂಬತ್ತು ಪ್ರದೇಶಗಳಲ್ಲಿ ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು ಮತ್ತು ಹಿಂದಿನ ದಿನದಿಂದ 4.25 ಲಕ್ಷ ಸರ್ವದರ್ಶನಂ ಟೈಮ್ ಸ್ಲಾಟ್ ಟೋಕನ್‌ಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *