ಖ್ಯಾತ ನಟಿಯ ಮುಖದ ಮೇಲೆಯೇ ಅನಾಮಿಕ ಅಟ್ಯಾಕ್..! – ಹಲ್ಲೆ ಮಾಡಿ ಎಸ್ಕೇಪ್ ಆದ ಆಗಂತುಕ, ವೈರಲ್ ಆಯ್ತು ನಟಿ ಪೋಸ್ಟ್!

ನ್ಯೂಸ್ ಆ್ಯರೋ : ಹುಡುಗಿಯರಿಗೆ ಕಿರಿಕ್ ಮಾಡೋದು, ರ್ಯಾಗಿಂಗ್ ಮಾಡಿ ಅದರಲ್ಲಿ ಖುಷಿ ಪಡೋದು ಕೆಲ ಪಾಪಿಗಳ ವಿಕೃತ ಕಾರ್ಯ. ಆದರೆ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ಆ ನೋವು ಏನು ಅಂತ‌‌. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರೇನೂ ಸುಮ್ಮನೆ ಕೂರಲ್ಲ. ಬಸ್ಸಿನಲ್ಲಿ ಚುಡಾಯಿಸುವ ಹುಡುಗರಿಂದ ರೈಲಿನಲ್ಲಿ ವಿಕೃತ ಕಾಮ ತೋರಿಸುವ ಚಪಲ ಚೆನ್ನಿಗರಾಯರಿಗೂ ಚಪ್ಪಲಿ ಮಂಗಳಾರತಿ ಸೇವೆ ಕೊಡುತ್ತಲೇ ಇರುತ್ತಾರೆ.‌ ಆದರೆ ಇಲ್ಲಿ ಆದದ್ದು ಮಾತ್ರ ವಿಶೇಷ. ಖ್ಯಾತ ನಟಿಯ ಮೇಲೆಯೇ ಅಪರಿಚಿತನೊಬ್ಬ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ನಾನು ನೋವಿನಿಂದ ಕಿರುಚುತ್ತಿದ್ದರೆ ಆತ ‘ರೆಡ್ ಕಾರ್ಡ್‌ ಕೊಡು’ ಎಂದು ಒಂದೇ ಸಮನೆ ನನಗೆ ಒತ್ತಾಯಿಸುತ್ತಿದ್ದ. ಆತ ತಮಿಳು ಬಿಗ್ ಬಾಸ್ ಸ್ಪರ್ಧಿ ಪ್ರದೀಪ್ ಆಂಟನಿ ಕಡೆಯವನಿರಬಹುದು ಎಂಬ ಸಂದೇಹ ನನಗೆ ಮೂಡಿದೆ’ ಎಂದಿದ್ದಾರೆ ನಟಿ ವನಿತಾ ವಿಜಯ್ ಕುಮಾರ್. ಆದರೆ, ನಟಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿಲ್ಲ. ದಕ್ಷಿಣ ಭಾರತ ಚಿತ್ರರಂಗದ, ಅದರಲ್ಲೂ ಮುಖ್ಯವಾಗಿ ತಮಿಳು ಸಿನಿರಂಗದ ಜನಪ್ರಿಯ ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ, ವನಿತಾ ವಿಜಯಕುಮಾರ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಗಾಯಗೊಂಡಿರುವ ತಮ್ಮ ಮುಖದ ಫೋಟೋ ಕೂಡ ಅಪ್ಲೋಡ್ ಮಾಡಿರುವ ನಟಿ ಆರೋಪಿ ಯಾರೆಂಬ ಊಹೆಯನ್ನು ಕೂಡ ರಿವೀಲ್ ಮಾಡಿದ್ದಾರೆ.

ಘಟನೆ ಹಿನ್ನೆಲೆ ಏನು…?

ಮಧ್ಯರಾತ್ರಿಯಲ್ಲಿ ನಿಗೂಢ ವ್ಯಕ್ತಿಯೊಬ್ಬ ನಟಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಅವರು ಅವರ ಮಗಳ‌ ಜೊತೆ ಬಿಗ್ ಬಾಸ್ ಶೋ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ನಟಿ ತನ್ನ ಸಹೋದರಿಯ ಮನೆಯ ಬಳಿ ಕಾರು ಪಾರ್ಕ್‌ ಮಾಡುತ್ತಿದ್ದರು. ಅಲ್ಲಿಂದ ಅವರ ಮನೆಗೆ ಕಾರು ಚಲಾಯಿಸಿಕೊಂಡು ಹೋಗಲು ಕಾರ್ ಬಳಿ ಹೋಗುತ್ತಿದ್ದಂತೆ ಕತ್ತಲಲ್ಲಿ ಯಾರೋ ಒಬ್ಬ ಬಂದು ಇವರ ಮುಖಕ್ಕೆ ಗುದ್ದಿದ್ದಾನೆ. ನಟಿ ನೋವಿನಿಂದ ಕಿರುಚುತ್ತಿದ್ದರೆ ಆತ ‘ರೆಡ್ ಕಾರ್ಡ್‌ ಕೊಡು’ ಎಂದು ಒಂದೇ ಸಮನೆ ಮಹಿಳೆಯನ್ನು ಒತ್ತಾಯಿಸುತ್ತಿದ್ದನಂತೆ.

ಆತ ತಮಿಳು ಬಿಗ್ ಬಾಸ್ ಸ್ಪರ್ಧಿ ಪ್ರದೀಪ್ ಆಂಟನಿ ಕಡೆಯವನಿರಬಹುದು ಎಂಬ ಸಂದೇಹ ನನಗೆ ಮೂಡಿದೆ’ ಎಂದಿದ್ದಾರೆ ನಟಿ ವನಿತಾ ವಿಜಯ್ ಕುಮಾರ್. ಆದರೆ, ನಟಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿಲ್ಲ. ಬದಲಾಗಿ, ನನಗೆ ಈ ಕೇಸ್, ಪೊಲೀಸ್ ಪ್ರೊಸೆಸ್ ಮೇಲೆ ನಂಬಿಕೆಯೇ ಹೊರಟುಹೋಗಿದೆ. ಹೀಗಾಗಿ, ನಾನು ನನ್ನ ಮೇಲೆ ಆಗಿರುವ ಹಲ್ಲೆಗೆ ನ್ಯಾಯಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದೇನೆ’ ಎಂದಿದ್ದಾರೆ.

ಮತ್ತೆ ಸುದ್ದಿಯಾದ ನಟಿ ವನಿತಾ ವಿಜಯ್ ಕುಮಾರ್

ಒಟ್ಟಿನಲ್ಲಿ, ಈ ಮೊದಲು ಹಲವಾರು ಬಾರಿ ತಮ್ಮ ಎರಡನೆಯ, ಮೂರನೆಯ ಮದುವೆ, ವಿಚ್ಛೇದನಗಳಿಗೆ, ಬಿಗ್ ಬಾಸ್ ಕಾಂಟ್ರೋವರ್ಸಿಗಳಿಗೆ ನಟಿ ವನಿತಾ ವಿಜಯ್‌ಕುಮಾರ್ ಸುದ್ದಿಗೆ ಗ್ರಾಸವಾಗಿದ್ದರು. ಆಗ ತಮಿಳು ಮೀಡಿಯಾಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಈ ನಟಿಯ ಬಗ್ಗೆ ಬಹಳಷ್ಟು ನೆಗೆಟಿವ್ ಸುದ್ದಿ ಹಾಗೂ ಕಾಮೆಂಟ್ಸ್‌ಗಳು ಹರಿದಾಡಿದ್ದವು. ಈಗ ತನ್ನ ಮೇಲೆ ಮಧ್ಯರಾತ್ರಿ ಅನಾಮಿಕನೊಬ್ಬ ಹಲ್ಲೆ ಮಾಡಿದ್ದಾನೆ ಎಂದು ತಾವೇ ಸ್ವತಃ ಪೋಸ್ಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ನಟಿ ವನಿತಾ ವಿಜಯ್‌ಕುಮಾರ್.

ಕಾನೂನು ಸುವ್ಯವಸ್ಥೆ, ಪೊಲೀಸರ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದು ಹೇಳಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ನ್ಯಾಯ ಸಿಗಬಹುದು ಎಂಬ ಭರವಸೆಯಲ್ಲಿದ್ದಾರೆ. ಈ ಪ್ರಕರಣಕ್ಕೆ ಈ ಮೂಲಕವಾದರೂ ನ್ಯಾಯ ಸಿಗುತ್ತಾ ನೋಡಬೇಕಷ್ಟೆ.