ಭಾರತದ 71.1ಲಕ್ಷ ವಾಟ್ಸಾಪ್ ಖಾತೆಗೆ ನಿಷೇಧ ಹೇರಿದ ಮೆಟಾ – ನಿಷೇಧಕ್ಕೆ ಕಂಪನಿ ನೀಡಿದ ಕಾರಣವೇನು ಗೊತ್ತಾ?

ಭಾರತದ 71.1ಲಕ್ಷ ವಾಟ್ಸಾಪ್ ಖಾತೆಗೆ ನಿಷೇಧ ಹೇರಿದ ಮೆಟಾ – ನಿಷೇಧಕ್ಕೆ ಕಂಪನಿ ನೀಡಿದ ಕಾರಣವೇನು ಗೊತ್ತಾ?

ನ್ಯೂಸ್ ಆ್ಯರೋ : ವಿಶ್ವದ ಕೋಟ್ಯಂತರ ಮಂದಿ ಬಳಸುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸ್ ಆಪ್ ಭಾರತದ ಗ್ರಾಹಕರ 71.1 ಲಕ್ಷ ಖಾತೆಗಳನ್ನು ನಿಷೇಧಿಸಿದೆ.

ಹೊಸ ಐಟಿ ನಿಯಮಗಳ ಪ್ರಕಾರ ಮಾಸಿಕ ಅನುಸರಣಾ ವರದಿಯನ್ನು ಬಿಡುಗಡೆ ಮಾಡಿರುವ ವಾಟ್ಸ್ ಆಪ್ ನ ಸೆಪ್ಟೆಂಬರ್‌ ತಿಂಗಳ ವರದಿಯಲ್ಲಿ ಇದು ಬಹಿರಂಗವಾಗಿದೆ.

ಭಾರತದ ಐಟಿ ನಿಯಮಗಳ ಅನ್ವಯ ದೇಶದ ಒಟ್ಟು 71.1 ಲಕ್ಷ ಖಾತೆಗಳನ್ನು ನಿಷೇಧ ಮಾಡಿರುವುದಾಗಿ ವಾಟ್ಸ್ ಆಪ್ ಹೇಳಿದೆ.

ಐಟಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಯಾವೆಲ್ಲ ಅಕೌಂಟ್‌ಗಳನ್ನು ನಿಷೇಧಿಸಲಾಗಿದೆ ಎನ್ನುವ ಮಾಹಿತಿಯನ್ನೂ ವಾಟ್ಸ್ ಆಪ್ ಹಂಚಿಕೊಂಡಿದೆ.

71.1 ಲಕ್ಷ ಖಾತೆಗಳಲ್ಲಿ ಒಟ್ಟು 25.7 ಲಕ್ಷ ಖಾತೆಗಳು ನಿಷ್ಕ್ರಿಯಗೊಂಡಿದ್ದರಿಂದ ಪೂರ್ವಭಾವಿಯಾಗಿ ಅವುಗಳನ್ನು ನಿಷೇಧಿಸಲಾಗಿದೆ. ಇದು ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಕೈಗೊಂಡ ಕ್ರಮವಾಗಿದೆ.

ಸೆಪ್ಟೆಂಬರ್ 1ರಿಂದ 30ರ ನಡುವೆ ದೂರುಗಳ ಆಧಾರದಲ್ಲಿ ಆರು ಮುಖ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಖಾತೆಯನ್ನು ಬೆಂಬಲಿಸಿ 1,03, ನಿಷೇಧಕ್ಕೆ ಮೇಲ್ಮನವಿ ಸಲ್ಲಿಸಿ 7,396, ಇತರ ಕೆಲವು ಆಯ್ಕೆಗಳನ್ನು ಬಯಸಿ 1,518, ಉತ್ಪನ್ನಗಳಿಗೆ ಪ್ರೋತ್ಸಾಹ ಬಯಸಿ 370 ಮತ್ತು ಸುರಕ್ಷತೆ ದೃಷ್ಟಿಯಿಂದ 127 ಹೀಗೆ ಎಲ್ಲ ಸೇರಿ ಒಟ್ಟು 10,442 ಬಳಕೆದಾರರ ದೂರುಗಳನ್ನು ವಾಟ್ಸ್ ಆಪ್ ಸ್ವೀಕರಿಸಿದೆ.

ಪ್ರಸ್ತುತ ನಿಷೇಧಗೊಂಡಿರುವ ಖಾತೆಗಳನ್ನು ಮತ್ತೆ ತೆರೆಯಬೇಕಾದರೆ ಬಳಕೆದಾರ ವಿನಂತಿ ಮರುಸ್ಥಾಪನೆ ಮತ್ತು ವಿನಂತಿಯ ನಿರಾಕರಣೆ ಮೂಲಕ ವರದಿಗಳನ್ನು ಪರಿಶೀಲಿಸಿರಬೇಕು.

Related post

ದಿನ‌ ಭವಿಷ್ಯ 11-05-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 11-05-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು. ಇದಕ್ಕಾಗಿ ನೀವು ನಿಮ್ಮ…
ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಬಳ

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ…

ನ್ಯೂಸ್ ಆರೋ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​ ಹುದ್ದೆಗಳು…
ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ನ್ಯೂಸ್ ಆ್ಯರೋ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿ ಇಂದು…

Leave a Reply

Your email address will not be published. Required fields are marked *