ATMನಿಂದ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕಿಲ್ಲ – UPI ಅಪ್ಲಿಕೇಶನ್ ಮೂಲಕ ATM ನಿಂದ ಹಣ ಪಡೆಯಬಹುದು ; ಇಲ್ಲಿದೆ ಮಾಹಿತಿ…

ATMನಿಂದ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕಿಲ್ಲ – UPI ಅಪ್ಲಿಕೇಶನ್ ಮೂಲಕ ATM ನಿಂದ ಹಣ ಪಡೆಯಬಹುದು ; ಇಲ್ಲಿದೆ ಮಾಹಿತಿ…

ನ್ಯೂಸ್ ಆ್ಯರೋ : ನಗದು ವಿತ್​ಡ್ರಾ ಮಾಡಬೇಕೆಂದರೆ ತಕ್ಷಣ ನೆನಪಾಗುವುದು ಎಟಿಎಂ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಎಟಿಎಂನಿಂದ ಹಣ ವಿತ್​ಡ್ರಾ ಮಾಡುವುದು ಸಾಮಾನ್ಯ. ಆದರೆ ಈಗ ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್​ ಬ್ಯಾಂಕ್​ (PNB) ಸೇರಿದಂತೆ ಪ್ರಮುಖ ಬ್ಯಾಂಕ್​ಗಳು ಕಾರ್ಡ್​ರಹಿತ ನಗದು ವಿತ್​ಡ್ರಾಕ್ಕೆ ಅವಕಾಶ ನೀಡಿದ್ದು, ಯುಪಿಐ ಆ್ಯಪ್​ ಮೂಲಕವೂ ಎಟಿಎನಿಂದ ಹಣ ವಿತ್​​ಡ್ರಾ ಮಾಡಬಹುದಾಗಿದೆ.

ಇಂಟರ್‌ಆಪರೇಬಲ್ ಕಾರ್ಡ್​ಲೆಸ್ ಕ್ಯಾಶ್ ವಿತ್​ಡ್ರಾವಲ್ (ಐಸಿಸಿಡಬ್ಲ್ಯು) ಎಂದು ಕರೆಯಲಾಗುವ ಕಾರ್ಡ್​​ರಹಿತ ನಗದು ವಿತ್​ಡ್ರಾ ಆಯ್ಕೆಯಲ್ಲಿ ಹಲವಾರು ಪ್ರಯೋಜನಗಳಿವೆ. ಈ ಸೌಲಭ್ಯಕ್ಕೆ ಶುಲ್ಕ ಇರುವುದಿಲ್ಲ. ಪ್ರಯಾಣದ ವೇಳೆ ಕಾರ್ಡ್ ಕೊಂಡೊಯ್ಯುವುದು ಅಥವಾ ಎಟಿಎಂ ಪಿನ್ ಸಂಖ್ಯೆ ನೆನಪಿಟ್ಟುಕೊಳ್ಳಬೇಕಾದ ಅಗತ್ಯವೂ ಇರುವುದಿಲ್ಲ. ತಪ್ಪಾದ ಪಿನ್ ಸಂಖ್ಯೆ ನಮೂದಿಸಿ ಟ್ರಾನ್ಸಾಕ್ಷನ್ ವಿಫಲವಾಗುವುದು, ಕಾರ್ಡ್​ ಕಳೆದುಹೋಗುವುದು ಇತ್ಯಾದಿ ಸಮಸ್ಯೆಗಳಿಗೂ ಕಾರ್ಡ್​ರಹಿತ ನಗದು ವಿತ್​ಡ್ರಾ ಸೌಲಭ್ಯದಿಂದ ಪ್ರಯೋಜನ ದೊರೆಯಲಿದೆ.

ಐಸಿಸಿಡಬ್ಲ್ಯು ಸೌಲಭ್ಯವು ಗೂಗಲ್ ಪೇ, ಫೊನ್​ ಪೇ ಸೇರಿದಂತೆ ಹೆಚ್ಚಿನ ಯುಪಿಐ ಆ್ಯಪ್​ಗಳಲ್ಲಿ ಲಭ್ಯವಿದೆ. ಈ ಸೌಲಭ್ಯವನ್ನು ಪಡೆಯಬೇಕಾದರೆ ಮೊಬೈಲ್​ ಮತ್ತು ಎಟಿಎಂ ಯಂತ್ರ ಇಂಟರ್ನೆಟ್ ಸಂಪರ್ಕ ಹೊಂದಿರಬೇಕು. ಈ ವಿಧಾನದಲ್ಲಿ ಗರಿಷ್ಠ 5,000 ರೂ.ವರೆಗೆ ಮಾತ್ರ ನಗದು ವಿತ್​ಡ್ರಾ ಮಾಡಬಹುದು ಎಂಬುದನ್ನು ತಿಳಿದಿರಿ. ಯುಪಿಐ ಮೂಲಕ ನಗದು ವಿತ್​ಡ್ರಾ ಮಾಡುವ ಹಂತ ಹಂತದ ಮಾಹಿತಿ ಇಲ್ಲಿದೆ.

ಯುಪಿಐ ಮೂಲಕ ಹಣ ತೆಗೆಯುವ ವಿಧಾನ :

ಇಲ್ಲಿ ತಿಳಿಸುವ ವಿಧಾನದ ಮೂಲಕ UPI ಅಪ್ಲಿಕೇಶನ್‌ನ ಸಹಾಯದಿಂದ ಮಾತ್ರ ಡೆಬಿಟ್ ಕಾರ್ಡ್ ಇಲ್ಲದೆ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ.

1.ಮೊದಲನೆಯದಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Google Pay, PhonePe, Paytm, WhatsApp Pay ಮತ್ತು Amazon Pay ಹೀಗೆ ಯಾವುದಾದರೂ ಒಂದು UPI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

  1. ಈ ವೈಶಿಷ್ಟ್ಯವನ್ನು ಬಳಸುವಾಗ ಫೋನ್‌ನಲ್ಲಿ ಇಂಟರ್ನೆಟ್ ಅನ್ನು ಸಕ್ರಿಯಗೊಳಿಸಬೇಕು.
  2. ಈಗ ನೀವು ಎಟಿಎಂಗೆ ಹೋಗಬೇಕು ಮತ್ತು ವಿತ್ ಡ್ರಾ ಕ್ಯಾಶ್ ಮೇಲೆ ಕ್ಲಿಕ್ ಮಾಡಬೇಕು. ಈಗ ಯುಪಿಐ ಆಯ್ಕೆ ನಿಮ್ಮ ಮುಂದೆ ಬರಲಿದೆ. ಇದನ್ನು ಕ್ಲಿಕ್ ಮಾಡಿದಾಗ, ಎಟಿಎಂ ಪರದೆಯ ಮೇಲೆ ಕ್ಯೂಆರ್ ಕೋಡ್ ಕಾಣಿಸಿಕೊಳ್ಳುತ್ತದೆ.
  3. ಈಗ ನಿಮ್ಮ ಫೋನ್‌ನಲ್ಲಿ ಯಾವುದಾದರೂ ಒಂದು UPI ಅಪ್ಲಿಕೇಶನ್ ತೆರೆಯಿರಿ ಮತ್ತು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
  4. ಇದರ ನಂತರ, ಎಟಿಎಂನಿಂದ ಹಣ ಪಡೆಯುವುದು ಸಾಧ್ಯವಾಗುತ್ತದೆ. ಹಣ ಪಡೆಯಬೇಕಾದರೆ ವಿಡ್ರಾ ಮಾಡಬೇಕಾದ ಮೊತ್ತ ಎಷ್ಟು ಎನ್ನುವುದನ್ನು ಇಲ್ಲಿ ನಮೂದಿಸಿ.
    6.ಈ ವೈಶಿಷ್ಟ್ಯದ ಅಡಿಯಲ್ಲಿ, ನೀವು 5 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ ಎನ್ನುವುದು ನೆನಪಿರಲಿ. ಮೊತ್ತವನ್ನು ನಮೂದಿಸಿದ ನಂತರ, ಪ್ರೋಸೆಸ್ದ್ ಮೇಲೆ ಕ್ಲಿಕ್ ಮಾಡಿ.
  5. ಈಗ ಪಿನ್ ಕೇಳಲಾಗುತ್ತದೆ, ನಿಮ್ಮ UPI ಪಿನ್ ಅನ್ನು ಇಲ್ಲಿ ನಮೂದಿಸಿ.
    ಇದಾದ ನಂತರ ಎಟಿಎಂನಿಂದ ಹಣವನ್ನು ಪಡೆಯಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *