ವಾಟ್ಸಾಪ್‌ ನಲ್ಲಿ ಬಂತು ಮತ್ತೊಂದು ಹೊಸ ಫೀಚರ್ – ಇನ್ನು ಮುಂದೆ ಗ್ರೂಪ್ ಕಾಲ್‌ನಲ್ಲಿ ನಿಮ್ಮ ಆಯ್ಕೆಯ ವ್ಯಕ್ತಿಗಳಿಗೆ ಕರೆ ಮಾಡಿ..!!

ವಾಟ್ಸಾಪ್‌ ನಲ್ಲಿ ಬಂತು ಮತ್ತೊಂದು ಹೊಸ ಫೀಚರ್ – ಇನ್ನು ಮುಂದೆ ಗ್ರೂಪ್ ಕಾಲ್‌ನಲ್ಲಿ ನಿಮ್ಮ ಆಯ್ಕೆಯ ವ್ಯಕ್ತಿಗಳಿಗೆ ಕರೆ ಮಾಡಿ..!!

ನ್ಯೂಸ್ ಆ್ಯರೋ‌ : ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಫೀಚರ್ ಬಿಡುಗಡೆ ಮಾಡುವ ವಾಟ್ಸಾಪ್‌ ಇದೀಗ ಗ್ರೂಪ್ ಕಾಲ್‌ನಲ್ಲಿ ಹೊಸ ಫೀಚರ್ಸ್ ಸೇರಿಸಿದೆ. ಇಷ್ಟು ದಿನ ಗ್ರೂಪ್ ಕಾಲ್ ಬಟನ್ ಕ್ಲಿಕ್ ಮಾಡಿದರೆ ಗ್ರೂಪ್‌ನಲ್ಲಿರುವ ಎಲ್ಲಾ ಸದಸ್ಯರಿಗೆ ಕರೆ ಹೋಗುತ್ತಿತ್ತು. ಆದರೆ ಹೊಸ ಫೀಚರ್ಸ್ ಮೂಲಕ ಗ್ರೂಪ್‌ನಲ್ಲಿರುವ ಆಯ್ದ ವ್ಯಕ್ತಿಗಳಿಗೆ ಕರೆ ಮಾಡುವ ಅವಕಾಶ ನೀಡಲಾಗಿದೆ.

ಗ್ರೂಪ್ ಕಾಲ್‌ನಲ್ಲಿ ಆಯ್ದ ವ್ಯಕ್ತಿಗಳಿಗೆ ಕರೆ ಮಾಡುವ ಫೀಚರ್ಸ್ ವೀಡಿಯೋ ಹಾಗೂ ಆಡಿಯೋ ಕಾಲ್ ಎರಡಕ್ಕೂ ಅನ್ವಯವಾಗುತ್ತದೆ. ಇಷ್ಟೇ ಅಲ್ಲ ಗ್ರೂಪ್ ಕಾಲ್ ಆಯ್ಕೆ ಫೀಚರ್ಸ್ ಆಡಿಯಲ್ಲಿ ಒಂದು ಗ್ರೂಪ್‌ನಲ್ಲಿನ ಆಯ್ದ ವ್ಯಕ್ತಿಗಳನ್ನು ಸೇರಿಸಿ ಕಾಲ್ ಗ್ರೂಪ್ ಮಾಡಲು ಅವಕಾಶವಿದೆ ಎಂದು ವರದಿ ಹೇಳಿದೆ.

ಸದ್ಯ ನೂತನ ಫೀಚರ್ಸ್ ಬಿಟಾ ವರ್ಶನ್‌ನಲ್ಲಿ ಲಭ್ಯ. ಶೀಘ್ರದಲ್ಲೇ ಹೊಸ ಫೀಚರ್ಸ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಸೆಲೆಕ್ಟ್ ಕಾಲ್ ಆಯ್ಕೆಯಲ್ಲಿ ಗರಿಷ್ಠ 7 ಮಂದಿಗೆ ಕರೆ ಮಾಡಬಹುದು. ಈ ಕರೆಯ ನಡುವೆ ಗರಿಷ್ಠ 32 ಸದಸ್ಯರು ಸೇರಿಕೊಳ್ಳುಲು ಅಕಾಶ ನೀಡಲಾಗಿದೆ.

ಇನ್ನೊಂದು ಫೀಚರ್

ವಾಟ್ಸಾಪ್‌ ಇದೀಗ ಮತ್ತೊಂದು ಹೊಸ ಫೀಚರ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಈಗ ಒಂದೇ ವಾಟ್ಸಾಪ್‌ ಖಾತೆಯನ್ನು 4 ಮೊಬೈಲ್‌ಗಳಲ್ಲಿ ಬಳಸಲು ಅವಕಾಶ ಒದಗಿಸಲಾಗಿದೆ. ಈ ಮೊದಲು ಕೇವಲ ಒಂದೇ ಮೊಬೈಲ್‌ನಲ್ಲಿ ಬಳಸಬಹುದಾಗಿತ್ತು. ಮೂಲ ಫೋನ್‌ನಲ್ಲಿ ಲಾಗ್‌ಔಟ್‌ ಆಗದೇ ಡೆಸ್ಕ್ ಟಾಪ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಮಾಡುವ ರೀತಿ ಇನ್ನು ಮುಂದೆ ಹಲವು ಮೊಬೈಲ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ ಎಂದು ಕಂಪೆನಿ ಹೇಳಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *