Fathima Babu : ನಾನು ಯಾವ ಕಾಂಡೋಮ್ ಬಳಸುತ್ತೇನೆ ಎಂದು ಕೇಳುತ್ತೀರಾ ಎಂದು ನಟಿ ಪ್ರಶ್ನಿಸಿದ್ಯಾಕೆ?

Fathima Babu : ನಾನು ಯಾವ ಕಾಂಡೋಮ್ ಬಳಸುತ್ತೇನೆ ಎಂದು ಕೇಳುತ್ತೀರಾ ಎಂದು ನಟಿ ಪ್ರಶ್ನಿಸಿದ್ಯಾಕೆ?

ನ್ಯೂಸ್ ಆ್ಯರೋ‌ : ಕಲಾವಿದರ ಸಾಮಾಜಿಕ ಜಾಲತಾಣಗಳ ಖಾತೆಯಿಂದಾಗಿ ಹಲವು ಬಾರಿ ಚಿತ್ರಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತದೆ. ಅದಕ್ಕೆ ತಕ್ಕಂತೆ ಕಲಾವಿದರು ಕೆಲವೊಮ್ಮೆ ಪ್ರಶ್ನೋತ್ತರ ಸೆಷನ್ ನಡೆಸಿ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ. ಆದರೆ ಹಲವು ಬಾರಿ ಅಭಿಮಾನಿಗಳು ತೀರಾ ವೈಯಕ್ತಿಕ, ಮುಜುಗರದ ಪ್ರಶ್ನೆ ಕೇಳಿ ಕಲಾವಿದರಿಗೆ ಇರಿಸು ಮುರಿಸು ಉಂಟು ಮಾಡುತ್ತಾರೆ. ಅಂತಹದ್ದೇ ಒಂದು ಸಂದರ್ಭವನ್ನು ಕಾಲಿವುಡ್ ನಟಿ ಫಾತಿಮಾ ಬಾಬು ಎದುರಿಸಿದ್ದಾರೆ.

ಇತ್ತೀಚೆಗೆ ಫಾತಿಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಕೇಳಿದ ಪ್ರಶ್ನೆಗಳ ಸ್ಕ್ರೀನ್ ಶಾಟ್ ಅನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.

ಮುಸ್ಲಿಂ ಆಗಿದ್ದುಕೊಂಡು ಹಿಂದೂ ವ್ಯಕ್ತಿಯನ್ನು ಮದುವೆಯಾದ ನೀವು ಮಕ್ಕಳಿಗೇಕೆ ಮುಸ್ಲಿಂ ಹೆಸರುಗಳನ್ನು ಇಟ್ಟಿದ್ದೀರಿ? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ನಟಿ ಖಡಕ್ ಆಗಿ ಉತ್ತರಿಸಿ, ನನ್ನ ಮಕ್ಕಳಿಗೆ ಅವರ ಹೆಸರಿನ ಕುರಿತು ಯಾವುದೇ ಸಮಸ್ಯೆ ಇಲ್ಲ. ನಿಮಗೇನಾದರೂ ಇದರಿಂದ ತೊಂದರೆಯೇ? ಎಂದಿದ್ದಾರೆ.

ಅದಕ್ಕೆ ಅವನು ಉತ್ತರಿಸಿ, ನನಗೆ ಕೇಳಬೇಕು ಎನಿಸಿದ್ದರಿಂದ ಕೇಳಿದೆ ಎಂದನು. ಆಗ ಫಾತಿಮಾ, ನನ್ನ ಮದುವೆ ಹಿಂದೂ ವ್ಯಕ್ತಿಯ ಜೊತೆ ಮಸೀದಿಯಲ್ಲಿ ನಡೆಯಿತು. ಮುಸ್ಲಿಂ ಹೆಸರು ನಿಮಗೆ ಏಕೆ ದೊಡ್ಡ ವಿಷಯವಾಗಿದೆ? ಎಂದು ಪ್ರಶ್ನಿಸಿದ್ದಾರೆ.

ಆಗ ಆ ವ್ಯಕ್ತಿ, ಇದು ಸಾರ್ವಜನಿಕ ವೇದಿಕೆ. ನಾನು ಅನುಚಿತವಾದ ಏನನ್ನೂ ಕೇಳಲಿಲ್ಲ ಎಂದ. ಆಗ ಫಾತಿಮಾ, ಯಾವ ಸಾರ್ವಜನಿಕ ವೇದಿಕೆ? ಇದು ಸಾರ್ವಜನಿಕ ವೇದಿಕೆ ಎಂಬ ಕಾರಣಕ್ಕೆ ನಾನು ಯಾವ ಕಾಂಡೋಮ್ ಬಳಸುತ್ತೇನೆ ಎಂದು ಕೇಳುತ್ತೀರಾ? ಯಾವುದೇ ಕಾರಣಕ್ಕೂ ವೈಯಕ್ತಿಕ ವಿಚಾರ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಯಾಗಬಾರದು ಎಂದು ಬುದ್ಧಿವಾದ ಹೇಳಿದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *