ವಾಟ್ಸಪ್‌ನ COMPANION MODE ಬಗ್ಗೆ ನಿಮಗೆ ಗೊತ್ತಾ? – ಈ ಹೊಸ ಫೀಚರ್ ನ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ ನೋಡಿ..

ವಾಟ್ಸಪ್‌ನ COMPANION MODE ಬಗ್ಗೆ ನಿಮಗೆ ಗೊತ್ತಾ? – ಈ ಹೊಸ ಫೀಚರ್ ನ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ ನೋಡಿ..

ನ್ಯೂಸ್ ಆ್ಯರೋ : ಜಗತ್ತಿನ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಎನಿಸಿಕೊಂಡಿರುವ ವಾಟ್ಸಾಪ್ ತನ್ನ ಬಳಕೆದಾರರ ಅನಕೂಲಕ್ಕೆ ತಕ್ಕಂತೆ ಕಾಲ ಕಾಲಕ್ಕೆ ಹೊಸ ಹೊಸ ಫೀಚರ್ ಗಳನ್ನು ಅಳವಡಿಸುತ್ತಲೇ ಇರುತ್ತದೆ. ಈ ಮೂಲಕ ವಾಟ್ಸಾಪ್ ಬಳಕೆದಾರರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದೆ. ಇದೀಗ ವಾಟ್ಸಪ್‌ನಲ್ಲೊ ‘COMPANION MODE’ ಎಂಬ ಹೊಸ ಫೀಚರ್ ಅಳವಡಿಕೆಯಾಗಿದ್ದು, ಈ ಹೊಸ ಫೀಚರ್ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಏನಿದು COMPANION MODE?

ವಾಟ್ಸಾಪ್ ಇದೇ ವರ್ಷ COMPANION MODE ಅನ್ನು ಜಾರಿಗೆ ತರಲು ನಿರ್ಧರಿಸಿದೆ‌ ಎನ್ನಲಾಗಿದೆ.ಈ ಹೊಸ ಫೀಚರ್ ನೆರವಿನಿಂದಾಗಿ ಬಳಕೆದಾರರು ಏಕಕಾಲದಲ್ಲಿ ಒಂದೇ ವಾಟ್ಸಪ್‌ ಖಾತೆಯನ್ನು ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ಗಳು ಸೇರಿ ನಾಲ್ಕು ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ. ಕಂಪಾನಿಯನ್‌ ಮೋಡ್‌ನಲ್ಲಿ ವಾಟ್ಸಪ್‌ ಬಳಸುತ್ತಿರುವ ಡಿವೈಸ್‌ಗಳಲ್ಲಿ ವಾಟ್ಸಪ್‌ ಚಾಟ್‌, ವಾಯ್ಸ್‌ ಮತ್ತು ವಿಡಿಯೋ ಕಾಲ್‌ ಮಾಡಬಹುದು. ಆದರೆ ಹೊಸ ಅಪ್‌ಡೇಟ್‌, ಸ್ಟೇಟಸ್‌, ಚಾನಲ್‌ಗಳನ್ನು ವೀಕ್ಷಿಸಲು ಸಾಧ್ಯವಿಲ್ಲ.

ಕಂಪಾನಿಯನ್‌ ಮೋಡ್‌ ಬಳಸೋದು ಹೇಗೆ?

ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಐಒಎಸ್‌ ಮೂಲಕ ವಾಟ್ಸಪ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಬೇಕು. ಬಳಿಕ ಭಾಷೆ ಆಯ್ಕೆ ಮಾಡಬೇಕು. ಮೊಬೈಲ್‌ ನಂಬರ್‌ ದಾಖಲು ಮಾಡುವ ಪೇಜ್‌ ತೆರೆದುಕೊಳ್ಳಲಿದ್ದು ಮೊಬೈಲ್‌ ನಂಬರ್‌ ದಾಖಲಿಸುವ ಬದಲು ಬಲ ಭಾಗ ಮೇಲೆ ಮೆನು ಕ್ಲಿಕ್‌ ಮಾಡಬೇಕು.

ಇದರಲ್ಲಿನ LINK ANOTHER DEVICE ಆಪ್ಷನ್‌ ಕ್ಲಿಕ್‌ ಮಾಡಬೇಕು. ಅಲ್ಲಿ QR CODE ಕಾಣಿಸಲಿದೆ. ಅದನ್ನು ವಾಟ್ಸಪ್‌ ಖಾತೆ ಹೊಂದಿರುವ ಪ್ರೈಮರಿ ಡಿವೈಸ್‌ ಮೂಲಕ ಸ್ಕ್ಯಾನ್‌ ಮಾಡಿದರೆ ಲಿಂಕ್‌ ಆಗಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *