
WhatsApp Channel : ಇನ್ಮುಂದೆ ವಾಟ್ಸಾಪ್ ಚಾನೆಲ್ ಹವಾ – ಮಾಡೋದು ಹೇಗೆ? ಇದರ ಫೀಚರ್ಸ್ ಹೇಗಿದೆ ಗೊತ್ತಾ?
- ಟೆಕ್ ನ್ಯೂಸ್
- September 14, 2023
- No Comment
- 96
ನ್ಯೂಸ್ ಆ್ಯರೋ : ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೇ ಹೊಸ ಹೊಸ ಫೀಚರ್‌ಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಇದೀಗ ವಾಟ್ಸಾಪ್ ಚಾನೆಲ್ ಅನ್ನು ಪರಿಚಯಿಸಿದೆ. ಈಗಾಗಲೇ 150ಕ್ಕೂ ಅಧಿಕ ದೇಶಗಳಲ್ಲಿ ವಾಟ್ಸಾಪ್ ಚಾನೆಲ್ ಫೀಚರ್ ಬಳಕೆದಾರರಿಗೆ ಲಭ್ಯವಾಗಿದೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಅವರು ಹೇಳಿದ್ದಾರೆ.
ವಾಟ್ಸಾಪ್ ಚಾನೆಲ್‌ನ ವಿಶೇಷತೆಯೇನು?
ಸೆಲೆಬ್ರಿಟಿಗಳು, ಕ್ರೀಡಾ ತಂಡಗಳು, ರಾಜಕೀಯ ಪಕ್ಷಗಳು, ಕಲಾವಿದರು, ಚಿಂತಕರು ಹಾಗೂ ಸುದ್ದಿ ಸಂಸ್ಥೆಗಳ ಅಪ್ಡೇಟ್ ಗಳನ್ನೂ ನಾವು ಇನ್ನು ಮುಂದೆ ವಾಟ್ಸಾಪ್ ಚಾನೆಲ್ ಮೂಲಕ ಪಡೆಯಬಹುದು. ಇದು ಇನ್‌ಸ್ಟಾಗ್ರಾಂ ಹಾಗೆಯೇ ಕಾರ್ಯನಿರ್ವಹಿಸಲಿದ್ದು, ಏಕಮುಖ ಪ್ರಸಾರವಾಗುತ್ತದೆ. ಅಂದರೆ ನಾವು ವಾಟ್ಸಾಪ್ ಚಾನೆಲ್‌ನಿಂದ ಮಾಹಿತಿಯನ್ನು ಪಡೆಯಬಹುದೇ ಹೊರತು ನಮಗೆ ಯಾವುದೇ ಪೋಸ್ಟ್ ಅನ್ನು ಮಾಡಲು ಅವಕಾಶವಿರುವುದಿಲ್ಲ. ಆದರೆ ಸಂದೇಶಗಳಿಗೆ ನೀವು ಇಮೊಜಿ ಮೂಲಕ ರಿಯಾಕ್ಟ್ ಮಾಡಬಹುದಾಗಿದೆ.
ಈ ಬಗ್ಗೆ ಮೆಟಾ ಒಡೆತನದ ಅಪ್ಲಿಕೇಶನ್ ಬ್ಲಾಕ್‌ನಲ್ಲಿ ಪೋಸ್ಟ್ ಮಾಡಿದೆ. “ಇಂದು ನಾವು ಭಾರತ ಮತ್ತು 150 ಕ್ಕೂ ಹೆಚ್ಚು ದೇಶಗಳಲ್ಲಿ ವಾಟ್ಸಾಪ್ ಚಾನೆಲ್‌ಗಳನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ಈ ಮೂಲಕ ಜನಸಾಮ್ಯಾನರಿಗೆ ಮಾಹಿತಿಗಳು ನೇರವಾಗಿ ಲಭ್ಯವಾಗಲಿದೆ. ಇದಕ್ಕೆ ಜನರು ಫಾಲೋ ಮಾಡುವ ಸಂಸ್ಥೆಗಳು, ಕ್ರೀಡಾ ತಂಡಗಳು, ಕಲಾವಿದರು ಮತ್ತು ಚಿಂತಕರನ್ನು ನಾವು ಸ್ವಾಗತಿಸುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಮಾತನಾಡಿ, ನಿಮ್ಮೆಲ್ಲರನ್ನೂ ವಾಟ್ಸಾಪ್ ಚಾನೆಲ್‌ಗಳಿಗೆ ಪರಿಚಯಿಸಲು ಉತ್ಸುಕನಾಗಿದ್ದೇನೆ. ಇದರಿಂದ ನಿಮ್ಮ ಇಷ್ಟದ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಬೇಕಾದ ಮಾಹಿತಿಯನ್ನು ಇದರ ಮೂಲಕ ಪಡೆಯಬಹುದು. ಈ ಮೂಲಕ ನಿಮ್ಮನ್ನು ವಿಶ್ವದಾದ್ಯಂತ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಕಂಪನಿಯ ಪ್ರಕಾರ, ಚಾನೆಲ್‌ಗಳೊಂದಿಗೆ, ವಾಟ್ಸಾಪ್ ಲಭ್ಯವಿರುವ ಅತ್ಯಂತ ಖಾಸಗಿ ಪ್ರಸಾರ ಸೇವೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಚಾನೆಲ್ ಗಳು ನಿಮ್ಮ ಚಾಟ್ ಗಳಿಂದ ಪ್ರತ್ಯೇಕವಾಗಿವೆ. ನೀವು ಯಾರನ್ನು ಫಾಲೋ ಮಾಡಲು ಆಯ್ಕೆ ಮಾಡುತ್ತೀರಿ ಎಂಬುದು ಇತರ ಫಾಲ್ಲೋವೆರ್ಸ್ ಗಳಿಗೆ ಗೋಚರಿಸುವುದಿಲ್ಲ. ಅಪ್ಲಿಕೇಶನ್ ಅಡ್ಮಿನ್ ಗಳು ಮತ್ತು ಫಾಲ್ಲೋವರ್ಸ್ ಗಳ ವೈಯಕ್ತಿಕ ಮಾಹಿತಿ ಇಲ್ಲಿ ಗೌಪ್ಯವಾಗಿರಲಿದೆ.
ವಾಟ್ಸಾಪ್ ಚಾನೆಲ್ ಬಳಕೆ ಮಾಡುವುದು ಹೇಗೆ?
ವಾಟ್ಸಾಪ್ ನಲ್ಲಿ ಇನ್ನು ಮುಂದೆ ಸ್ಟೇಟಸ್ ಬದಲು ಅಪ್ಡೇಟ್ ಎಂಬ ಹೊಸ ಟ್ಯಾಬ್ ಬರಲಿದ್ದು ಅಲ್ಲಿ ನೀವು ಚಾನೆಲ್ ಗಳನ್ನು ಕಾಣಬಹುದು – ಅಲ್ಲಿ ನೀವು ಫಾಲೋ ಮಾಡಲು ಆಯ್ಕೆ ಮಾಡಿ ಕೊಂಡ ಚಾನೆಲ್ ಗಳನ್ನೂ ಕಾಣಬಹುದು.
ವಾಟ್ಸಾಪ್ ಚಾನೆಲ್ ಗಳ ವೈಶಿಷ್ಟ್ಯಗಳು:
ವರ್ಧಿತ ಡೈರೆಕ್ಟರಿ
ನಿಮ್ಮ ದೇಶದ ಆಧಾರದ ಮೇಲೆ ಸ್ವಯಂಚಾಲಿತವಾಗಿ ಫಿಲ್ಟರ್ ಮಾಡಲಾದ ಚಾನೆಲ್ ಗಳನ್ನು ನೀವು ಈಗ ಕಾಣಬಹುದು. ಫಾಲೋವರ್ಸ್ ಗಳ ಸಂಖ್ಯೆಯ ಆಧಾರದ ಮೇಲೆ ಹೊಸ, ಹೆಚ್ಚು ಸಕ್ರಿಯ ಮತ್ತು ಜನಪ್ರಿಯ ಚಾನೆಲ್ ಗಳನ್ನು ಸಹ ನೀವು ವೀಕ್ಷಿಸಬಹುದು.
ಪ್ರತಿಕ್ರಿಯೆಗಳು
ಪ್ರತಿಕ್ರಿಯೆ ನೀಡಲು ಮತ್ತು ಒಟ್ಟು ಪ್ರತಿಕ್ರಿಯೆಗಳ ಎಣಿಕೆಯನ್ನು ನೋಡಲು ನೀವು ಇಮೋಜಿಗಳನ್ನು ಬಳಸಿಕೊಂಡು ಪ್ರತಿಕ್ರಿಯಿಸಬಹುದು. ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದನ್ನು ಫಾಲೋವರ್ಸ್ ಗಳಿಗೆ ತೋರಿಸಲಾಗುವುದಿಲ್ಲ.
ಎಡಿಟಿಂಗ್
ಶೀಘ್ರದಲ್ಲೇ, ಚಾನೆಲ್ ಅಡ್ಮಿನ್ ಗಳು ತಮ್ಮ ಅಪ್ಡೇಟ್ ಗಳನ್ನು 30 ದಿನಗಳವರೆಗೆ ಬದಲಾವಣೆಗಳನ್ನು ಮಾಡಲು ಸಾಧ್ಯವಾಗುತ್ತದೆ, ಮತ್ತು ಸಂದೇಶಗಳು 30 ದಿನಗಳ ವರೆಗೆ ಇರಲಿದ್ದು ಬಳಿಕ ಸರ್ವರ್ ಗಳಿಂದ ಸ್ವಯಂಚಾಲಿತವಾಗಿ ಅಳಿಸಿಹೋಗಲಿದೆ.
ಫಾರ್ವರ್ಡಿಂಗ್ –
ಚಾನೆಲ್ ನಿಂದ ಯಾವುದೇ ಸಂದೇಶಗಳನ್ನು ಬೇರೆ ಚಾಟ್ ಗಳಿಗೆ ಅಥವಾ ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿದಾಗಲೆಲ್ಲಾ ಅದು ಚಾನಲ್ ನ ಲಿಂಕ್ ಅನ್ನು ಒಳಗೊಂಡಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಅದು ಆ ಚಾನೆಲ್ ನಲ್ಲಿ ಓಪನ್ ಆಗುತ್ತದೆ. ಆಮೇಲೆ ನೀವು ಆ ಚಾನೆಲ್ ನಿಂದ ನಿತ್ಯ ಅಪ್ಡೇಟ್ ಪಡೆಯ ಬೇಕಾಗಿದ್ದಲ್ಲಿ ಅದನ್ನು ಫಾಲೋ ಮಾಡಬಹುದು.
ಮೆಟಾ ಪ್ರಕಾರ, ಮುಂದಿನ ಕೆಲವೇ ವಾರಗಳಲ್ಲಿ ವಾಟ್ಸಾಪ್ ಚಾನೆಲ್‌ಗಳು ಜಾಗತಿಕವಾಗಿ ಹೊರಬರಲಿವೆ ಹಾಗೂ ಚಾನೆಲ್ ನಲ್ಲಿ ಇನ್ನಷ್ಟು ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತದೆ ಮತ್ತು ಬಳಕೆದಾರರಿಂದ ಪಡೆಯುವ ಪ್ರತಿಕ್ರಿಯೆಯ ಆಧಾರದ ಮೇಲೆ ಚಾನೆಲ್ ಗಳನ್ನು ವಿಸ್ತರಿಸುತ್ತಾರೆ.
ವಾಟ್ಸಾಪ್ ನಲ್ಲಿ ಚಾನೆಲ್ ರಚಿಸುವುದು ಹೇಗೆ?
- ವಾಟ್ಸಾಪ್ ವೆಬ್ ತೆರೆಯಿರಿ ಮತ್ತು ಚಾನೆಲ್‌ಗಳ ಐಕಾನ್ ಕ್ಲಿಕ್ ಮಾಡುವ ಮೂಲಕ ಚಾನೆಲ್‌ಗಳಿಗೆ ಹೋಗಿ
- ಚಾನೆಲ್ ರಚಿಸಿ > ಕ್ಲಿಕ್ ಮಾಡಿ.
- ಮುಂದುವರಿಯಿರಿ ಕ್ಲಿಕ್ ಮಾಡಿ ಮತ್ತು ಆನ್ ಸ್ಕ್ರೀನ್ ಪ್ರಾಂಪ್ಟ್ ಗಳ ಮೂಲಕ ಮುಂದುವರಿಸಿ.
- ನಿಮ್ಮ ಚಾನಲ್ ರಚಿಸುವುದನ್ನು ಪೂರ್ಣಗೊಳಿಸಲು ಚಾನಲ್ ಹೆಸರನ್ನು ಸೇರಿಸಿ. ನೀವು ಯಾವುದೇ ಸಮಯದಲ್ಲಿ ಹೆಸರನ್ನು ಮತ್ತೆ ಬದಲಿಸಬಹುದು.
- ವಿವರಣೆ ಮತ್ತು ಐಕಾನ್ ಸೇರಿಸುವ ಮೂಲಕ ನಿಮ್ಮ ಚಾನಲ್ ಅನ್ನು ಗ್ರಾಹಕೀಯಗೊಳಿಸಲು ನೀವು ಆಯ್ಕೆ ಮಾಡಬಹುದು ಅಥವಾ ನಂತರದವರೆಗೂ ಕಾಯಬಹುದು.
- ಚಾನೆಲ್ ವಿವರಣೆಯನ್ನು ಸೇರಿಸಿ: ನಿಮ್ಮ ಚಾನೆಲ್ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಚಾನೆಲ್ ನ ಫಾಲ್ಲೋವೆರ್ಸ್ ಗಳಿಗೆ ಅರ್ಥವಾಗುವಂತೆ ಕೆಲವು ಪದಗಳಲ್ಲಿ ಬರೆಯಿರಿ.
- ಚಾನೆಲ್ ಐಕಾನ್ ಸೇರಿಸಿ: ನಿಮ್ಮ ಚಾನೆಲ್ ನ ಲೋಗೋ ಅನ್ನು ಅಪ್ಲೋಡ್ ಮಾಡಿ.
ನಂತರ ಕ್ಕ್ರಿಯೇಟ್ ಚಾನೆಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿಗೆ ನಿಮ್ಮ ಚಾನೆಲ್ ಬಳಕೆದಾರರಿಗೆ ಲಭ್ಯ.
ಈಗಾಗಲೇ ಹಲವು ಸೆಲೆಬ್ರಿಟಿಗಳು ವಾಟ್ಸಾಪ್ ಚಾನೆಲ್ ಗಳನ್ನು ಸೃಷ್ಟಿಸಿಕೊಂಡಿದ್ದು, ಅವುಗಳ ಲಿಂಕ್ ಗಳು ಇಲ್ಲಿವೆ…
