UPI Payment Rule Changed! Transfer of amount above Rs.2000 takes 4 hours

ಇನ್ಮುಂದೆ 2 ಸಾವಿರಕ್ಕೂ ಅಧಿಕ UPI ಪೇಮೆಂಟ್ ಮಾಡಿದ್ರೆ 4 ಗಂಟೆ ಕಾಯಲೇಬೇಕು – ಬದಲಾಯ್ತು ನೋಡಿ UPI ಪೇಮೆಂಟ್ ರೂಲ್ಸ್..!!

ನ್ಯೂಸ್ ಆ್ಯರೋ : ಇತ್ತೀಚೆಗಂತೂ ಒಂದಲ್ಲ ಒಂದು ರೀತಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಆನ್ಲೈನ್ ಪೇಮೆಂಟ್ ನಲ್ಲೂ ವಂಚನೆ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಇಂತಹ ಪ್ರಕರಣಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಡಿಜಿಟಲ್ ವಹಿವಾಟಿನತ್ತ ಜನರ ಆಸಕ್ತಿ ಹೆಚ್ಚುತ್ತಿರುವಂತೆ,
ಪಾವತಿ ವಂಚನೆಯ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ, ಸೈಬರ್ ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗತೊಡಗಿವೆ. ಅವುಗಳನ್ನು ನಿಯಂತ್ರಿಸಲು ಸರ್ಕಾರ ಮತ್ತು ಆರ್‌ಬಿಐ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಪಾವತಿ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲವು ನಿಯಮಗಳನ್ನು ತರಲು ಸರ್ಕಾರ ನಿರ್ಧರಿಸಿದೆ.

ಹೌದು, ವಂಚನೆ ಪ್ರಕರಣಗಳನ್ನು ತಡೆಯಲು ಸರ್ಕಾರವು ಕೆಲವು ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಇಬ್ಬರು ವ್ಯಕ್ತಿಗಳ ನಡುವೆ ಆನ್‌ಲೈನ್ ವಹಿವಾಟು ನಡೆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇಷ್ಟು ಮಾತ್ರವಲ್ಲದೆ ಕನಿಷ್ಠ ಸಮಯ ಮಿತಿಯನ್ನು ವಿಧಿಸುವ ಯೋಜನೆಯೂ ಸರ್ಕಾರದ ಮುಂದೆ ಇದೆ ಎನ್ನಲಾಗುತ್ತಿದೆ.

ಅನುಷ್ಠಾನಕ್ಕೆ ತರಲಿರುವ ನೂತನ ನಿಯಮಗಳೇನು..?

  1. ಮೊದಲ ವಹಿವಾಟು ಪೂರ್ಣಗೊಳ್ಳಲು ಬೇಕು 4 ಗಂಟೆ :

ಆನ್‌ಲೈನ್ ಪಾವತಿ ವಂಚನೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅಂದರೆ ಯಾವುದೇ ಇಬ್ಬರು ವ್ಯಕ್ತಿಗಳ ನಡುವಿನ ಮೊದಲ ಬಾರಿಯ ವಹಿವಾಟಿನಲ್ಲಿ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡಲಿದೆ ಎಂದು ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದರ ಅಡಿಯಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಕನಿಷ್ಠ ಕಾಲಮಿತಿ ವಿಧಿಸುವ ಯೋಜನೆ ಇದೆ. 2,000 ಕ್ಕಿಂತ ಹೆಚ್ಚಿನ ವಹಿವಾಟುಗಳು ನಡೆದಾಗ ಇಬ್ಬರು ಬಳಕೆದಾರರ ನಡುವಿನ ಮೊದಲ ವಹಿವಾಟು ಪೂರ್ಣಗೊಳ್ಳಲು 4-ಗಂಟೆಗಳ ಸಮಯಾವಕಾಶವಿರುತ್ತದೆ.

  1. ಸೈಬರ್ ಭದ್ರತೆಗೆ ಈ ನಿಯಮಗಳು ಅವಶ್ಯಕ :

4 ಗಂಟೆಗಳ ಪ್ರಕ್ರಿಯೆಯನ್ನು ಸೇರಿಸುವುದರಿಂದ ಡಿಜಿಟಲ್ ಪಾವತಿಗಳಲ್ಲಿ ಕೆಲವು ಅಡ್ಡಿ ಉಂಟಾಗಬಹುದು ಎನ್ನುವ ಕಾಳಜಿಯೂ ಸರ್ಕಾರಕ್ಕೆ ಇದೆ. ಈ ಸಂದರ್ಭದಲ್ಲಿ ಗ್ರಾಹಕರು ತ್ವರಿತ ಪಾವತಿ ಸೇವೆ, ಏಕೀಕೃತ ಪಾವತಿ ಇಂಟರ್ಫೇಸ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಮೂಲಕ ಪಾವತಿಗಳನ್ನು ಮಾಡಲು ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು.

  1. 24 ಗಂಟೆಗಳಲ್ಲಿ ಗರಿಷ್ಠ ಮೊತ್ತ 5 ಸಾವಿರ ರೂ

ಪ್ರಸ್ತುತ, ಬಳಕೆದಾರರು ಆನ್‌ಲೈನ್ ವಹಿವಾಟುಗಳಿಗಾಗಿ ಹೊಸ UPI ಖಾತೆಯನ್ನು ರಚಿಸಿದರೆ, ಅವರು 24 ಗಂಟೆಗಳಲ್ಲಿ ಗರಿಷ್ಠ 5,000 ರೂ.ವರೆಗೆ ಮೊದಲ ವಹಿವಾಟು ಮಾಡಬಹುದು. ಅದೇ ರೀತಿ, ಇದು ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ ಗೂ ಅನ್ವಯಿಸುತ್ತದೆ. ಮೊದಲ ಬಾರಿಗೆ ಖಾತೆಯನ್ನು ರಚಿಸಿದರೆ, 24 ಗಂಟೆಗಳಲ್ಲಿ 50 ಸಾವಿರ ರೂ. ವಹಿವಾಟು ನಡೆಸಬಹುದು.

ಈ ಮುಖೇನವಾದರೂ ಸೈಬರ್ ಕ್ರೈಮ್ ಪ್ರಕರಣಗಳು, ಆನ್ಲೈನ್ ವಂಚನೆಗಳಿಗೆ ಕಡಿವಾಣ ಹಾಕಬಹುದು ಎಂಬುವುದು ಕೇಂದ್ರದ ನಿರ್ಧಾರ. ಈ ನಿಯಮಗಳು ಇನ್ನು ಭವಿಷ್ಯದಲ್ಲಿ ಯಾವ ರೀತಿಯಾಗಿ ಅನುಷ್ಠಾನಕ್ಕೆ ಬರಲಿದೆ ಮತ್ತು ಇದು ಜನರಿಗೆ ಯಾವ ರೀತಿ ಪ್ರಯೋಜನ ಕೊಡುತ್ತೆ ಅನ್ನೋದನ್ನು ನೋಡಬೇಕಷ್ಟೆ..!!