ಪುತ್ತೂರು : 2006ರಲ್ಲಿ ಅಕ್ಷತಾ ಅತ್ಯಾಚಾರ ನಡೆದ ಸ್ಥಳದಲ್ಲೇ ಮಹಿಳೆ ಮೇಲೆರಗಿದ ಕಾಮ ಪಿಶಾಚಿ – ಆರ್ಯಾಪು ಸಂಶುದ್ದೀನ್ ಆಲಿ ಬಂಧನ‌ ; ಈ ಘನಘೋರ ಘಟನೆಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ..!

ನ್ಯೂಸ್ ಆ್ಯರೋ : ಅದೆಷ್ಟೋ ಅತ್ಯಾಚಾರ ಪ್ರಕರಣಗಳು ಮೂಲೆಗುಂಪಾಗಿರುತ್ತದೆ. ಅತ್ಯಾಚಾರಿಗಳು ಕಾನೂನಿನ ಭಯವಿಲ್ಲದೆ ಸ್ವತಂತ್ರವಾಗಿ ಜೀವಿಸುತ್ತಿರುತ್ತಾರೆ. ಸಮಾಜದ ಕಾನೂನು ಸುವ್ಯವಸ್ಥೆ ಸಡಿಲಗೊಂಡಂತೆ ವಿಕೃತಕಾಮಿಗಳ ದಾಹವೂ ನಿರ್ಭಯವಾಗಿ ಹೆಚ್ಚುತ್ತಾ ಹೋಗುತ್ತದೆ. ಇದಕ್ಕೆ 2006ರಲ್ಲಿ ನಡೆದ ಪುತ್ತೂರಿನ ಅತ್ಯಾಚಾರ ಪ್ರಕರಣವೂ ಒಂದು. ಇದೀಗ ಅದೇ ಜಾಗದಲ್ಲಿ ಮತ್ತೊಬ್ಬ ಚಪಲ ಚೆನ್ನಿಗರಾಯ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು ಪ್ರಕರಣದ ಆರೋಪಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

ನಗರದ ಸಾಲ್ಮರದ ಗುಂಪಕಲ್ಲಿನಲ್ಲಿ ಮಹಿಳೆಗೆ ಮದ್ಯ ಕುಡಿಸಿ ಕ್ರೂರವಾಗಿ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದ್ದು, ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬಳಿಕ ಅದು ಅತ್ಯಾಚಾರ ಎಂದು ತಿಳಿದು ಬಂದಿದ್ದು, ಅರೋಪಿ ಕಾಮುಕನನ್ನು ಹೆಡೆಮುರಿಕಟ್ಟುವಲ್ಲಿ ಪುತ್ತೂರು ಪೋಲೀಸರು ಯಶಸ್ವಿಯಾಗಿದ್ದಾರೆ.

ಏನಿದು ಘಟನೆ:

ಹಾಸನ ತಾಲೂಕು ಚೆನ್ನರಾಯಪಟ್ಟಣದ ನಿವಾಸಿಯಾಗಿರುವ ಸಂತ್ರಸ್ಥ ಮಹಿಳೆಯು, ದಿನಾಂಕ 24.11.2023 ರಂದು ರಾತ್ರಿ ಸಮಯ, ಪುತ್ತೂರು ಬಸ್ ನಿಲ್ದಾಣದಲ್ಲಿ ಇದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಸದರಿ ಮಹಿಳೆಗೆ ಮದ್ಯವನ್ನು ಸೇವಿಸಲು ನೀಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ, ಪುತ್ತೂರು ನಗರ ಠಾಣೆಯಲ್ಲಿ ದಿನಾಂಕ: 25-11-2023 ರಂದು ವರದಿಯಾಗಿದ್ದ ಅ.ಕ್ರ 114/2023 ಕಲಂ 376 ಐ.ಪಿ.ಸಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ನಡೆಸಲಾಗಿ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿಯಾದ ಆರೋಪಿ ಸಂಶುದ್ದೀನ್ ಆಸ್ಗರ್ ಆಲಿ (23) ಎಂಬಾತನನ್ನು ಪುತ್ತೂರು ನಗರ ಠಾಣಾ ಪೊಲೀಸರು ನ.28ರಂದು ಸಂಜೆ ಪುತ್ತೂರು KSRTC ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೋಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಮೂಲತಃ ಆರ್ಯಾಪು ನಿವಾಸಿಯಾಗಿದ್ದು ಬನ್ನೂರು ಗ್ರಾಮದ ಸಂಶುದ್ದೀನ್ ಅಸ್ಲರ್ ಅಲಿ (23) ಎಂದು ಗುರುತಿಸಲಾಗಿದೆ. ಈತ ಮಹಿಳೆಗೆ ಮದ್ಯ ನೀಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತನ್ನ ದಾಹ ತೀರಿಸಿಕೊಂಡಿದ್ದಾನೆ.

ಇನ್ನೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರಿನ ಭಜರಂಗದಳ ಇದೊಂದು ಜಿಹಾದಿ ಮಾನಸಿಕತೆಯ ಕೃತ್ಯ, ಇದು ಒಬ್ಬರಿಂದ ಅಸಾಧ್ಯ, ಇದು ಒಂದು ಗುಂಪಿನ ಕೆಲಸ ಎಂದು ಸಾಮೂಹಿಕ ಅತ್ಯಾಚಾರದ ಶಂಕೆಯನ್ನು ವ್ಯಕ್ತಪಸಿದ್ದು, ಪೋಲೀಸ್ ಇಲಾಖೆ ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ‌.

ಇದೇ ಪ್ರದೇಶದಲ್ಲಿ 2006ರಲ್ಲಿ ಸತ್ತರ್ ಎನ್ನುವವನಿಂದಲೂ ಅಕ್ಷತಾ ಎನ್ನುವ ಯುವತಿಯ ಕೊಲೆಯೂ ನಡೆದು ಭಾರೀ ಪ್ರತಿಭಟನೆ ನಡೆದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ಮತ್ತು ಗಾಂಜಾ ಪ್ರಕರಣ ನಡೆಯುತ್ತಿರುವ ಬಗ್ಗೆ ಕೂಡಾ ಹಲವು ದೂರುಗಳು ದಾಖಲಾಗಿವೆ.

ಈ ಮಾಹಿತಿಗೆ ಸಂಬಂಧಪಟ್ಟಂತೆ ಪೊಲೀಸರು ಕಾರ್ಯಪ್ರವೃತ್ತರಾಗಬೇಕಿದೆ. ಆ ಮೂಲಕ ಪುತ್ತೂರು ತಾಲ್ಲೂಕನ್ನು ಗಾಂಜಾ ಮುಕ್ತವನ್ನಾಗಿ, ಶಾಂತಿಧಾಮವಾಗಿ ನಿರ್ಮಾಣ ಮಾಡುವ ಬಹುದೊಡ್ಡ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ.