
10 ನಿಮಿಷ ಚಾರ್ಜ್ ಮಾಡಿದ್ರೆ 1200KM ಮೈಲೇಜ್..! – ಈ ಅತ್ಯಾಧುನಿಕ ಟೊಯೋಟಾ ಎಲೆಕ್ಟ್ರಿಕ್ ಕಾರಿನ ಎದುರು ಟೆಸ್ಲಾ ಕೂಡ ಲೆಕ್ಕಕ್ಕಿಲ್ಲ..!
- ಟೆಕ್ ನ್ಯೂಸ್
- November 9, 2023
- No Comment
- 69
ನ್ಯೂಸ್ ಆ್ಯರೋ : ವಾಹನ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕಲ್ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ವಿವಿಧ ಹೆಸರಾಂತ ವಾಹನ ತಯಾರಿಕಾ ಕಂಪೆನಿಗಳು ವಿನೂತನ ಮಾದರಿಯ ಎಲೆಕ್ಟ್ರಿಕಲ್ ಕಾರುಗಳನ್ನು ಪರಿಚಯಿಸುವುದರೊಂದಿಗೆ ಮಾರುಕಟ್ಟೆಯಲ್ಲಿರುವ ಎಲ್ಲಾ ಮಾದರಿಯ ವಾಹನಗಳಿಗೂ ಠಕ್ಕರ್ ನೀಡುತ್ತಿದೆ. ಸದ್ಯ, ಜಪಾನಿನ ಜನಪ್ರಿಯ ವಾಹನ ತಯಾರಿಕಾ ಕಂಪೆನಿಯಾದ ಟೊಯೋಟಾ ಎಲೆಕ್ಟ್ರಿಕಲ್ ವಾಹನಗಳಲ್ಲಿ ಲಭ್ಯವಿರುವ ಬ್ಯಾಟರಿಗಿಂತ ಹೆಚ್ಚಿನ ಶಕ್ತಿಶಾಲಿ ಬ್ಯಾಟರಿ ಅಳವಡಿಸಿ ಹೊಸದೊಂದು ಅತ್ಯಾಧುನಿಕ ಕಾರು ತಯಾರಿಸಿದ್ದು, ಈ ಎಲೆಕ್ಟ್ರಿಕಲ್ ಕಾರು 10 ನಿಮಿಷ ಚಾರ್ಜ್ ಮಾಡಿದರೆ ಬರೋಬ್ಬರಿ 1200KM ಮೈಲೇಜ್ ನೀಡುತ್ತದೆ.
ಅತ್ಯಾಧುನಿಕ ಬ್ಯಾಟರಿ ಅಳವಡಿಕೆ!
ಇದೀಗ ವಿಶ್ವದ ಜನಪ್ರಿಯ ಕಾರು ತಯಾರಕ ಕಂಪೆನಿ ಎನಿಸಿಕೊಂಡಿರುವ ಟೊಯೋಟಾ ಎಲೆಕ್ಟ್ರಿಕಲ್ ಕಾರುಗಳಿಗಾಗಿ ‘ಸೋಲಿಡ್ ಸ್ಟಾಟ್ ಬ್ಯಾಟರಿ’ಗಳನ್ನು ತಯಾರಿಸುತ್ತಿದೆ. ಟೊಯೋಟಾ ಕಂಪೆನಿಯು ಇತ್ತೀಚೆಗೆ ಬ್ಯಾಟರಿಗಳ ವೆಚ್ಚ ಹಾಗೂ ಗಾತ್ರವನ್ನು ಅರ್ದದಷ್ಟು ಕಡಿಮೆಗೊಳಿಸಬಹುದಾದ ಪ್ರಗತಿಯನ್ನು ತಲುಪಿದೆ ಎಂದು ಹೇಳಿಕೊಂಡಿದೆ. ಒಂದು ವೇಳೆ ಈ ಅತ್ಯಾಧುನಿಕ ಬ್ಯಾಟರಿ ಅಳವಡಿಸಿದ ವಾಹನಗಳು ರಸ್ತೆಗಿಳಿದರೆ ಈಗಿರುವ ಎಲೆಕ್ಟ್ರಿಕಲ್ ವಾಹನಗಳ ಬೆಲೆ ಶೇ.50 ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
1200KM ಮೈಲೇಜ್ ನೀಡುವ ಕಾರು!
ಇನ್ನು ಟೊಯೋಟಾ ಕಂಪೆನಿಯು ಈ ಬ್ಯಾಟರಿ ತಂತ್ರಜ್ಞಾನದ ಮುಂದಿನ ಹಂತಕ್ಕಾಗಿ ಘನ ಸ್ಥಿತಿಯ ಬ್ಯಾಟರಿಗಳ ಬೃಹತ್ ಉತ್ಪಾದನೆಯಲ್ಲಿ ಕೆಲಸ ಮಾಡಲು ಜಪಾನಿನ ಪ್ರಮುಖ ತೈಲ ಕಂಪೆನಿಯಾದ ಐಡೆಮಿಟ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಎನ್ನಲಾಗಿದೆ. ಒಂದು ವೇಳೆ ಈ ಒಪ್ಪಂದ ಯಶಸ್ವಿಯಾದರೆ ಘನ ಸ್ಥಿತಿಯ ಬ್ಯಾಟರಿಗಳು EV ಗಳ ವ್ಯಾಪ್ತಿಯನ್ನು 1200KM ಗೆ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದುತ್ತದೆ.
ಈ ಬ್ಯಾಟರಿ ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ಇನ್ನು ಈ ಅತ್ಯಾಧುನಿಕ ಕಾರು ಯಾವಾಗ ಮಾರುಕಟ್ಟೆಗೆ ಬರಲಿದೆ ಎಂಬ ಬಗ್ಗೆ ಕಂಪೆನಿಯೂ ಅಧೀಕೃತ ಮಾಹಿತಿ ಹಂಚಿಕೊಂಡಿಲ್ಲ.