Palak Paneer Recipe : ತಿಂದಿದ್ದೀರಾ ಹೋಟೆಲ್ ಶೈಲಿಯ ಪಾಲಕ್ ಪನೀರ್? -ಇಷ್ಟು ಸುಲಭವಾಗಿ ಮಾಡಬಹುದು ಈ ರುಚಿಯಾದ ಖಾದ್ಯ..!

Palak Paneer Recipe : ತಿಂದಿದ್ದೀರಾ ಹೋಟೆಲ್ ಶೈಲಿಯ ಪಾಲಕ್ ಪನೀರ್? -ಇಷ್ಟು ಸುಲಭವಾಗಿ ಮಾಡಬಹುದು ಈ ರುಚಿಯಾದ ಖಾದ್ಯ..!

ನ್ಯೂಸ್ ಆ್ಯರೋ : ಒಂದು ಕಡೆ ದೀಪಾವಳಿ ಹಬ್ಬ ಸಮೀಪಿಸುತ್ತಿದೆ ಮತ್ತೊಂದೆಡೆ, ಚಿಟಪಟ ಮಳೆ ಇನ್ನೂ ಕಡಿಮೆಯಾಗಿಲ್ಲ. ಹೀಗಿರುವಾಗ ಸುಲಭವಾಗಿ ಮಾಡುವ ಯಾವುದಾದರೂ ರುಚಿಗಟ್ಟಾದ ಖಾದ್ಯ ಇದ್ರೆ ಚೆನ್ನಾಗಿರುತ್ತೆ ಅಂತ ತುಂಬಾ ಜನ ಯೋಚನೆ ಮಾಡ್ತಾರೆ‌. ಆ ನಿಮ್ಮ ಯೋಚನೆಗೆ ತಕ್ಕಂತೆ ಇಲ್ಲೊಂದು ಸೂಪರ್ ರೆಸಿಪಿ ಇದೆ.

ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ರೋಟಿ, ಬಟರ್ ನಾನ್, ಕುಲ್ಚಾ ಮುಂತಾದ ಆಹಾರಗಳೊಂದಿಗೆ ಗ್ರೇವಿ ತಿಂದಿರುತ್ತೀರಿ. ಗ್ರೇವಿಗಳಲ್ಲಿ ಅನೇಕ ವಿಧಗಳಿವೆ. ಕಾಜೂ ಗ್ರೇವಿ, ಪನೀರ್ ಗ್ರೇವಿ, ಪಾಲಕ್ ಪನೀರ್ ಮುಂತಾದವುಗಳು ರೋಟಿಗಳಿಗೆ ಅದ್ಭುತ ಕಾಂಬಿನೇಷನ್ ಆಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಾಲಕ್ ಪನೀರ್ ಅನ್ನು ಸುಲಭವಾಗಿ ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇವೆ.

ಬೇಕಾಗುವ ಸಾಮಾಗ್ರಿಗಳು:

ಪಾಲಕ್ ಸೊಪ್ಪು – 1 ಕಪ್
ಪನೀರ್ ಕ್ಯೂಬ್ಸ್ – 100 ಗ್ರಾಂ
ಪಲಾವ್ ಎಲೆ -2
ಜೀರಿಗೆ – ಅರ್ಧ ಚಮಚ
ಚೆಕ್ಕೆ – ಸ್ವಲ್ಪ
ಏಲಕ್ಕಿ – 1
ಬೆಣ್ಣೆ – 2 ಚಮಚ
ಕಸೂರಿ ಮೇತಿ – 2 ಚಮಚ
ಹಸಿರು ಮೆಣಸಿನ ಕಾಯಿ – 3
ಬೆಳ್ಳುಳ್ಳಿ – 5 ಎಸಳು
ಶುಂಠಿ – ಅರ್ಧ ಇಂಚು
ಗರಂ ಮಸಾಲ – ಅರ್ಧ ಚಮಚ
ಅಚ್ಚ ಖಾರದ ಪುಡಿ – ಅರ್ಧ ಚಮಚ
ಅರಶಿಣ – ಕಾಲು ಚಮಚ
ಫ್ರೆಶ್ ಕ್ರೀಮ್ – 2 ಚಮಚ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:

  • ಮೊದಲು ಒಂದು ಪಾತ್ರೆಯಲ್ಲಿ ನೀರು ಕಾಯಲು ಇಟ್ಟು ಕುದಿಯಲು ಆರಂಭವಾದ ಬಳಿಕ ಅದಕ್ಕೆ ಪಾಲಕ್ ಸೊಪ್ಪನ್ನು ಹಾಕಿ 3 ನಿಮಿಷಗಳ ಕಾಲ ಬೇಯಿಸಿ.
  • ನಂತರ ಅದನ್ನು ಬಿಸಿನೀರಿನಿಂದ ತೆಗೆದು ತಣ್ಣಿರಿಗೆ ಹಾಕಿಕೊಳ್ಳಿ. ಬಳಿಕ ಪಾಲಕ್ ಸೊಪ್ಪನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು, ಅದಕ್ಕೆ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಅದಕ್ಕೆ ಅರ್ಧ ಲೋಟ ನೀರನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
  • ಈಗ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ 2 ಚಮಚ ಬೆಣ್ಣೆ ಹಾಕಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿಕೊಳ್ಳಿ. ಬಿಸಿಯಾದ ಬಳಿಕ ಅದಕ್ಕೆ ಪನೀರ್ ಅನ್ನು ಹಾಕಿಕೊಂಡು 2ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಿ.
  • ಬಳಿಕ ಪನೀರ್ ಅನ್ನು ಒಂದು ಪ್ಲೇಟ್‌ನಲ್ಲಿ ತೆಗೆದಿಡಿ. ಈಗ ಅದೇ ಪ್ಯಾನ್‌ಗೆ ಚೆಕ್ಕೆ, ಜೀರಿಗೆ, ಪಲಾವ್ ಎಲೆ, ಏಲಕ್ಕಿ ಹಾಕಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಳ್ಳಿ.
  • ಈರುಳ್ಳಿ ಗೋಲ್ಡನ್ ಬಣ್ಣ ಬಂದ ಬಳಿಕ ಅದಕ್ಕೆ ಹೆಚ್ಚಿದ ಟೊಮೊಟೊ ಹಾಕಿಕೊಂಡು ಚನ್ನಾಗಿ ಬೇಯಿಸಿಕೊಳ್ಳಿ. ಬಳಿಕ ಇದಕ್ಕೆ ಅರಶಿಣ, ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
  • ಈಗ ಇದಕ್ಕೆ ರುಬ್ಬಿದ ಪಾಲಕ್ ಮಿಶ್ರಣವನ್ನು ಹಾಕಿಕೊಳ್ಳಿ. ಮಿಶ್ರಣ ಚನ್ನಾಗಿ ಕುದಿದ ಬಳಿಕ ಅದಕ್ಕೆ ಪನೀರ್ ಅನ್ನು ಸೇರಿಸಿಕೊಳ್ಳಿ. ಬಳಿಕ ಅದಕ್ಕೆ ಫ್ರೆಶ್ ಕ್ರೀಮ್ ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ.
  • ನಂತರ ಇದಕ್ಕೆ ಗರಂ ಮಸಾಲೆಯನ್ನು ಹಾಕಿಕೊಳ್ಳಿ. ಈಗ ಇದಕ್ಕೆ ಕಸೂರಿ ಮೇತಿಯನ್ನು ಸೇರಿಸಿಕೊಂಡು 2 ನಿಮಿಷಗಳ ಕಾಲ ಮೀಡಿಯಮ್ ಫ್ಲೇಮ್‌ನಲ್ಲಿ ಕುದಿಸಿಕೊಳ್ಳಿ.

ಈಗ ಹೋಟೆಲ್ ಶೈಲಿಯ ರುಚಿಯಾದ ಪಾಲಕ್ ಪನೀರ್ ಸವಿಯಲು ಸಿದ್ಧ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *