ಡೀಪ್ ಫೇಕ್ ತಂತ್ರಜ್ಞಾನದಿಂದ ಒಳಿತು, ಕೆಡುಕು ಹಾಗೂ ಭಯಾನಕ ಭವಿಷ್ಯ – ನಿಮಗೂ ತಿಳಿದಿಲ್ಲದ ಮಾಹಿತಿ ಇತರರಿಗೂ ಹಂಚಿಕೊಳ್ಳಿ!

ಡೀಪ್ ಫೇಕ್ ತಂತ್ರಜ್ಞಾನದಿಂದ ಒಳಿತು, ಕೆಡುಕು ಹಾಗೂ ಭಯಾನಕ ಭವಿಷ್ಯ – ನಿಮಗೂ ತಿಳಿದಿಲ್ಲದ ಮಾಹಿತಿ ಇತರರಿಗೂ ಹಂಚಿಕೊಳ್ಳಿ!

ನ್ಯೂಸ್ ಆ್ಯರೋ : ಇತ್ತೀಚೆಗಷ್ಟೇ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಸ್ವತಃ ರಶ್ಮಿಕಾ ಈ ವಿಡಿಯೋ ನೋಡಿ ದಂಗಾಗಿದ್ದರು. ಇದಕ್ಕೆ ಕಾರಣ ಇದೊಂದು ಡೀಪ್ ಪೇಕ್ ತಂತ್ರಜ್ಞಾನದ ಮೂಲಕ ಎಡಿಟ್ ಮಾಡಲಾದ ವಿಡಿಯೋ ಆಗಿತ್ತು. ಸದ್ಯ, ಈ ಡೀಪ್ ಫೇಕ್ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಮನುಷ್ಯನ ಪ್ರಗತಿಯ ಹೆಗ್ಗುರಿನಂತೆ ಆರಂಭವಾದ ಈ ತಂತ್ರಜ್ಞಾನ ಇದೀಗ ಎಲ್ಲರಲ್ಲೂ ನಡುಕ ಹುಟ್ಟಿಸುತ್ತಿದೆ‌.

ಹಾಗಿದ್ದರೆ ಈ ಡೀಪ್ ಫೇಕ್ ತಂತ್ರಜ್ಞಾನ ಎಂದರೇನು? ಇದರ ಒಳಿತು-ಕೆಡುಕುಗಳೇನು? ಭವಿಷ್ಯದಲ್ಲಿ ಈ ತಂತ್ರಜ್ಞಾನದಿಂದ ಉಂಟಾಗಲಿರುವ ಅಪಾಯಗಳೇನು? ಎಂಬುದನ್ನೆಲ್ಲ ಈ ವರದಿಯಲ್ಲಿ ನೋಡೋಣ.

ಡೀಪ್ ಫೇಕ್ ಎಂದರೇನು?

ತಂತ್ರಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಫೋಟೋಶಾಪ್‌ ಉದಾಹರಣೆ ತೆಗೆದುಕೊಳ್ಳೋಣ. ಒಬ್ಬ ವ್ಯಕ್ತಿಯ ಬ್ಯಾಕ್‌ಗ್ರೌಂಡ್‌ ಎಲ್ಲಾ ಬಿಟ್ಟು ದೇಹವನ್ನಷ್ಟೇ ಕಟೌಟ್‌ ಮಾಡಬಹುದು. ಕೇವಲ ತಲೆಯನ್ನು ಮಾತ್ರ ಫೋಟೋಶಾಪ್‌ನಲ್ಲಿ ಕತ್ತರಿಸಿ ಬೇರೆಯವರ ತಲೆಯ ಸ್ಥಳಕ್ಕೆ ಇಡಬಹುದು. ಈ ರೀತಿ ಮಾಡಲು ಫೋಟೋ ಎಡಿಟಿಂಗ್‌ ಕೌಶಲ ಬೇಕು. ಸಾಕಷ್ಟು ಕೌಶಲ ಇರುವವರು ಈ ರೀತಿ ಕಟೌಟ್‌ ಮಾಡಿದರೂ ಎಲ್ಲೋ ಸಣ್ಣ ಲೋಪ ಉಳಿದುಬಿಡುತ್ತದೆ.

ಆದರೆ ಈ ಡೀಪ್ ಫೇಕ್ ತಂತ್ರಜ್ಞಾನ ಮನುಷ್ಯನ ಸಹಾಯವಿಲ್ಲದೆ ಇಂತಹ ಕೆಲಸವನ್ನು ಹತ್ತು ಪಟ್ಟು ಚೆನ್ನಾಗಿ ಮಾಡುತ್ತದೆ. ಡೀಪ್‌ ಲರ್ನಿಂಗ್‌ ಅಲ್ಗಾರಿದಂ ಮೂಲಕ ಇದು ಕೆಲಸ ಮಾಡುತ್ತದೆ. ಈಗಿನ ಮೆಷಿನ್‌ ಲರ್ನಿಂಗ್‌ ತಂತ್ರಜ್ಞಾನವು ಮನುಷ್ಯರು ಮಾಡುವ ಎಲ್ಲಾ ಕೆಲಸವನ್ನು ಕಲಿಯುತ್ತಿದ್ದು, ಈ ನಕಲಿ ರೂಪ ಸೃಷ್ಟಿಸುವ ಕಲೆಯನ್ನು ತುಸು ಬೇಗನೇ ಕಲಿತುಕೊಂಡಿದೆ. ನೋಡಲು ಅಸಲಿ ಎಂದೆನಿಸದಷ್ಟು ಅತ್ಯುತ್ತಮವಾಗಿ ಈ ತಂತ್ರಜ್ಞಾನ ಇಂತಹ ವಿಡಿಯೋ, ಫೋಟೋಗಳನ್ನು ಸೃಷ್ಟಿಸುತ್ತದೆ.

ಈ ತಂತ್ರಜ್ಞಾನದ ಒಳಿತುಗಳೇನು?

ಈ ಡೀಪ್ ಫೇಕ್ ತಂತ್ರಜ್ಞಾನದ ಸಹಾಯದಿಂದ ಸಿನಿಮಾ, ಟೆಲಿವಿಷನ್‌ ಶೋಗಳು ಅಥವಾ ಇತರೆ ಮಾಧ್ಯಮಗಳಲ್ಲಿ ಹೆಚ್ಚು ನೈಜ್ಯವಾಗಿ ಕಾಣಿಸುವ ದೃಶ್ಯಗಳನ್ನು ಮೂಡಿಸಬಹುದು. ಪೈಲಟ್‌ಗಳಿಗೆ ವಿಮಾನ ಹಾರಾಟ ವೀಕ್ಷಿಸಲು, ಮಿಲಿಟರಿ ಮತ್ತು ಆರೋಗ್ಯ ಸೇವೆ ತರಬೇತಿಗಳಿಗೆ ಸೇರಿದಂತೆ ವೃತ್ತಿಪರರಿಗೆ ಡೀಪ್‌ಫೇಕ್‌ ತಂತ್ರಜ್ಞಾನದ ಮೂಕ ಅತ್ಯುತ್ತಮ ಸಿಮ್ಯುಲೇಷನ್‌ ಒದಗಿಸಬಹುದು.
ಆಡಿಯೋ ಮತ್ತು ವಿಡಿಯೋಗಳಿಗೆ ಸ್ವಯಂಚಾಲಿತವಾಗಿ ಸಬ್‌ ಟೈಟಲ್‌ಗಳನ್ನು ಈ ತಂತ್ರಜ್ಞಾನ ನೀಡುತ್ತದೆ. ಹೀಗೆ ಭವಿಷ್ಯದ ಜಗತ್ತಿಗೆ ಈ ತಂತ್ರಜ್ಞಾನದ ಬೇಡಿಕೆ ಸಾಕಷ್ಟಿದೆ.

ಈ ತಂತ್ರಜ್ಞಾನದ ಕೆಡುಕುಗಳೇನು?

ಈ ಡೀಪ್ ಫೇಕ್ ತಂತ್ರಜ್ಞಾನದಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಕೆಡುಕುಗಳಿದೆ. ಈ ತಂತ್ರಜ್ಞಾನದ ಮೂಲಕ ಸೆಲೆಬ್ರಿಟಿ ಅಥವಾ ಶ್ರೀಮಂತರ ನೈಜ್ಯ ಫೋಟೋ, ವಿಡಿಯೋಗಳನ್ನು ಬಳಸಿಕೊಂಡು ನಕಲಿ ಸೃಷ್ಟಿಸಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುವ ಸಾಧ್ಯತೆಗಳಿವೆ. ಈ ತಂತ್ರಜ್ಞಾನ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಬಹುದು. ಸುಳ್ಳು ಸುದ್ದಿಯನ್ನು ಸತ್ಯ ಎಂದು ನಂಬಿಸಲು ಈ ತಂತ್ರಜ್ಞಾನವನ್ನು ಕಿಡಿಗೇಡಿಗಳು ಬಳಸಿಕೊಳ್ಳುವ ಅಪಾಯವಿರುತ್ತದೆ. ಬಹು ಮುಖ್ಯವಾಗಿ ಜನರ ಖಾಸಗಿತನಕ್ಕೆ ಈ ತಂತ್ರಜ್ಞಾನ ಅಡ್ಡಗಾಲು ಹಾಕುವ ಸಾಧ್ಯತೆಯಿದೆ.

ಡೀಪ್ ಫೇಕ್ ಭಯಾನಕ ಭವಿಷ್ಯ?!

ಡೀಪ್ ಫೇಕ್ ತಂತ್ರಜ್ಞಾನದ ದುರ್ಬಳಕೆ ಮುಂದೊಂದು ದಿನ ಭಯಾನಕ ಭವಿಷ್ಯ ರೂಪಿಸುವಲ್ಲಿ ತನ್ನ ಪಾತ್ರವಹಿಸಬಹುದು. ಉದಾಹರಣೆಗೆ ಈ ತಂತ್ರಜ್ಞಾನ ಬಳಸಿ ಭವಿಷ್ಯದಲ್ಲಿ ನಕಲಿ ವಿಡಿಯೋ ಸೃಷ್ಟಿಸಿ ಹಣ ಸುಲಿಗೆ ಮಾಡಬಹುದು. ಹೆಣ್ಣಿನ ಮೇಲೆ ದೌರ್ಜನ್ಯ, ಅತ್ಯಾಚಾರ ಎಸಗಲು ಇಂತಹ ನಕಲಿ ವಿಡಿಯೋಗಳನ್ನು ಬಳಸಬಹುದು. ಗಂಡಸರ ಮೇಲೂ ಇಂತಹ ವಿಡಿಯೋಗಳನ್ನು ಬಳಸಿ ದೌರ್ಜನ್ಯ ಎಸಗಬಹುದು. ಗಂಡ ಹೆಂಡತಿ ಸಂಬಂಧ ಕೆಡಿಸಲು ಇಂತಹ ಡೀಪ್‌ಫೇಕ್‌ ನಕಲಿ ಫೋಟೋ, ವಿಡಿಯೋಗಳನ್ನು ಭವಿಷ್ಯದಲ್ಲಿ ಬಳಸಬಹುದು. ಈ ಎಲ್ಲಾ ಕಾರಣಗಳಿಂದ ಎಲ್ಲರಿಗೂ ಈ ಡೀಪ್ ಫೇಕ್ ತಂತ್ರಜ್ಞಾನದ ಅರಿವು ಮೂಡಿಸಬೇಕಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *