
ಸ್ಮಾರ್ಟ್ ಫೋನ್ ಬ್ಯಾಟರಿ ಊದಿಕೊಂಡಿದ್ಯಾ? – ಕೂಡಲೇ ಎಚ್ಚೆತ್ತುಕೊಳ್ಳಿ, ಇಲ್ಲದಿದ್ರೆ…..!!
- ಟೆಕ್ ನ್ಯೂಸ್
- September 2, 2023
- No Comment
- 65
ನ್ಯೂಸ್ ಆ್ಯರೋ : ಕೆಲವೊಮ್ಮೆ ಸ್ಮಾರ್ಟ್ ಫೋನ್ ಬ್ಯಾಟರಿ ಊದಿಕೊಳ್ಳುವುದನ್ನು ಗಮನಿಸಿರುತ್ತೀರಿ. ಇದಕ್ಕೆ ಕಾರಣವೇನು? ಇದರಿಂದ ಅಪಾಯವಿದೆಯೇ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಸ್ಫೋಟಗೊಳ್ಳುವ ಅಪಾಯ
ನಿಧಾನವಾಗಿ ಬ್ಯಾಟರಿ ಕ್ಷೀಣಿಸಿ ಅಂತಿಮವಾಗಿ ಉಬ್ಬಿಕೊಳ್ಳುತ್ತದೆ. ಹೀಗೆ ಊದಿಕೊಳ್ಳುವ ಬ್ಯಾಟರಿಯನ್ನು ಬದಲಾಯಿಸದಿದ್ದರೆ ಮುಂದೊಂದು ದಿನ ಸ್ಫೋಟಗೊಳ್ಳುವ ಅಪಾಯವಿದೆ. ಉಷ್ಣತೆ ಹೆಚ್ಚಿದರೆ, ಅತಿಯಾದ ಬಳಕೆಯಿಂದ ಫೋನ್ ಬಿಸಿಯಾದರೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.
ತಪ್ಪಾದ ಬಳಕೆ
ಅತಿಯಾಗಿ ಮತ್ತು ತಪ್ಪಾಗಿ ಸ್ಮಾರ್ಟ್ ಫೋನ್ ಅನ್ನು ಉಪಯೋಗಿಸುವುದರಿಂದ ಬ್ಯಾಟರಿ ಊದಿಕೊಳ್ಳುತ್ತದೆ. ಹೀಗಾಗಿ ಚಾರ್ಜ್‍ಗೆ ಹಾಕಿಕೊಂಡು ಫೋನ್ ಬಳಸಬೇಡಿ. ಬಿಸಿಲು ತಾಗುವಂತೆ ಫೋನ್ ಇಡಬೇಡಿ. ಅಲ್ಲದೆ ನಿರಂತರ ತುಂಬಾ ಸಮಯ ಫೋನ್ ಬಳಸಬೇಡಿ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
ಅನಗತ್ಯ ಆ್ಯಪ್
ಫೋನ್ ನಲ್ಲಿರುವ ಅನಗತ್ಯ ಆ್ಯಪ್ ಗಳು ಹೆಚ್ಚು ಬ್ಯಾಟರಿ ಬಳಸುತ್ತವೆ. ಇದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಈಗಿನ ಬಹುತೇಕ ಆ್ಯಪ್ ಗಳು ಜಿಪಿಎಸ್, ಕ್ಯಾಮರಾ ಅಥವಾ ವೀಡಿಯೋ ಕರೆಗಳ ಆ್ಯಕ್ಸಸ್ ಕೇಳುತ್ತವೆ. ಇದರಿಂದ ಬ್ಯಾಟರಿ ಮೇಲೆ ಹೊಡೆತ ಬೀಳುತ್ತದೆ. ಹೀಗಾಗಿ ಅನಗತ್ಯ ಆ್ಯಪ್ ಗಳನ್ನು ಡಿಲೀಟ್ ಮಾಡಿ.
ಬ್ಯಾಕ್ ಗ್ರೌಂಡ್ ಆ್ಯಪ್
ಬ್ಯಾಟರಿ ಬೇಗನೆ ಖಾಲಿ ಆಗಲು ಮತ್ತು ಅದರ ಮೇಲೆ ಒತ್ತಡ ಬೀಳಲು ಬ್ಯಾಕ್ ಗ್ರೌಂಡ್ ಆ್ಯಪ್ ಕೂಡ ಕಾರಣ. ಹೀಗಾಗಿ ಆ್ಯಪ್ ಉಪಯೋಗಿಸಿದ ನಂತರ ಅದನ್ನು ಮಿನಿಮೈಸ್ ಮಾಡಿಟ್ಟುಕೊಳ್ಳದೆ ಸಂಪೂರ್ಣ ಕ್ಲೋಸ್ ಮಾಡಿ.
ಸೆಟ್ಟಿಂಗ್ ಗಮನಿಸಿ
ಫೋನ್ ನಲ್ಲಿರುವ ಕೆಲವು ಸೆಟ್ಟಿಂಗ್ ಗಳು ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತವೆ. ಡಿಸ್ ಪ್ಲೇ ಬ್ರೈಟ್ ನೆಡ್ ಕಡಿಮೆ ಮಾಡುವುದು, ಬ್ಲೂ ಟೂತ್, ವೈ-ಫೈ ಆಫ್ ಮಾಡುವುದು ಮುಂತಾದ ವಿಧಾನಗಳಿಂದ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಅಗತ್ಯವಿಲ್ಲದಾಗ ಇವುಗಳನ್ನು ಕೂಡಲೇ ಆಫ್ ಮಾಡಬೇಕು.