ಕೇವಲ 1,299/- ರೂಪಾಯಿಗೆ ಸಿಗುತ್ತದೆ MIVI ಸ್ಮಾರ್ಟ್ ವಾಚ್ – ಹೇಗಿದೆ ಗೊತ್ತಾ ಈ ಸ್ಮಾರ್ಟ್ ವಾಚ್? ಇದರ ಫೀಚರ್ಸ್ ಹೇಗಿದೆ?

ಕೇವಲ 1,299/- ರೂಪಾಯಿಗೆ ಸಿಗುತ್ತದೆ MIVI ಸ್ಮಾರ್ಟ್ ವಾಚ್ – ಹೇಗಿದೆ ಗೊತ್ತಾ ಈ ಸ್ಮಾರ್ಟ್ ವಾಚ್? ಇದರ ಫೀಚರ್ಸ್ ಹೇಗಿದೆ?

ನ್ಯೂಸ್ ಆ್ಯರೋ : ಭಿನ್ನ ವಿಭಿನ್ನ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಹೆಸರು ಗಳಿಸಿರುವ ದೇಶೀಯ ಮೂಲದ ಎಮ್​ಐವಿಐ ಇದೀಗ ಮತ್ತೊಂದು ತನ್ನ ಸಾಧನವನ್ನು ಸ್ವದೇಶಿ ಮಾರುಕಟ್ಟೆಗೆ ತರಲು ಮುಂದಾಗಿದ್ದು,
ಜನಪ್ರಿಯ ಸ್ವದೇಶಿ ಟೆಕ್‌ ಬ್ರ್ಯಾಂಡ್ ಎಮ್​ಐವಿಐ ದೇಶದಲ್ಲಿ ತನ್ನ ವಿನೂತನ ಎಮ್​ಐವಿಐ ಮಾಡೆಲ್ ಇ ಸ್ಮಾರ್ಟ್‌ವಾಚ್ ಸಾಧನವನ್ನು ಪರಿಚಯಿಸಿದೆ.

ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ವಾಚ್ ಒಂದನ್ನು ಹುಡುಕುತ್ತಿರುವ ಗ್ರಾಹಕರಿಗಾಗಿ ಕೇವಲ 1299 ರೂ. ಗಳ ಎಮ್​ಐವಿಐ ಮಾಡೆಲ್ ಇ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಆಕರ್ಷಕ ಸ್ಟೇಯ್ನ್‌ಲೆಸ್‌ ಸ್ಟೀಲ್ ಡಯಲ್‌ ಶೈಲಿ, 28 ಭಾಷೆಗಳ ಆಯ್ಕೆ, 120 ಕ್ರೀಡಾ ಮೋಡ್‌ ಸೇರಿದಂತೆ ನಾನಾ ವಿಭಿನ್ನ ಫೀಚರ್ಸ್ ಗಳನ್ನು ಒಳಗೊಂಡಿದೆ.

ಹಾಗಾದರೆ, ಈ ಸ್ವದೇಶಿ ಹೊಸ ಎಮ್​ಐವಿಐ ಮಾಡೆಲ್ ಇ ಸ್ಮಾರ್ಟ್‌ವಾಚ್ ಹೇಗಿದೆ? ಫೀಚರ್ಸ್ ಗಳೇನು? ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಹೊಸ ಎಮ್​ಐವಿಐ ಮಾಡೆಲ್ ಇ ಸ್ಮಾರ್ಟ್‌ವಾಚ್ ಫಂಕ್ಷನಲ್ ಎಚ್‌ಡಿ ಫಾಂಟ್‌ ಟಚ್‌ಸ್ಕ್ರೀನ್ ಸಾಮರ್ಥ್ಯವಿರುವ 1.69 ಇಂಚಿನ ಡಿಸ್‌ಪ್ಲೇ ಹೊಂದಿದೆ. ಐಪಿ68 ರೇಟಿಂಗ್ ವಾಟರ್‌ ರೆಸಿಸ್ಟೆಂಟ್ ಹೊಂದಿರುವ ಈ ಸ್ಮಾರ್ಟ್‌ವಾಚ್ ಸಾಧನವನ್ನು ಈಜು ಅಥವಾ ವರ್ಕೌಟ್ ಮಾಡುವ ವೇಳೆ ಬಳಸಬಹುದು. ಈ ಸಾಧನವು ಜಿ-ಸೆನ್ಸರ್ ಹೊಂದಿರುವುದರಿಂದ ನಡೆದಾಡಿದ ಹೆಜ್ಜೆಗಳ ಲೆಕ್ಕ ಹಾಕಲು, ಮತ್ತು ನಿದ್ದೆ, ಹೃದಯ ಬಡಿತ ದರ, ರಕ್ತದೊತ್ತಡ, ಆಮ್ಲಜನಕ, ಸ್ಯಾಚುರೇಶನ್‌ ಮತ್ತು ವ್ಯಾಯಾಮದ ದತ್ತಾಂಶವನ್ನೂ (ಡೇಟಾ) ದಾಖಲಿಸುತ್ತದೆ.

ಋತುಚಕ್ರ ಪತ್ತೆಗೂ (ಟ್ರ್ಯಾಕ್‌) ಸಮರ್ಥವಾಗಿರುವ ಈ ಸಾಧನವು ಇದು ವಿಶೇಷವಾಗಿ ಮಹಿಳೆಯರಿಗೆ ಅನುಕೂಲಕರವಾಗಿದೆ ಎಂದು ಕಂಪೆನಿ ತಿಳಿಸಿದೆ.

ಈ ಎಮ್​ಐವಿಐ ಮಾಡೆಲ್ ಇ ಸ್ಮಾರ್ಟ್‌ವಾಚ್‌ನಲ್ಲಿ ಸೈಕ್ಲಿಂಗ್, ಜಾಗಿಂಗ್, ಹೈಕಿಂಗ್, ವಾಕಿಂಗ್, ಯೋಗ, ಮತ್ತು ಇನ್ನೂ ಹಲವು ಈ ರೀತಿಯ ಪೂರ್ವ-ಸಂಸ್ಥಾಪಿತ 120 ಕ್ರೀಡಾ ಮೋಡ್‌ಗಳಿವೆ. ಸಂಗೀತ ನಿಯಂತ್ರಣ, ಡಯಲ್‌ ಆಯ್ಕೆ, ಮೆಸೇಜ್‌ ಪುಶ್‌, ದೈನಿಕ ಅಲಾರಾಂ ಗಡಿಯಾರ, ಫೊಟೋ ನಿಯಂತ್ರಣ ಇತ್ಯಾದಿ ಸೌಲಭ್ಯಗಳ ಜೊತೆಗೆ ಹವಾಮಾನ ಮಾಹಿತಿಯನ್ನೂ ಒದಗಿಸುತ್ತದೆ. ಸ್ಮಾರ್ಟ್‌ವಾಚ್‌ನ ಹೆಚ್ಚು ಬಳಕೆಗಾಗಿ, ಮ್ಯಾಗ್ನೆಟಿಕ್ ಲೈನ್‌ ಚಾರ್ಜಿಂಗ್ ಸಪೋರ್ಟ್ 200 ಎಂಎಎಚ್ ಲೀಥಿಯಂ ಪಾಲಿಮರ್‌ ಬ್ಯಾಟರಿ ನೀಡಲಾಗಿದೆ. ಇದು 1.5 ಗಂಟೆಯಲ್ಲಿ ಪೂರ್ಣವಾಗಿ ಚಾರ್ಜ್‌ ಆಗುತ್ತದೆ ಹಾಗೂ 5-7 ದಿನಗಳ ಕಾಲ ಬಳಕೆ ಬರಲಿದೆ.

ಎಮ್​ಐವಿಐ ಮಾಡೆಲ್ ಇ ಸ್ಮಾರ್ಟ್‌ವಾಚ್ ಬ್ಲೂಟೂತ್‌ 5.1 ಸಂಪರ್ಕದಲ್ಲಿ ಆಂಡ್ರಾಯ್ಡ್‌ ಮತ್ತು ಐಓಎಸ್ ಎರಡರಲ್ಲೂ ಕಾರ್ಯನಿರ್ವಹಿಸಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *