ಕೈಗೆಟುಕುವ ದರದಲ್ಲಿ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್ ಲಭ್ಯ – ಇದರಲ್ಲಿನ ವಿಶೇಷತೆಗಳೇನು ನೋಡಿ..

ಕೈಗೆಟುಕುವ ದರದಲ್ಲಿ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್ ಲಭ್ಯ – ಇದರಲ್ಲಿನ ವಿಶೇಷತೆಗಳೇನು ನೋಡಿ..

ನ್ಯೂಸ್ ಆ್ಯರೋ‌ : ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ 5G ಫೋನ್‌ಗಳಲ್ಲಿ ಒಂದಾದ ಪೋಕೋ M4 Pro 5G ಸ್ಮಾರ್ಟ್‌ಫೋನ್ ಇದೀಗ ಅತ್ಯಾಕರ್ಷಕ ರಿಯಾಯಿತಿ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ವರ್ಷದ ಆರಂಭದಲ್ಲಿ 14,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದ್ದ ಪೋಕೋ M4 Pro 5G ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‌ಕಾರ್ಟ್ ಇದೀಗ ಒಂದು ಸಾವಿರ ರಿಯಾಯಿತಿಯೊಂದಿಗೆ 13,999 ರೂ. ಬೆಲೆಯಲ್ಲಿ ಮಾರಾಟಕ್ಕಿಟ್ಟಿದ್ದು, ಜೊತೆಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಮೇಲೆ 5% ಕ್ಯಾಶ್‌ಬ್ಯಾಕ್ ಹಾಗೂ 500 ರೂ.ವರೆಗಿನ ಗಿಫ್ಟ್ ಕಾರ್ಡ್ ಒದಗಿಸುತ್ತಿದೆ.

ಇಷ್ಟೇ ಅಲ್ಲದೇ, ಗೂಗಲ್ ಆಡೀಯೋ, ನೇಸ್ಟ್ ಹಬ್ ಮತ್ತು ನೆಸ್ಟ್ ಮಿನಿ ಸಬ್‌ಸ್ಕ್ರಿಪ್ಶನ್‌ಗಳು ಸೇರಿದಂತೆ ಪೋಕೋ M4 Pro 5G ಸ್ಮಾರ್ಟ್‌ಫೋನ್ ಖರೀದಿಯ ಜೊತೆಗೆ ಕೂಪನ್‌ಗಳ ರೂಪದಲ್ಲಿ 6,000 ರಿಯಾಯಿತಿ ದೊರೆಯುತ್ತಿದೆ.

ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ದೇಶದಲ್ಲಿ ಬಿಡುಗಡೆಗೊಂಡಿದ್ದ Poco M3 Pro 5G ಸ್ಮಾರ್ಟ್‌ಫೋನಿನ ಉತ್ತರಾಧಿಕಾರಿಯಾಗಿ ಹೊಸ Poco M4 Pro 5G ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಲಾಗಿತ್ತು. 5G ಸೇರಿದಂತೆ ಹಲವು ಇತ್ತೀಚಿನ ಅಪ್‌ಗ್ರೇಡ್ ಫೀಚರ್ಸ್ ಹೊತ್ತು ಬಿಡುಗಡೆಯಾಗಿರುವ ಈ Poco M4 Pro 5G ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC, 33W ವೇಗದ ಚಾರ್ಜಿಂಗ್ ಬೆಂಬಲ, 90Hz ಡಿಸ್ಪ್ಲೇ ಮತ್ತು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ವೈಶಿಷ್ಟ್ಯಗಳಿವೆ.

ಪ್ರಸ್ತುತ ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ 5G ಸ್ಮಾರ್ಟ್‌ಫೋನ್ ಇದಾಗಿದ್ದು, ಈ Poco M4 Pro 5G ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳೇನು..? ಫೀಚರ್ಸ್ ಗಳೇನು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಫೀಚರ್ಸ್ ಗಳು ಹೇಗಿದೆ..?

Poco M4 Pro 5G ಸ್ಮಾರ್ಟ್‌ಫೋನ್ Android 11 ಅನ್ನು ಆಧರಿಸಿದ MIUI 12.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಪೂರ್ಣ-HD+ ಡಾಟ್ ಡಿಸ್ಪ್ಲೇಬರುತ್ತದೆ. ಪ್ರದರ್ಶನವು 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು DCI-P3 ವೈಡ್ ಕಲರ್ ಗ್ಯಾಮಟ್ ಅನ್ನು ಸಹ ಹೊಂದಿದೆ.

ಹುಡ್ ಅಡಿಯಲ್ಲಿ, Poco M4 Pro 5G ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಜೊತೆಗೆ 8GB ವರೆಗಿನ LPDDR4X RAM ಅನ್ನು ಹೊಂದಿದೆ. ಪೋಕೋ ಎಂ 4 ಪ್ರೋ 5ಜಿ (POCO M4 Pro 5G) ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 11 ಆಧರಿತ MIUI 12.5 ಆಪರೇಟಿಂಗ್ ಸಾಫ್ಟ್‌ವೇರ್ ಮೇಲೆ ರನ್ ಆಗಲಿದೆ. 6.6 ಫುಲ್ ಎಚ್‌ಡಿ ಡಾಟ್ ಡಿಸ್‌ಪ್ಲೇ ಅನ್ನು ಹೊಂದಿರುವ ಈ ಫೋನ್, ಅಕ್ಟಾಕೋರ್ ಮೀಡಿಯಾ ಟೆಕ್ ಡಿಮೆನ್ಸಿಟಿ 810 (octa-core MediaTek Dimensity 810 SoC) ಪ್ರೊಸೆಸರ್ ಒಳಗೊಂಡಿದೆ. ಇದಕ್ಕೆ LPDDR4X RAM ಜತೆಗೆ 8 ಜಿಬಿ RAM ಸಂಯೋಜಿಸಲಾಗಿದೆ.

ಕ್ಯಾಮೆರಾ ಹೇಗಿದೆ..?

ಪೋಕೋ ಎಂ 4 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಳಸಲಾಗಿರುವ ಕ್ಯಾಮೆರಾ ಕೂಡ ಚೆನ್ನಾಗಿದೆ. ಈ ಮೊದಲೇ ಹೇಳಿದಂತೆ ಕಂಪನಿಯು ಹಿಂಬದಿಯಲ್ಲಿ ಡುಯಲ್ ಕ್ಯಾಮೆರಾಗಳನ್ನು ಒದಗಿಸಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದು, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ.

ಇನ್ನು ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಾಗಿ ಕಂಪನಿಯು ಫೋನ್ ಮುಂಬದಿಯಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಹಿಂಬದಿ ಮತ್ತು ಮುಂಬದಿ ಕ್ಯಾಮೆರಾಗಳು ಈ ಸೆಗ್ಮೆಂಟ್‌ ಫೋನುಗಳಿಗೆ ಹೋಲಿಸಿದರೆ ಚೆನ್ನಾಗಿಯೇ ಇವೆ ಎಂದು ಹೇಳಬಹುದು.

ಪೋಕೋ ಎಂ 4 ಪ್ರೋ 5ಜಿ ಸ್ಮಾರ್ಟ್‌ಫೋನ್ 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಬಳಕೆದಾರರು ಈ ಮೆಮೋರಿಯನ್ನು microSD ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾಗಿದೆ. 5ಜಿ, 4ಜಿ ಎಲ್‌ಟಿಇ, ಬ್ಲೂಟೂಥ್ ವಿ5.1, GPS/ A-GPS, ಇನ್ಫ್ರಾರೆಡ್ ಬ್ಲಾಸ್ಟರ್, ಯುಎಸ್‌ಬಿ ಟೈಪ್ ಸಿ, 3.5 ಹೆಡ್‌ಫೋನ್ ಜಾಕ್ ಸೇರಿದಂತೆ ಇತರ ಕನೆಕ್ಟಿವಿ ಆಪ್ಷನ್‌ಗಳನ್ನು ಈ ಫೋನಿನಲ್ಲಿ ಕಾಣಬಹುದು.

ಬೆಲೆ ಎಷ್ಟು..?

Poco M4 Pro 5G ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕ ನೀಡಲಾಗಿದ್ದು, ಇದು f/2.45 ಲೆನ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಸಂಗ್ರಹಣೆಯ ವಿಷಯದಲ್ಲಿ, Poco M4 Pro 5G ಮೈಕ್ರೋ SD ಕಾರ್ಡ್ ಮೂಲಕ (1TB ವರೆಗೆ) ವಿಸ್ತರಣೆಯನ್ನು ಬೆಂಬಲಿಸುವ UFS 2.2 ಸಂಗ್ರಹಣೆಯು 128GB ವರೆಗೆ ಇದೆ. ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5.1, GPS/ A-GPS, ಇನ್ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ವೈಶಿಷ್ಟ್ಯಗಳು ಸೇರಿವೆ.

ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಬರುತ್ತದೆ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. 13,999 ರೂ. ಬೆಲೆಯಲ್ಲಿ ಗ್ರಾಹಕರು ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್ ಇದಾಗಿದೆ.

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *