ಜಿಯೋ, ಏರ್‌ಟೇಲ್‌ ಚಂದಾದಾರರಿಗೆ ಬಂಪರ್‌ ಕೊಡುಗೆ: ಪ್ರತಿ ದಿನ 2ಜಿಬಿ ಡೇಟಾ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ಆ್ಯರೋ: ದೇಶದ ಟೆಲಿಕಾಂ ಕಂಪೆನಿಗಳು ತಮ್ಮ ಚಂದಾದಾರರನ್ನು ಸೆಳೆಯಲು ಒಂದಲ್ಲ ಒಂದು ಗಿಮಿಕ್‌ಗಳನ್ನು ಮಾಡುತ್ತಲೇ ಇರುತ್ತದೆ. ಜಿಯೋ ಹಾಗೂ ಏರ್‌ಟೇಲ್ ಕಂಪೆನಿಗಳು ತಮ್ಮ ಚಂದಾದಾರರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತನೆ ಮುನ್ನಡೆದಿದ್ದು, ಅದರಲ್ಲಿ ದಿನದ 2ಜಿಬಿ ಡೇಟಾ ಪ್ಲಾನ್ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.ಇದೀಗ 5G ಸೇವೆ ನೀಡುವುದರಲ್ಲಿ ಕಂಪನಿಗಳು ಬ್ಯುಸಿಯಾಗಿದ್ದು, ಜಿಯೋವನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಲು ಏರ್‌ಟೇಲ್ ಹರಸಾಹಸವನ್ನು ಮಾಡುತ್ತಿದೆ. ಮಧ್ಯಮ ಗ್ರಾಹಕರಿಗೆಂದೇ ಈ ಟೆಲಿಕಾಂ ಕಂಪನಿಗಳು ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು ಕೂಡ ನೀಡಿದೆ. ಇದರಲ್ಲಿ ಮುಖ್ಯವಾಗಿ ದಿನಕ್ಕೆ 2ಜಿಬಿ ಡೇಟಾ ಪ್ಲಾನ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ, ಉಚಿತ ಎಸ್ಎಂಎಸ್, ಓಟಿಟಿ ಆಫರ್ ಕೂಡ ಇದೆ.

ಇಲ್ಲಿದೆ ಜಿಯೋ ಹಾಗೂ ಏರ್‌ಟೇಲ್‌ನ 2ಜಿಬಿ ಡೇಟಾದ ಅತ್ಯುತ್ತಮ ಯೋಜನೆಗಳ ಮಾಹಿತಿ:

ಜಿಯೋ 2ಜಿಬಿ ಡೇಟಾ ಪ್ಲಾನ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ

₹249 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 46ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್ಎಂಎಸ್ ಉಚಿತವಿದೆ. ಇದು 23 ದಿನಗಳ ಸಮಯಾವಕಾಶವಿದ್ದು, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.₹299 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 56ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು, ದಿನಕ್ಕೆ 100 ಎಸ್ಎಂಎಸ್ ಉಚಿತವಿದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.₹533 ಪ್ಲಾನ್ನಲ್ಲಿ ಕೂಡ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 112ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್ಎಂಎಸ್ ಉಚಿತವಿದೆ. ಇದು 56 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.₹719 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 168ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್ಎಂಎಸ್ ಉಚಿತವಿದೆ. ಇದು 84 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.₹2879 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 730ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್ಎಂಎಸ್ ಉಚಿತವಿದೆ. ಇದು 365 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಆ್ಯಪ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.ಏರ್‌ಟೇಲ್ 2ಜಿಬಿ ಡೇಟಾ ಪ್ಲಾನ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ:


₹319 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್ಎಂಎಸ್ ಉಚಿತವಿದೆ. ಇದು ಒಂದು ತಿಂಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.₹359 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್ಎಂಎಸ್ ಉಚಿತವಿದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.

₹399 ಪ್ಲಾನ್ನಲ್ಲಿ ದಿನಕ್ಕೆ 2.5ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್ಎಂಎಸ್‌ ಉಚಿತವಿದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ.₹499 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್ಎಂಎಸ್ ಉಚಿತವಿದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಒಂದು ವರ್ಷದ ಡಿಸ್ನಿ+ ಹಾಟ್ಸ್ಟಾರ್ ಮೊಬೈಲ್ ವರ್ಷನ್ ಚಂದಾದಾರಿಕೆ ಸಿಗುತ್ತದೆ.

₹549 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್ಎಂಎಸ್ ಉಚಿತವಿದೆ. ಇದು 56 ದಿನಗಳ ವ್ಯಾಲಿಡಿಯನ್ನು ಹೊಂದಿದೆ.₹839 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್ಎಂಎಸ್ ಉಚಿತವಿದೆ. ಇದು 84 ದಿನಗಳ ವ್ಯಾಲಿಡಿಯನ್ನು ಹೊಂದಿದೆ.₹2,999 ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್ಎಂಎಸ್ ಉಚಿತವಿದೆ. ಇದು 365 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಮೊಬೈಲ್ ವರ್ಷನ್ ಚಂದಾದಾರಿಕೆ ಸಿಗುತ್ತದೆ.₹3,259 ಪ್ಲಾನ್ನಲ್ಲಿ ದಿನಕ್ಕೆ 2.5ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್ಎಂಎಸ್ ಉಚಿತವಿದೆ. ಇದು 365 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ ಹಾಟ್ಸ್ಟಾರ್ ಮೊಬೈಲ್ ವರ್ಷನ್ ಚಂದಾದಾರಿಕೆ ಸಿಗುತ್ತದೆ.ಈ ಮೇಲ್ಕಂಡ ವಿವಿಧ ಪ್ಲಾನ್‌ನಲ್ಲಿ ವಿಶೇಷವಾದ ಪ್ರಯೋಜನಗಳನ್ನು ನೀಡಿದ್ದು, ಏರ್‌ಟೇಲ್ ಹಾಗೂ ಜಿಯೋ ಚಂದಾದಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *