ಸಮಸ್ಯೆ ಇದ್ರೆ ತಲೆ ಬೋಳಿಸಿ ಡ್ಯೂಟಿಗೆ ಬನ್ನಿ, ಧಾರ್ಮಿಕ ದಾರಗಳಿಗೂ ಅವಕಾಶ ಇಲ್ಲ – ಏರ್ ಇಂಡಿಯಾ ಮ್ಯಾನೇಜ್ಮೆಂಟ್ ನಿಂದ ಸಿಬ್ಬಂದಿಗೆ ಟಫ್ ರೂಲ್ಸ್

ನ್ಯೂಸ್ ಆ್ಯರೋ : ಸರ್ಕಾರಿ ಏರ್‌ಲೈನ್ ಕಂಪನಿಯಾಗಿದ್ದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಖರೀದಿಸಿದ ಬಳಿಕ ಸಾಕಷ್ಟು ಬದಲಾವಣೆ ಮಾಡಿ, ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿದೆ. ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಲು ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿದೆ.

ಏರ್‌ ಇಂಡಿಯಾದ ಎಲ್ಲಾ ವಿಭಾಗಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ವಿಶೇಷವಾಗಿ ಗಗನಸಖಿ, ಸಿಬ್ಬಂದಿ ವರ್ತನೆ, ಉಡುಗೆ ತೊಡುಗೆ ಇತ್ಯಾದಿಗಳ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಮ್ಯಾನೇಜ್‌ಮೆಂಟ್ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರಯಾಣಿಕಸ್ನೇಹಿ ವಾತಾವರಣ ಸೃಷ್ಟಿಸಲು ಚಿಂತನೆ ನಡೆಸಿದೆ.

ಪುರುಷ ಸಿಬ್ಬಂದಿಯು ಕಡ್ಡಾಯವಾಗಿ ಹೇರ್ ಜೆಲ್ ಬಳಸಬೇಕು. ತಲೆಕೂದಲು ಜಾಸ್ತಿ ಉದುರುವವರು ಸಂಪೂರ್ಣವಾಗಿ ತಲೆಯನ್ನು ಬೋಳಿಸಿಕೊಂಡು ಕರ್ತವ್ಯಕ್ಕೆ ಬರಬೇಕು ಹಾಗೂ ಪ್ರತಿದಿನ ಶೇವ್ ಮಾಡಬೇಕು ಎಂದು ಆಡಳಿತ ಮಂಡಳಿ ಮಾರ್ಗಸೂಚಿಯಲ್ಲಿ ತಿಳಿಸಿದೆ. ಅದೇ ರೀತಿ ಬಿಳಿ ಕೂದಲಿರುವವರು ನೈಸರ್ಗಿಕವಾಗಿ ಕಾಣುವಂತೆ ಕೂದಲಿಗೆ ಬಣ್ಣ ಹಚ್ಚಬೇಕು.

ಮಹಿಳಾ ಉದ್ಯೋಗಿಗಳಿಗೂ ವಿಶೇಷ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಮಹಿಳಾ ಸಿಬ್ಬಂದಿಯ ಕೂದಲು ಬೂದು ಬಣ್ಣದಲ್ಲಿದ್ದರೆ, ಅವರು ನೈಸರ್ಗಿಕ ಛಾಯೆಗಳನ್ನು ಅಥವಾ ಕಂಪನಿಯ ಕೂದಲಿನ ಬಣ್ಣದ ಛಾಯೆಯ ಕಾರ್ಡ್‌ನಲ್ಲಿರುವ ಬಣ್ಣಗಳನ್ನು ಧರಿಸಬೇಕು. ಮುತ್ತಿನ ಕಿವಿಯೋಲೆಗಳನ್ನು ಧರಿಸಬಾರದು. ವಿನ್ಯಾಸವಿಲ್ಲದ ಚಿನ್ನ ಮತ್ತು ವಜ್ರದ ಆಕಾರದ ಕಿವಿಯೋಲೆಗಳನ್ನು ಮಾತ್ರ ಧರಿಸಬೇಕು.

ಉಂಗುರಗಳ ಅಗಲ 1ಸೆ.ಮೀ.ಗಿಂತ ಹೆಚ್ಚಿರಬಾರದು. ಕೈ, ಕುತ್ತಿಗೆಗಳು, ಕಾಲು ಮೇಲೆ ಕಪ್ಪು ಅಥವಾ ಧಾರ್ಮಿಕ ದಾರಗಳನ್ನು ಕಟ್ಟುವುದು ನಿಷೇಧಿಸಲಾಗಿದೆ. ಗಗನಸಖಿಯರು ತಮ್ಮ ಕೈಯಲ್ಲಿ ಡಿಸೈನರ್ ಬಳೆಗಳನ್ನು ಧರಿಸಬಾರದು. ಲಿಪ್ ಸ್ಟಿಕ್, ನೇಲ್ ಪೇಂಟ್ ಇತ್ಯಾದಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *