ಈ ‘ಸ್ಟವ್’ ಮನೆಯಲ್ಲಿದ್ದರೆ ಯಾವುದೇ ಖರ್ಚಿಲ್ಲದೆ ಫ್ರೀಯಾಗಿ ಅಡುಗೆ ಮಾಡಬಹುದು – ಈ ಸೋಲಾರ್ ಸ್ಟವ್ ಬಗ್ಗೆ ‌ನಿಮಗೆ ಗೊತ್ತಾ…!?

ಈ ‘ಸ್ಟವ್’ ಮನೆಯಲ್ಲಿದ್ದರೆ ಯಾವುದೇ ಖರ್ಚಿಲ್ಲದೆ ಫ್ರೀಯಾಗಿ ಅಡುಗೆ ಮಾಡಬಹುದು – ಈ ಸೋಲಾರ್ ಸ್ಟವ್ ಬಗ್ಗೆ ‌ನಿಮಗೆ ಗೊತ್ತಾ…!?

ನ್ಯೂಸ್ ಆ್ಯರೋ : ದಿನದಿಂದ ದಿನಕ್ಕೆ ಅಡುಗೆ ಅನಿಲದ ಬೆಲೆ ಏರುತ್ತಿದೆ‌. ಬಡ ಹಾಗೂ ಮಧ್ಯವರ್ಗಕ್ಕೆ ಈ ಗ್ಯಾಸ್ ಬೆಲೆ ಏರಿಗೆ ದೊಡ್ಡ ಹೊಡೆತವಾಗಿದೆ. ಇದರೊಂದಿಗೆ ವಿದ್ಯುತ್ ಸ್ಟವ್ ಗಳ ಅಡುಗೆಯೂ ಕೂಡ ತುಸು ದುಬಾರಿಯೆ ಆಗಿದೆ. ಅದಕ್ಕಾಗಿ ಕೆಲವರು ಇಂಡಕ್ಷನ್ ಸ್ಟವ್, ಓವನ್ ಗಳನ್ನು ಬಳಸುತ್ತಿದ್ದಾರೆ. ಈ ಬೆಲೆ ಏರಿಕೆಯ ನಡುವೆ ಕಂಡು ಇನ್ನು ಹೇಗಪ್ಪಾ ಜೀವನ ಎಂದು ಚಿಂತಿಸುವವರಿಗೆ ಒಂದು ಗುಡ್ ನ್ಯೂಸ್ ಇದೆ.

ಗ್ಯಾಸ್ ಬೆಲೆ ಏರಿಕೆಯಿಂದ ಕಂಗಾಲಾಗಿರುವವರು ಇನ್ನು ಚಿಂತಿಸಬೇಕಾಗಿಲ್ಲ. ಈ ಎಲ್ಲಾ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡುವಂತಹ ಒಂದು ಅತ್ಯಾಧುನಿಕ ಒಲೆ ಇದೀಗ ಮಾರುಕಟ್ಟೆಗೆ ಬಂದಿದೆ. ಇದಕ್ಕೆ ಗ್ಯಾಸ್ ಅಥವಾ ಇಂಡಕ್ಷನ್ ಅಗತ್ಯವಿಲ್ಲ. ಈ ನೂತನ ಸ್ಟವ್ ಅನ್ನು ನೀವು ಒಮ್ಮೆ ಖರೀದಿಸಿದರೆ ಸಾಕು ಜೀವನ ಪೂರ್ತಿ ಉಚಿತವಾಗಿ ಆಹಾರ ಬೇಯಿಸಿ ತಿನ್ನಬಹುದಾಗಿದೆ‌. ಇನ್ನೊಂದು ಖುಷಿಯ ವಿಚಾರ ಅಂದ್ರೆ ಈ ಒಲೆಯ ಬೆಲೆಯೂ ಕೂಡ ತುಂಬಾ ಕಡಿಮೆ!.

ಈ ಜನಸ್ನೇಹಿ ಸೋಲಾರ್ ಸ್ಟವ್ ಯಾವುದು?

ಬೆಲೆ ಏರಿಕೆ, ಹಣದುಬ್ಬರದಿಂದ ಬಳಲುತ್ತಿರುವ ಜನರಿಗಾಗಿ ಸರ್ಕಾರವು ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ‌. ಈ ಒಲೆಯ ಹೆಸರು ಸೂರ್ಯ ನೂತನ್ ಸೋಲಾರ್ ಸ್ಟವ್. ಇದನ್ನು ಬಳಸುವುದರಿಂದ ಜೀವನ‌ಪೂರ್ತಿ ಗ್ಯಾಸ್ ಅಥವಾ ವಿದ್ಯುತ್ ಬಳೆಕೆಯಿಲ್ಲದೇ ನೀವು ಸುಲಭ ಮತ್ತು ಉಚಿತವಾಗಿ ಅಡುಗೆ ಮಾಡಬಹುದಾಗಿದೆ‌. ಈ ವಿಶೇಷ ಸ್ಟವ್ ಅನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಬಿಡುಗಡೆ ಮಾಡಿದೆ.

24×7 ಇದು ಕೆಲಸ ಮಾಡುತ್ತದೆ!

ಇನ್ನು ಇದು ಸೋಲಾರ್ ನಿಂದ ಕೆಲಸ ಮಾಡುವ ಒಲೆ ಕೇವಲ ಹಗಲು ಮಾತ್ರ ಕೆಲಸ ಮಾಡುತ್ತದೆ ಅಂದರೆ ನಿಮ್ಮ ಕಲ್ಪನೆ ತಪ್ಪು. ಯಾಕೆಂದರೆ ಈ ಸ್ಟವ್ ದಿನದ 24 ಗಂಟೆಯೂ ಕೆಲಸ ಮಾಡುತ್ತದೆ. ಇದು ಹಳೆಯ ಸೌರ ಓವನ್ ಗಿಂತ ಸಂಪೂರ್ಣ ಬಿನ್ನವಾಗಿದೆ‌. ಈ ಸ್ಟವ್ ನಲ್ಲಿ ಎರಡು ಘಟಕಗಳು ಲಭ್ಯವಿದೆ. ಒಂದನ್ನು ಅಡುಗೆ ಮನೆಯಲ್ಲಿ ಹಾಗೂ ಇನ್ನೊಂದನ್ನು ಬಿಸಿಲಿನಲ್ಲಿ ಇಡಬೇಕು. ಈ ರೀತಿಯ ವೈಶಿಷ್ಟ್ಯತೆ ಇರುವ ಕಾರಣ ಈ ಸ್ಟವ್ ಮೂಲಕ ನೀವು ಹಗಲು-ರಾತ್ರಿ ಅಡುಗೆ ಮಾಡಬಹುದು.

ಬೆಲೆ ಎಷ್ಟಿದೆ?

ಅತ್ಯಾಧುನಿಕ ವೈಶಿಷ್ಟ್ಯ ಹೊಂದಿರುವ ಈ ಸೂರ್ಯ ನೂತನ್ ಸೋಲಾರ್ ಸ್ಟವ್ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಎರಡು ವಿಭಿನ್ನ ಬೆಲಯಲ್ಲಿ ಇದು ಲಭ್ಯವಾಗಲಿದೆಯಂತೆ. ಒಂದು ವೇರಿಯಂಟ್ 12,000 ರೂಪಾಯಿಗೆ ಹಾಗೂ ಇನ್ನೊಂದು 23,000 ರೂಪಾಯಿಗೆ ಲಭ್ಯವಾಗಲಿದೆ‌. ಈ ಸೂಪರ್ ಒಲೆಯನ್ನು‌ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಇನ್ನೂ ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಆದರೆ ಸದ್ಯದಲ್ಲೇ ಇದು ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಜನ ಸಾಮಾನ್ಯರಿಗೆ ಇಂಡಿಯನ್ ಆಯಿಲ್ ಗ್ಯಾಸ್ ಏಜನ್ಸಿ ಹಾಗೂ ಪೆಟ್ರೋಲ್ ಪಂಪ್ ಗಳಲ್ಲಿ ದೊರೆಯಲಿದೆ‌.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *