ಚಾಟ್ ನಲ್ಲಿರುವ ಮೆಸೇಜ್ ಪಿನ್‌ ಮಾಡಲು ಅವಕಾಶ -ವಾಟ್ಸಾಪ್ ತಂದಿರುವ ಈ ಹೊಸ ಫೀಚರ್ ಸೆಟ್ಟಿಂಗ್ ಹೇಗೆ?

ನ್ಯೂಸ್ ಆ್ಯರೋ : ಪ್ರತಿ ಬಾರಿಯೂ ಗ್ರಾಹಕ ಸ್ನೇಹಿ ಫೀಚರ್ ಗಳನ್ನು ಪರಿಚಯಿಸುವ ಮೇಟಾ ಒಡೆತನದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಅಗಿರುವ ವಾಟ್ಸಾಪ್ ನಿನ್ನಯಷ್ಟೇ ಹೊಸದೊಂದು ಫೀಚರ್ ಪರಿಚಯಿಸಿದ್ದು, ಇದರ ಮೂಲಕ ಚಾಟ್ ಲೀಸ್ಟ್ ನಲ್ಲಿರುವ ಪ್ರಮುಖ ಮೆಸೇಜನ್ನು ಪಿನ್ ಮಾಡುವ ಅವಕಾಶವನ್ನು ನೀಡಿದೆ. ಈ ಫೀಚರ್ ನ ಸಹಾಯದಿಂದ ಇನ್ನು ಮುಂದೆ ಮೆಸೇಜ್ ಗಾಗಿ ಹುಡುಕಾಡುವ ಕೆಲಸ ತಪ್ಪಲಿದೆ. ಈ ನೂತನ ಫೀಚರ್ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಫೋಟೋ, ಮೆಸೇಜ್ ಇಮೋಜಿಯನ್ನು ಕೂಡ ಪಿನ್ ಮಾಡಬಹುದು!

ಹೌದು, ವಾಟ್ಸಾಪ್ ಜಾರಿಗೊಳಿಸಿರುವ ಈ ಹೊಸ‌ ಫೀಚರ್ ನೆರವಿನಿಂದಾಗಿ ಬಳಕೆದಾದರರು ತಮಗೆ ಬೇಕಾದ ಪ್ರಮುಖ‌ ಸಂದೇಶವನ್ನು ಪಿನ್ ಮಾಡಿ‌ ಇಡಬಹುದು. ಟೆಕ್ಸ್ಟ್ ಮೆಸೇಜ್, ಇಮೋಜಿ, ಫೋಟೋಗಳನ್ನು ಕೂಡ ಈ ರೀತಿ ಪಿನ್ ಮಾಡುವ ಅವಕಾಶವಿದೆ.

ಪಿನ್‌ ಮಾಡಲ್ಪಟ್ಟ ಈ ಮೆಸೇಜ್ ಚಾಟ್ ಬಾಕ್ಸ್ ಮೇಲೆ ಬ್ಯಾನರ್ ರೀತಿ ಕಾಣಿಸುತ್ತದೆ. ಆದರೆ ಒಂದು ಬಾರಿಗೆ ಒಂದು ಮಸೇಜನ್ನು ಮಾತ್ರ ಈ ರೀತಿ ಪಿನ್ ಮಾಡಲು ಅವಕಾಶ ನೀಡಲಾಗಿದೆ.

ಪಿನ್‌ ಮಾಡುವುದು ಹೇಗೆ?

ಚಾಟ್ ನಲ್ಲಿ ಪಿನ್ ಮಾಡಬೇಕೆಂದುಕೊಂಡಿರುವ ಮೆಸೇಜನ್ನು ಒತ್ತಿ ಹಿಡಿಯಬೇಕು. ಕಾನ್ ಟೆಕ್ಸ್ಟ್ ಮೆನುವಿನಲ್ಲಿರುವ ಪಿನ್ ಅನ್ನು ಆಯ್ಕೆ ಮಾಡಬೇಕು.

ಹೀಗೆ ಮಾಡಿದ ತಕ್ಷಣ ಆ ಮೆಸೇಜ್ ಚಾಟದ ಲೀಸ್ಟ್ ಮೇಲೆ ಬ್ಯಾನರ್ ರೀತಿ ದೊಡ್ಡದಾಗಿ‌ ಕಾಣಿಸಿಕೊಳ್ಳುತ್ತದೆ.

ಇದರೊಂದಿಗೆ ಪಿನ್ ಮಾಡಿದ ಮೆಸೇಜ್ ಎಷ್ಟು ದಿನ ಅಥವಾ ಎಷ್ಟು ಗಂಟೆಗಳ ಕಾಲ ಇರಬೇಕು ಎಂಬುದನ್ನೂ ಕೂಡ ನಿರ್ಧರಿಸುವ ಆಯ್ಕೆಗಳಿದೆ.