ಮಲಗಿದ್ರೂ ಬ್ಯಾಕ್’ಗ್ರೌಂಡ್ ನಲ್ಲಿ ಮೈಕ್ರೊಫೋನ್ ಆನ್ – ವಾಟ್ಸಾಪ್ ಅನ್ನು ನಂಬೋಕೇ ಆಗಲ್ಲ ಎಂದ ಮಸ್ಕ್..!!

ಮಲಗಿದ್ರೂ ಬ್ಯಾಕ್’ಗ್ರೌಂಡ್ ನಲ್ಲಿ ಮೈಕ್ರೊಫೋನ್ ಆನ್ – ವಾಟ್ಸಾಪ್ ಅನ್ನು ನಂಬೋಕೇ ಆಗಲ್ಲ ಎಂದ ಮಸ್ಕ್..!!

ನ್ಯೂಸ್ ಆ್ಯರೋ‌ : ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸ್‌ಆ್ಯಪ್‌ ಬಗ್ಗೆ ಕೆಲವೊಮ್ಮೆ ಆರೋಪ ಕೇಳಿ ಬರುತ್ತದೆ. ಇದರಲ್ಲಿನ ಸುರಕ್ಷತೆ ಬಗ್ಗೆ ಆಗಾಗ ಅನುಮಾನ ಮೂಡುತ್ತದೆ. ಇದೀಗ ಟ್ವಿಟ್ಟರ್‌ ಸಿಇಒ ಎಲೋನ್ ಮಸ್ಕ್ ವಾಟ್ಸ್‌ಆ್ಯಪ್‌ ವಿರುದ್ಧ ಗಂಭೀರ ಆರೋಪ ಹೊರಿಸಿ ಸುದ್ದಿಯಲ್ಲಿದ್ದಾರೆ.

ಟ್ವಿಟ್ಟರ್‌ನ ಎಂಜಿನಿಯರ್ ಫೋಡ್ ಡಬೀರ್ ತಾನು ವಾಟ್ಸ್‌ಆ್ಯಪ್‌ ಅಪ್ಲಿಕೇಶನ್ ಸಕ್ರಿಯವಾಗಿ ಬಳಕೆ ಮಾಡದಿರುವಾಗಲೂ, ತಾವು ಮಲಗಿದ್ದ ಸಮಯದಲ್ಲೂ ನಿರಂತರವಾಗಿ ಮೈಕ್ರೋಫೋನ್ ಬ್ಯಾಕ್‌ಗ್ರೌಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ ಎಂದು ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ. ಜೊತೆಗೆ ಇದಕ್ಕೆ ಸಂಬಂಧಪಟ್ಟಿರುವ ಸ್ಕ್ರೀನ್‌ಶಾಟ್ ಅನ್ನು ಕೂಡಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಎಲೋನ್ ಮಸ್ಕ್, ಯಾವುದನ್ನೂ ನಂಬಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಾಟ್ಸ್‌ಆ್ಯಪ್‌, ಬಳಕೆದಾರರು ತಮ್ಮ ಮೈಕ್ ಸೆಟ್ಟಿಂಗ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದಾರೆ. ಒಮ್ಮೆ ಬಳಕೆದಾರರು ಅನುಮತಿ ನೀಡಿದರೆ, ಕರೆ ಮಾಡುವಾಗ, ಧ್ವನಿಯ ಸಂದೇಶ ಅಥವಾ ವೀಡಿಯೋ ರೆಕಾರ್ಡ್ ಮಾಡುವಾಗ ಮಾತ್ರವೇ ವಾಟ್ಸ್‌ಆ್ಯಪ್‌ ಮೈಕ್‌ ಕಾರ್ಯ ನಿರ್ವಹಿಸುತ್ತದೆ. ಈ ಎಲ್ಲಾ ಸಂವಹನವನ್ನು ‘ಎಂಡ್ ಟು ಎಂಡ್ ಎನ್‌ಕ್ರಿಪ್ಶನ್’ನಿಂದ ರಕ್ಷಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ನಾವು ಟ್ವಿಟ್ಟರ್‌ನ ಎಂಜಿನಿಯರ್‌ನೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ತಮ್ಮ ಪಿಕ್ಸೆಲ್ ಫೋನ್ ಹಾಗೂ ವಾಟ್ಸ್‌ಆ್ಯಪ್‌ನೊಂದಿಗೆ ಸಮಸ್ಯೆ ಇರುವುದಾಗಿ ಪೋಸ್ಟ್ ಮಾಡಿದ್ದಾರೆ. ಇದು ಆಂಡ್ರಾಯ್ಡ್‌ನ ದೋಷವಾಗಿದ್ದು, ಇದರ ತನಿಖೆ ಹಾಗೂ ಪರಿಹಾರಕ್ಕೆ ಗೂಗಲ್ ಅನ್ನು ಕೇಳಿಕೊಂಡಿದ್ದೇವೆ ಎಂದು ವಾಟ್ಸ್‌ಆ್ಯಪ್‌ ತಿಳಿಸಿದೆ. ಆದರೂ ಹಲವು ವಾಟ್ಸ್‌ಆ್ಯಪ್‌ ಬಳಕೆದಾರರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *