ಖಾತೆಯಿಂದ ಹಣ ಕದಿಯುವ ಈ ಐದು ಆಪ್ ಗಳು ನಿಮ್ಮ ಮೊಬೈಲ್ ನಲ್ಲಿದೆಯಾ? – ಇದ್ದರೆ ಈಗಲೇ ಡಿಲೀಟ್ ಮಾಡಿ…!!

ಖಾತೆಯಿಂದ ಹಣ ಕದಿಯುವ ಈ ಐದು ಆಪ್ ಗಳು ನಿಮ್ಮ ಮೊಬೈಲ್ ನಲ್ಲಿದೆಯಾ? – ಇದ್ದರೆ ಈಗಲೇ ಡಿಲೀಟ್ ಮಾಡಿ…!!

ನ್ಯೂಸ್ ಆ್ಯರೋ : ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಬಳಸದವರು ಯಾರೂ ಇಲ್ಲ. ಏನೇ ಬೇಕಿದ್ದರೂ ಎಲ್ಲವೂ ಈಗ ಬೆರಳ ತುದಿಯಲ್ಲೇ ಸಿಗುತ್ತದೆ. ಮನರಂಜನೆ, ಮೊಬೈಲ್ ಬ್ಯಾಂಕಿಂಗ್, ಪುಡ್ ಡೆಲಿವರಿ, ಶಾಪಿಂಗ್, ಸೋಶಿಯಲ್ ಮೀಡಿಯಾ ಹೀಗೆ ಎಲ್ಲವೂ ಮೊಬೈಲ್ ನಲ್ಲಿ ಲಭ್ಯವಿದೆ. ಆದರೆ ಕೆಲವು ಖದೀಮರು ನಿಮ್ಮ ಮೊಬೈಲ್ ಬಳಕೆಯನ್ನೇ ಬಂಡವಾಳವನ್ನಾಗಿಸಿ, ನಿಮಗೆ ತಿಳಿಯದೇ ನಿಮ್ಮನ್ನು ದೋಚುತ್ತಿದ್ದಾರೆ. ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಗಳಿದ್ದರೆ ನೀವು ಹಣ ಕಳೆದುಕೊಳ್ಳುವುದು ಗ್ಯಾರಂಟಿ.

ಹೌದು, ಹೆಚ್ಚಿನ ಜನರು ಆಂಡ್ರಾಯ್ಡ್ ಮೊಬೈಲ್ ಬಳಸುತ್ತಾರೆ‌. ಜೊತೆಗೆ ಎಡಿಟಿಂಗ್, ಗೇಮ್ಸ್, ಸಾಮಾಜಿಕ ಮಾಧ್ಯಮ, ಪೇಮೆಂಟ್ ಅಪ್ಲಿಕೇಶನ್ ಗಳಿಗಾಗಿ ಗೂಗಲ್ ಪ್ಲೇಸ್ಟೋರ್ ನಿಂದ ಆ್ಯಪ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇವುಗಳಲ್ಲಿ ಅದೆಷ್ಟೋ ಅನಧಿಕೃತ ಆ್ಯಪ್ ಗಳಿರುತ್ತವೆ, ಜನರನ್ನು ದೋಚುವ ಆ್ಯಪ್ ಗಳಿರುತ್ತವೆ. ನೀವು ಹಿಂದು ಮುಂದು ಯೋಚಿಸದೆ ಅವುಗಳನ್ನು ಬಳಸಿದರೆ. ಖಾತೆಯಲ್ಲಿರುವ ಹಣವೆಲ್ಲ ಖಾಲಿಯಾಗಬಹುದು. ಅಂತಹ ಐದು ಆ್ಯಪ್ ಗಳಿವೆ.

ಅಪಾಯಕಾರಿ 5 ಆ್ಯಪ್ ಗಳು

ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿ ಬಳಸುವ ಈ ಐದು ಅತ್ಯಂತ ಅಪಾಯಕಾರಿ ಎಂದು ವರದಿಯಾಗಿದೆ.‌ ಈ ಆ್ಯಪ್ ಗಳ ಮೂಲಕ ಹ್ಯಾಕರ್ಸ್ ಗಳು ಸುಲಭವಾಗಿ ನಿಮ್ಮ ಮೊಬೈಲ್ ಹಿಡಿತಕ್ಕೆ ತೆಗೆದುಕೊಂಡು ನಿಮ್ಮ ಖಾತೆ ಸಂಖ್ಯೆ, ಲಾಗಿನ್ ಐಡಿ ಪಡೆದು ಖಾತೆಯಲ್ಲಿದ್ದ ಹಣವನ್ನೆಲ್ಲ ನುಂಗಿ ನೀರು‌ ಕುಡಿದು ಬಿಡುತ್ತಾರೆ.

ಇದರೊಂದಿಗೆ ವಲ್ಚರ್ ಎಂಬುದು ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿದ್ದು, ಅದು ಸೋಂಕಿತ ಸಾಧನಗಳಿಂದ PII ಕದಿಯುವುದರಲ್ಲಿ ಮತ್ತು ಸ್ಕ್ರೀನ್-ಸ್ಟ್ರೀಮಿಂಗ್ ಸಾಮರ್ಥ್ಯಗಳನ್ನು ಬಳಸುವುದರಲ್ಲಿ ಪರಿಣತಿ ಹೊಂದಿದೆ ಎಂದು ವರದಿಯಾಗಿದೆ. ಇವುಗಳು ಕೂಡ ನಿಮ್ಮ ಖಾತೆಯಿಂದ ಹಣ ಕದಿಯುವ ಕೆಲಸ ಮಾಡಬಹುದು ಎಚ್ಚರವಾಗಿರಿ.

ಈ ಆ್ಯಪ್ ಗಳನ್ನು ಡಿಲೀಟ್ ಮಾಡಿ:

  • Manager Small Lite
  • My Finances Tracker
  • Zetter Authentiction
  • Codice Fiscale 2022
  • Recover Audio
  • Image and Videos

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *