
ಯುಪಿಎಸ್‌ಸಿ ಪರೀಕ್ಷೆಗೆ ಫೆ.1ರಿಂದ 22ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ- ಸುಲಭ ಹಂತದಲ್ಲಿ ಫಾರ್ಮ್ ತುಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ
- ಉದ್ಯೋಗ ಮಾಹಿತಿ
- February 2, 2023
- No Comment
- 2978
ನ್ಯೂಸ್ ಆ್ಯರೋ : ಕೇಂದ್ರ ಲೋಕಸೇವಾ ಆಯೋಗದ ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಫೆಬ್ರವರಿ 1ರಿಂದ 21ರ ಒಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತಿ ಇರುವ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಇನ್ನೂ ಅರ್ಜಿ ಸಲ್ಲಿಸುವಾಗ ಕೆಲ ತಪ್ಪುಗಳನ್ನು ಮಾಡಬೇಡಿ. ಈ ನಿಟ್ಟಿನಲ್ಲಿ ಈ ಲೇಖನದಲ್ಲಿ ಅರ್ಜಿ ಹಂತವನ್ನು ಸಂಪೂರ್ಣವಾಗಿ ತಿಳಿಸಲಾಗಿದೆ.
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ 1-2-2023
- ಅರ್ಜಿ ಸಲ್ಲಿಕೆ ಕೊನೆ ದಿನಾಂಕ 21-2-2023
- ಅಧಿಕೃತ ವೆಬ್ ಸೈಟ್ upsc.gov.in
- ಅರ್ಜಿ ಸಲ್ಲಿಕೆ ವಿಧಾನ ಆನ್ಲೈನ್
- UPSC ಪ್ರಿಲಿಮ್ಸ್ ಪರೀಕ್ಷೆ ದಿನಾಂಕ 28-5-2023
- UPSC ಮುಖ್ಯ ಪರೀಕ್ಷೆ 15-9-2023
- ಸಾಮಾನ್ಯ/ OBC/ EWS ಅರ್ಜಿ ಶುಲ್ಕ 100 ರೂ.
- SC/ ST/ ಮಾಜಿ ಸೈನಿಕರು/ PWD/ ಮಹಿಳೆಯರಿಗೆ ಅರ್ಜಿ ಶುಲ್ಕವಿಲ್ಲ ಉಚಿತ
ಈ ಕೆಳಕಂಡ ದಾಖಲೆಗಳನ್ನು ಆನ್ಲೈನ್ ಅರ್ಜಿಯ ಜೊತೆಗೆ ಲಗತ್ತಿಸಬೇಕು:
1) ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು
2) UPSC ಉಲ್ಲೇಖಿಸಿರುವ ನಿಯಮಾನುಸಾರ ಸ್ಕ್ಯಾನ್ ಮಾಡಿದ ಫೋಟೋ ಮತ್ತು ಸಹಿ ಇರಬೇಕು
3) ನಿಮ್ಮ ಫೋಟೋ ಇರುವ ಯಾವುದೇ ಗುರುತಿನ ಚೀಟಿ ಇರಬೇಕು. (ಆಧಾರ/ವೋಟರ್ ಐಡಿ)
4) ಮೀಸಲಾತಿಗೆ ಸಂಬಂಧಿಸಿದ ದಾಖಲೆ. (ಜಾತಿ ಪ್ರಮಾಣ ಪತ್ರ)
5) ಶೈಕ್ಷಣಿಕ ವಿವರಗಳು
6) ಶುಲ್ಕ ಪಾವತಿ ವಿವರಗಳು
ಶುಲ್ಕ ಪಾವತಿ ಬಗ್ಗೆ ಇಲ್ಲಿದೆ ಮಾಹಿತಿ:
UPSC ಅರ್ಜಿ ಶುಲ್ಕವನ್ನು ಆನ್ ಲೈನ್ ಮೋಡ್ (ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, IMPS, ನಗದು ಕಾರ್ಡ್/ಮೊಬೈಲ್ ವಾಲೆಟ್) ಅಥವಾ ಬ್ಯಾಂಕ್ ಚಲನ್ ಮೂಲಕ ಪಾವತಿಸಬಹುದು.
ನೆನಪಿಟ್ಟುಕೊಳ್ಳಬೇಕಾದ ದಿನಾಂಕಗಳು:
ಫೆ.1ರಿಂದ upsc.gov.in ವೆಬ್‌ಸೈಟ್‌ನಲ್ಲಿ UPSC CSE ಪ್ರಿಲಿಮ್ಸ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಪರೀಕ್ಷೆಯು ಮೇ 28ರಂದು ನಡೆಯಲಿದೆ. ಮುಖ್ಯ ಪರೀಕ್ಷೆಯು 15 ಸೆಪ್ಟೆಂಬರ್ ನಡೆಯಲಿದೆ. ಫಲಿತಾಂಶ ಮತ್ತು ಸಂದರ್ಶನದ ದಿನಾಂಕಗಳನ್ನು ನಂತರ ತಿಳಿಸಲಾಗುವುದು.
ಪ್ರಿಲಿಮ್ಸ್ ಪರೀಕ್ಷೆಯ ಮಾದರಿ ಇಲ್ಲಿದೆ: ಯಾವುದೇ ಪರೀಕ್ಷೆಯನ್ನು ಪಾಸ್ ಮಾಡಲು ಪರೀಕ್ಷಾ ವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿದು ಅದಕ್ಕೆ ತಯಾರಾಗಬೇಕಾಗುತ್ತದೆ. ಹಾಗಾಗಿ ಪ್ರಿಲಿಮ್ಸ್ ಪರೀಕ್ಷೆ ಯಾವ ರೀತಿ ನಡೆಯುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಪೂರ್ವಭಾವಿ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಮೊದಲ ಪ್ರಶ್ನೆಪತ್ರಿಕೆ GS ಮತ್ತು ಇನ್ನೊಂದು GST. ಜಿಎಸ್ ಪೇಪರ್ ನಲ್ಲಿ ಒಟ್ಟು 100 ಪ್ರಶ್ನೆಗಳಿರುತ್ತವೆ. ಅದರಲ್ಲಿ ಅಭ್ಯರ್ಥಿಯು ಉತ್ತಮ ಅಂಕಗಳನ್ನು ಗಳಿಸಬೇಕು. ಈ ಪತ್ರಿಕೆಯಲ್ಲಿ, ಪ್ರತಿ ಸರಿ ಉತ್ತರಕ್ಕೆ ಎರಡು ಅಂಕಗಳನ್ನು ನೀಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಮೂರನೇ ಒಂದು ಅಂಕವನ್ನು ಕಳೆಯಲಾಗುತ್ತದೆ.
2ನೇ ಪ್ರಶ್ನೆಪತ್ರಿಕೆಯಾದ ಸಿವಿಲ್ ಸರ್ವೀಸಸ್ ಆಪ್ಟಿಟ್ಯೂಡ್ ಟೆಸ್ಟ್ ನಲ್ಲಿ ಒಟ್ಟು 80 ಪ್ರಶ್ನೆಗಳನ್ನು ನೀಡಲಾಗುತ್ತದೆ. ಇಲ್ಲಿ ಸರಿಯಾದ ಉತ್ತರಕ್ಕೆ 2.5 ಅಂಕಗಳನ್ನು ನೀಡಲಾಗುತ್ತದೆ. ತಪ್ಪು ಉತ್ತರಕ್ಕೆ ಮೂರನೇ ಒಂದು ಅಂಕಗಳನ್ನು ಕಳೆಯಲಾಗುತ್ತದೆ. ಮೊದಲ ಪತ್ರಿಕೆಯ ಅಂಕಗಳ ಆಧಾರದ ಮೇಲೆ ಕಟ್ ಆಫ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಎರಡನೇ ಪತ್ರಿಕೆ ಅರ್ಹತಾ ಪತ್ರಿಕೆಯಾಗಿದ್ದು ಶೇಕಡಾ 33 ಅಂಕಗಳನ್ನು ಗಳಿಸಲೇಬೇಕು.
ಇನ್ನು ಪ್ರಿಲಿಮ್ಸ್ ಪ್ರಶ್ನೆ ಪತ್ರಿಕೆ ಬಹುಆಯ್ಕೆ ವಿಧಾನದಲ್ಲಿ ಇರುತ್ತದೆ. OMR ಶೀಟ್ ನಲ್ಲಿ ಉತ್ತರವನ್ನು ಆಯ್ಕೆ ಮಾಡಬೇಕು. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆಯನ್ನು ಪಡೆಯುತ್ತಾರೆ.