2023 ಹೊಸ ವರ್ಷದ ಬಂಪರ್ ಆಫರ್ – 7000 ರೂ.ಗಿಂತ ಕಡಿಮೆ ಬೆಲೆಯ 3 ಸ್ಮಾರ್ಟ್ ಫೋನ್ಗಳು ಇಲ್ಲಿವೆ.‌.!!

2023 ಹೊಸ ವರ್ಷದ ಬಂಪರ್ ಆಫರ್ – 7000 ರೂ.ಗಿಂತ ಕಡಿಮೆ ಬೆಲೆಯ 3 ಸ್ಮಾರ್ಟ್ ಫೋನ್ಗಳು ಇಲ್ಲಿವೆ.‌.!!

ನ್ಯೂಸ್ ಆ್ಯರೋ : ಭಾರತದ ಮಧ್ಯಮವರ್ಗದ ಜನರು ಯಾವಾಗಲೂ ಕಡಿಮೆ ಬೆಲೆಯ ಒಂದೊಳ್ಳೆ ಸ್ಮಾಟ್ ಫೋನ್‌ ಕೊಳ್ಳಲು ಕಾಯುತ್ತಿರುತ್ತಾರೆ. ವರದಿಯೊಂದರ ಪ್ರಕಾರ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಫೋನ್ ಗಳ ಪಟ್ಟಿಯಲ್ಲಿ 6 ಸಾವಿರದಿಂದ 15 ಸಾವಿರದೊಳಗೆ ಬೆಲೆಯನ್ನು ಹೊಂದಿರುವ ಮೊಬೈಲ್ ಫೋನ್ ಗಳ ಸಂಖ್ಯೆ ಶೇ.80% ರಷ್ಟಿದೆ. ದೇಶದ ಪ್ರಮುಖ ಮೊಬೈಲ್ ಉತ್ಪಾದನಾ ಕಂಪನಿಗಳು ದೇಶದ ಬಜೆಟ್ ಗೆ ಅನುಗುಣವಾಗಿ ಸ್ಮಾರ್ಟ್ ಫೋನ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿವೆ.

ಸದ್ಯ ನೀವೂ ಕೂಡ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ ಫೋನ್ ಖರೀದಿಸುವ ಉದ್ದೇಶ ಹೊಂದಿದ್ದರೆ ಇದು ನಿಮಗೆ ಒಳ್ಳೆಯ ಸಮಯ. ದೇಶದ ಪ್ರಮುಖ ಮೊಬೈಲ್ ಕಂಪನಿಗಳು ಇತ್ತೀಚೆಗೆ ಪರಿಚಯಿಸಿದ ಮತ್ತು 2023ರ ಹೊಸ ವರ್ಷದ ಸಲುವಾಗಿ 7000 ರೂ. ಹಾಗೂ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್ 3 ಸ್ಮಾರ್ಟ್ ಫೋನ್‌ಗಳು ಹೇಗಿದೆ, ಅವುಗಳ ವೈಶಿಷ್ಟ್ಯಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

1.Poco C50

ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್‌ಗಳಲ್ಲಿ ಒಂದಾದ Poco ಇತ್ತೀಚೆಗೆ Poco C50 ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ವಾಟರ್ ಡ್ರಾಪ್ ನಾಚ್ ಹೊಂದಿರುವ HD+ ಗುಣಮಟ್ಟದ 6.52 ಇಂಚಿನ ಪೂರ್ಣ ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾಟೆಕ್ ಹಿಲಿಯೋ A22 SoC ಪ್ರೊಫೆಸರ್ ಹೊಂದಿರುವ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 12ಗೂ ನಲ್ಲಿ ಕಾರ್ಯನಿರ್ವಹಿಸುತ್ತದೆ. 3GB RAM ಹಾಗೂ 32GB ಆಂತರಿಕ ಸ್ಟೋರೇಜ್ ಹೊಂದಿರುವ ಫೋನಿನ ಆಂತರಿಕ ಮೆಮೊರಿಯನ್ನು ಎಸ್ ಡಿ ಕಾರ್ಡ್ ಸಹಾಯದಿಂದ 512GB ವರೆಗೆ ವಿಸ್ತರಿಸಲು ಸಾಧ್ಯವಿದೆ.

ಇದರಲ್ಲಿ AI ಜೊತೆಗೆ 8 ಮೆಗಾಫಿಕ್ಸಲ್ ಸಾಮರ್ಥ್ಯದ ರಿಯಲ್ ಡುಯಲ್ ಕ್ಯಾಮರ ಮತ್ತು 5 ಮೆಗಾಫಿಕ್ಸೆಲೆ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವಿದೆ. 5000Amh ಬ್ಯಾಟರಿ ಸಾಮರ್ಥ್ಯದೊಂದಿಗೆ ಸಂಪೂರ್ಣ ಫಿಂಗರ್ ಪ್ರಿಂಟ್ ಲಭ್ಯವಿದೆ. 7,299 ರೂ.ಗಳಿಗೆ ಈ ಸ್ಮಾರ್ಟ್ ಫೋನ್ ಲಭ್ಯವಿದ್ದು ಜನವರಿ 10 ರಿಂದ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

Redmi A1 ಸ್ಮಾರ್ಟ್ ಫೋನ್

ಭಾರತದ ಇನ್ನೊಂದು ಜನಪ್ರಿಯ ಮೊಬೈಲ್ ಉತ್ಪಾದನಾ ಸಂಸ್ಥೆ ಕಡಿಮೆ ಬೆಲೆಯ ಉತ್ತಮ ಮೊಬೈಲ್ ಖರೀದಿಸಲು ಬಯಸುತ್ತಿರುವ ಗ್ರಾಹಕರಿಗಾಗಿ Redmi A1 ಸ್ಮಾರ್ಟ್ ಫೊನ್ ಅನ್ನು ಪರಿಚಯಿಸುತ್ತಿದೆ. ಇದರಲ್ಲಿ 6.52 ಇಂಚಿನ LCD ಡಿಸ್ ಪ್ಲೇ, ಡ್ಯುಯಲ್ ಕ್ಯಾಮರಾ ಸೆಟಪ್ ಮತ್ತು 10W ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿ ಲಭ್ಯವಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 5MP ಸಾಮರ್ಥ್ಯದ ಕ್ಯಾಮರಾ ನೀಡಲಾಗಿದೆ. ಜೊತೆಗೆ ಮೈಕ್ರೋ SD ಕಾರ್ಡ್ ಸ್ಲಾಟ್, 3.5mm ಹೆಡ್ ಫೋನ್‌ಜ್ಯಾಕ್, ಡ್ಯುಯಲ್ ಸಿಮ್ 4G ಹೊಂದಾಣಿಕೆ, ಸಿಂಗಲ್ ಬ್ಯಾಂಡ್ ವೈಫೈ, ಬ್ಲೂಟುತ್ 5.0 ಜೊತೆಗೆ ಇನ್ನಷ್ಟು ವೈಶಿಷ್ಟ್ಯಗಳನ್ನು ಹೊಂದಿದ್ದು ಗ್ರಾಹಕರಿಗೆ 6,499 ರೂ. ಬೆಲೆಗೆ ತಿಳಿ ನೀಲಿ, ಕ್ಲಾಸಿಕ್ ಬ್ಲಾಕ್ ಅಥವಾ ತಿಳಿ ಹಸಿರು ಬಣ್ಣಗಳಲ್ಲಿ Mi ಹೋಂ ಸ್ಟೋರ್, ಅಮೆಜಾನ್ ಇಂಡಿಯಾ, Mi.com ಗಳಲ್ಲಿ ಲಭ್ಯವಿದೆ.

3.Realme C30 ಸ್ಮಾರ್ಟ್ ಫೋನ್

ಚೀನಾದ ಸ್ಮಾರ್ಟ್ ಫೋನ್ ಬ್ರ್ಯಾಂಡ್ Realme ಗ್ರಾಹಕರ ಕೈಗೆಟುಕುವ ದರದಲ್ಲಿ Realme C30 ಎನ್ನುವ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದೆ. 5.6 ಇಂಚಿನ HD ಡಿಸ್ ಪ್ಲೇ, 5000mAh ಬ್ಯಾಟರಿ ಮತ್ತು 8 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾದೊಂದಿಗೆ SD ಕಾರ್ಡ್ ಮೂಲಕ 1TB ವರೆಗೆ ಆಂತರಿಕ ಮೆಮೊರಿಯ ವಿಸ್ತರಣೆ ಸಾಧ್ಯ. ಸೆಲ್ಫಿಗಾಗಿ 5 ಮೆಗಾ ಪಿಕ್ಸೆಲ್‌ ಕ್ಯಾಮರ ಅಳವಡಿಸಲಾಗಿದೆ. ಈ ಸ್ಮಾರ್ಟ್ ಫೋನ್ ಬೆಲೆ 6999 ರಿಂದ 7999ರ ವರೆಗಿದ್ದು ಬ್ಯಾಂಬು ಬ್ಲೂ, ಡೈನಂ ಬ್ಲೂ, ಲೇಕ್ ಬ್ಲೂ ಬಣ್ಣಗಳಲ್ಲಿ ಪ್ಲಿಫ್ ಕಾರ್ಟ್, Real me.com ಸೇರಿದಂತೆ ಇತರೆ ಮೊಬೈಲ್ ಅಂಗಡಿಗಳಲ್ಲಿ ಲಭ್ಯವಿದೆ.

ಕಡಿಮೆ ಬೆಲೆಗೆ ಒಳ್ಳೆಯ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವ ಕನಸಿದ್ದರೆ ಈ ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *