ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್ – ಇನ್ಮುಂದೆ ಇಂಟರ್ನೆಟ್ ಇಲ್ಲದಿದ್ದರೂ ನಡೆಯುತ್ತೆ ಚಾಟಿಂಗ್..!!

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್ – ಇನ್ಮುಂದೆ ಇಂಟರ್ನೆಟ್ ಇಲ್ಲದಿದ್ದರೂ ನಡೆಯುತ್ತೆ ಚಾಟಿಂಗ್..!!

ನ್ಯೂಸ್ ಆ್ಯರೋ : ಬಳಕೆದಾರರು ಕೈ ತಪ್ಪಿ ಹೋಗಬಾರದು ಹಾಗೂ ಅವರಿಗೆ ವಾಟ್ಸಾಪ್ ಬಳಕೆಯಲ್ಲಿ ಕೊರತೆಯಿರಬಾರದು ಎಂಬ ಕಾರಣಕ್ಕೆ ವಾಟ್ಸಾಪ್ ಹೊಸ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ಸದ್ಯ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ವಾಟ್ಸಾಪ್ ಪ್ರಪಂಚದಾದ್ಯಂತ ಇರುವ ಬಳಕೆದಾರರಿಗಾಗಿ ಪ್ರಾಕ್ಸಿ ಬೆಂಬಲವನ್ನು ನೀಡಲು ಹೊರಟಿದೆ. ಗುರುವಾರವಷ್ಟೇ ಈ ಬಗ್ಗೆ ಕಂಪನಿ‌ ಮಾಹಿತಿ ನೀಡಿದೆ.

ಈ ಹೊಸ ಮಾರ್ಪಾಡಿನ ಫಲವಾಗಿ ಬಳಕೆದಾರರು ಇನ್ನು ಮುಂದೆ ಇಂಟರ್ನೆಟ್ ಇಲ್ಲದಿಲ್ಲರೂ ಸಹ ತಮ್ಮ ಸ್ನೇಹಿತರೊಂದಿಗೆ, ಆಪ್ತರೊಂದಿಗೆ ಚಾಟಿಂಗ್ ನಲ್ಲಿ ತೊಡಗಬಹುದಾಗಿದೆ. ಕೇವಲ ಫೋನಲ್ಲಷ್ಟೇ ಅಲ್ಲ ತಮ್ಮ ಸುತ್ತಮುತ್ತ ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್ ಬಳಕೆ ನಿರಂತರವಾಗಿ ನಿಮಗೆ ತೆರೆದೆ ಇರುತ್ತದೆ. ಬಳಕೆದಾರರು ಪ್ರಪಂಚದಾದ್ಯಂತ ಸ್ವಯಂ ಸೇವೆಗಳು ಮತ್ತು ಪ್ರಾಕ್ಸಿ ಸರ್ವರ್ ಸೆಟಪ್ ಮೂಲಕ ನಿರಂತರ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ.

ಇನ್ನು ವಾಟ್ಸಾಪ್ ಪ್ರಾಕ್ಸಿ ನೆಟ್ವರ್ಕ್ ಗೆ ಸಂಪರ್ಕಗೊಂಡಿದ್ದರೂ‌ ಕೂಡ ಬಳಕೆದಾರರು ಗೌಪ್ಯತೆ ಹಾಗೂ ಸುರಕ್ಷತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಹಿಂದಿನಂತೆಯೆ ಬಳಕೆದಾರರ ಭದ್ರತೆಯ ಜವಾಬ್ದಾರಿ ನಮ್ಮದೇ ಎಂದು ವಾಟ್ಸಾಪ್ ಸಂಸ್ಥೆ ಬಳಕೆದಾರರ ಸಂದೇಶಗಳನ್ನು ಆರಂಭದಿಂದ ಅಂತ್ಯದವರೆಗೆ ಎನಿಸ್ಕ್ರಿಪ್ಟ್ ಮಾಡಲಾಗುವುದು ತಿಳಿಸಿದೆ.

ಕಂಪನಿಯ ಪ್ರಕಾರ, ಬಳಕೆದಾರರ ಸಂದೇಶಗಳ ಅನ್ಯರಿಗೆ ನೋಡಲಾಗುವುದಿಲ್ಲ. ಜೊತೆಗೆ ವಾಟ್ಸಾಪ್ ಬ್ಲಾಗ್ ಪೋಸ್ಟ್ ನಲ್ಲಿ ‘2023ನೇ ಹೊಸ ವರ್ಷಕ್ಕೆ ಸ್ವಾಗತ. ಇಂಟರ್ನೆಟ್ಸ್ ಸ್ಥಗಿತಗೊಳಿಸುವಿಕೆ ಎಂದಿಗೂ ಸಂಭವಿಸಬಾರದು. ಕಳೆದ ಕೆಲ ತಿಂಗಳುಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಗಮನಿಸುತ್ತಿದ್ದೇವೆ. ಸುರಕ್ಷತೆ ಮತ್ತು ವಿಶ್ವಾಸಾರ್ಹ ಸಂವಹನ ಮಾಧ್ಯಮವನ್ನು ಬಯಸುವ ಜನರಿಗೆ ನಮ್ಮ ಈ ಹೊಸ ಕ್ರಮ ಸಹಾಯ ಮಾಡುತ್ತದೆ ಎಂದು ಬರೆಯಲಾಗಿದೆ.

ನೀವು ಕೂಡ ಪ್ರಾಕ್ಸಿ ಸಂಪರ್ಕವನ್ನು ಬಳಸಲು ಉತ್ಸುಕರಾಗಿದ್ದರೆ ವಾಟ್ಸಾಪ್ ಸೆಟ್ಟಿಂಗ್ ಗೆ ತೆರಳಿ ಅಲ್ಲಿ ನೀವು ಸಂಗ್ರಹಣೆ ಮತ್ತು ಡೇಟಾ ಆಯ್ಕೆಯನ್ನು ಪಡೆಯುತ್ತೀರಿ. ನಂತರ ಪ್ರಾಕ್ಸಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಮತ್ತೆ ಯೂಸ್ ಪ್ರಾಕ್ಸಿಯನ್ನು ಕ್ಲಿಕ್ ಮಾಡಿ ಈ ಸೇವೆಯನ್ನು ಪಡೆಯಬಹುದಾಗಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *