
ನಿಮ್ಮ ಮೊಬೈಲನ್ನು ಪವರ್ ಬ್ಯಾಂಕ್ ಮೂಲಕ ಚಾರ್ಜ್ ಮಾಡ್ತಿದ್ದೀರಾ..? – ಹಾಗಾದರೆ ಈ ಸುದ್ದಿ ನಿಮಗಾಗಿ…
- ಟೆಕ್ ನ್ಯೂಸ್
- November 17, 2023
- No Comment
- 63
ನ್ಯೂಸ್ ಆ್ಯರೋ : ಮೊಬೈಲ್ ಹೆಚ್ಚಾಗಿ ತನ್ನ ಬಾಳಿಕೆಯನ್ನು ಕಳೆದುಕೊಳ್ಳುವುದು ಅದರದ್ದೇ ಚಾರ್ಜರ್ ಬಳಸದೆ ಬೇರೆ ಚಾರ್ಜರ್ ಬಳಸುವುದರಿಂದ ಎಂದು ಅನೇಕರು ಹೇಳುತ್ತಾರೆ. ಆದರೆ ಇತ್ತೀಚೆಗೆ ಚಾರ್ಜರ್ ನಲ್ಲಿ ಚಾರ್ಜ್ ಇಡುವುದಕ್ಕಿಂತ ಪವರ್ ಬ್ಯಾಂಕ್ ನಲ್ಲಿ ಚಾರ್ಜ್ ಇಡುವವರ ಸಂಖ್ಯೆಯೇ ಹೆಚ್ಚು. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಅದನ್ನು ಖರೀದಿಸಿ ಚಾರ್ಜ್ ಮಾಡುತ್ತಾರೆ. ಆದರೆ ಅಗ್ಗದ ಪವರ್ ಬ್ಯಾಂಕ್ ಗಳು ಸ್ಮಾರ್ಟ್ ಫೋನ್ ಬ್ಯಾಟರಿಯನ್ನು ಹಾನಿಗೊಳಿಸಬಹುದು. ಓವರ್ ಚಾರ್ಜ್ ಮಾಡಿದರೆ ಅವು ಹೆಚ್ಚು ವಿದ್ಯುತ್ ಉತ್ಪಾದನೆಯನ್ನು ಬಿಡುಗಡೆ ಮಾಡುತ್ತದೆ.
ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿ ಪ್ರಮುಖ ಅಂಗ. ಅದರಲ್ಲಿ ಚಾರ್ಜ್ ಇಲ್ಲವೆಂದಾದರೆ ಸ್ಮಾರ್ಟ್ ಫೋನ್ ಇದ್ದರೂ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ದೊಡ್ಡ ಮಟ್ಟದ ಬ್ಯಾಟರಿ ಇದ್ರೂ ನಿರಂತರವಾಗಿ ವೀಡಿಯೋ ಗೇಮಿಂಗ್ ಅಥವಾ ಹಾಡುಗಳನ್ನು ಕೇಳುತ್ತಿದ್ದರೆ ಬ್ಯಾಟರಿ ಬೇಗನೆ ಖಾಲಿಯಾಗಬಹುದು. ಹೀಗಾಗಿ ಚಾರ್ಜ್ ಬೇಗ ಖಾಲಿಯಾಗದಿರಲು ಪವರ್ ಬ್ಯಾಂಕ್ ಬಳಸುತ್ತಾರೆ.
ಪವರ್ ಬ್ಯಾಂಕ್ ಬಗ್ಗೆ ಅನೇಕರಿಗೆ ಗೊಂದಲಗಳಿರುತ್ತದೆ. ಪವರ್ ಬ್ಯಾಂಕ್ ಬಳಸುವುದರಿಂದ ಮೊಬೈಲ್ ಬ್ಯಾಟರಿ ಬೇಗ ಹಾಳಾಗುತ್ತದೆಯೇ..? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮೊಬೈಲ್ ಚಾರ್ಜ್ ಗೆ ಪವರ್ ಬ್ಯಾಂಕ್ ಬಳಸುವುದು ಉತ್ತಮವೇ..?
ಪವರ್ ಬ್ಯಾಂಕ್ ಮೂಲಕ ಸ್ಮಾರ್ಟ್ ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡುವುದು ಸಂಪೂರ್ಣ ಸೇಫ್. ಇದು ಫೋನ್ ಅಥವಾ ಅದರ ಬ್ಯಾಟರಿಯ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ. ಆದರೆ ಗಮನದಲ್ಲಿಡಬೇಕಾದ ಒಂದು ಪ್ರಮುಖ ಅಂಶವೆಂದರೆ ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ನ್ನು ಬಳಸಬೇಕು. ಅದರ ವಿದ್ಯುತ್ ಉತ್ಪಾದನೆಯು ಮೊಬೈಲ್ ಚಾರ್ಜರ್ ಗೆ ಸಮಾನವಾಗಿರಬೇಕು.
ಅಗ್ಗದ ಪವರ್ ಬ್ಯಾಂಕ್ ಮೊಬೈಲ್ ಹಾನಿಗೊಳಿಸಬಹುದು:
ಹೆಚ್ಚಿನವರು ಕಡಿಮೆ ಬೆಲೆಗೆ ಪವರ್ ಬ್ಯಾಂಕ್ ಸಿಗುತ್ತದೆ ಎಂದು ಅದನ್ನು ಖರೀದಿಸಿ ಮೊಬೈಲ್ ಚಾರ್ಜ್ ಮಾಡುತ್ತಾರೆ. ಆದರೆ ಕಡಿಮೆ ಬೆಲೆಯ ಪವರ್ ಬ್ಯಾಂಕ್ ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿಯನ್ನು ಹಾನಿಗೊಳಿಸಬಹುದು. ಇನ್ನು ಓವರ್ ಚಾರ್ಜ್ ಮಾಡಿದ್ರೆ ಹೆಚ್ಚು ವಿದ್ಯುತ್ ಉತ್ಪಾದನೆಯನ್ನು ಬಿಡುಗಡೆ ಮಾಡುತ್ತದೆ ಇದರಿಂದಲೂ ಮೊಬೈಲ್ ಕೆಟ್ಟು ಹೋಗುವ ಸಂದರ್ಭ ಎದುರಾಗಬಹುದು.
ಉತ್ತಮವಾದ ಅಥವಾ ದುಬಾರಿ ಪವರ್ ಬ್ಯಾಂಕ್ ಗಳು ಕಟ್ ಆಫ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಅದು ಸಂಪೂರ್ಣವಾಗಿ ಚಾರ್ಜ್ ಆದ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುತ್ತದೆ. ಇದು ಬಹಳ ಉಪಯುಕ್ತವಾದ ಫವರ್ ಬ್ಯಾಂಕ್ ಆಗಿದ್ದು ಸ್ಮಾರ್ಟ್ ಫೋನ್ ಬ್ಯಾಟರಿ ಕೂಡಾ ಬಾಳಿಕೆ ಬರುತ್ತದೆ.
ಮಾರುಕಟ್ಟೆಯಲ್ಲಿ ಹೇಗಿದೆ ಪವರ್ ಬ್ಯಾಂಕ್ ಬೆಲೆ?
ನಿಮ್ಮ ಬಜೆಟ್ ನ ಆಧಾರದ ಮೇಲೆ ಫವರ್ ಬ್ಯಾಂಕ್ ಖರೀದಿಸಿ. ನಿಮ್ಮ ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್ ಫೋನನ್ನು ಚಾರ್ಜ್ ಮಾಡಲು ನಿಮಗೆ ಪವರ್ ಬ್ಯಾಂಕ್ ಅಗತ್ಯವಿದ್ದರೆ ಅದಕ್ಕೆ ತಕ್ಕುದಾಗಿ ಪವರ್ ಬ್ಯಾಂಕ್ ಖರೀದಿಸಿ. ಇತ್ತೀಚಿನ ದಿನಗಳಲ್ಲಿ ಎರಡೂ ರೀತಿಯ ಪವರ್ ಬ್ಯಾಂಕ್ ಗಳು ಮಾರುಕಟ್ಟೆಯಲ್ಲಿ ವಿವಿಧ ವೋಲ್ಟೇಜ್ ಗಳಲ್ಲಿ ಲಭ್ಯವಿದೆ. ಉತ್ತಮ ಪವರ್ ಔಟ್ ಪುಟ್ ನೀಡುವ ಪವರ್ ಬ್ಯಾಂಕ್ 2ರಿಂದ 3ಸಾವಿರ ಬಜೆಟ್ ನಲ್ಲಿ ಮಾರುಕಟ್ಟೆಯಲ್ಲಿದೆ.