
ಹೊಟೇಲ್ ಗಳಲ್ಲಿ ದೋಸೆ ಹೆಂಚು ಹೇಗೆ ಸ್ವಚ್ಛ ಮಾಡುತ್ತಾರೆ ಗೊತ್ತೇ? – ಈ ವಿಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ..!!
- ಆರೋಗ್ಯವೇ ಭಾಗ್ಯ
- November 17, 2023
- No Comment
- 125
ನ್ಯೂಸ್ ಆ್ಯರೋ : ಹೊಟೇಲ್ ಗಳಲ್ಲಿ ಹೆಚ್ಚು ಬೇಡಿಕೆ ಇರುವ ಆಹಾರಗಳಲ್ಲಿ ದೋಸೆ ಕೂಡ ಒಂದು. ಆದರೆ ಇದನ್ನು ಹೊಟೇಲ್ ಗಳಲ್ಲಿ ಹೇಗೆ ಮಾಡುತ್ತಾರೆ ಎಂದು ತಿಳಿದರೆ ಕೆಲವರು ಈ ದೋಸೆಯನ್ನೇ ತಿನ್ನಲಾರರು.
ಹೆಚ್ಚು ಸ್ವಚ್ಛ, ರುಚಿಯಾದ ಹಾಗೂ ಆರೋಗ್ಯಕರವಾದ ದೋಸೆಗಳನ್ನು ಹೊಟೇಲ್ ಗಳಲ್ಲಿ ತಿನ್ನುವುದು ಈಗಂತೂ ಸಾಧ್ಯವಿಲ್ಲ. ಯಾಕೆಂದರೆ ಕಳಪೆ ಸಾಮಗ್ರಿಗಳ ಬಳಕೆ ಒಂದು ಕಡೆಯಾದರೆ ಸ್ವಚ್ಛವಿಲ್ಲದ ವಾತಾವರಣ ಇನ್ನೊಂದು ಕಡೆ.
ಇದೀಗ ಬೆಂಗಳೂರು ನಗರದ ಅತ್ಯಂತ ಹೈಟೆಕ್ ದೋಸೆ ಎನ್ನುವ ಹೊಟೇಲ್ ನಲ್ಲಿ ದೋಸೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ರಾಮೇಶ್ವರಂ ಕಫೆಯಲ್ಲಿ ದೋಸೆ ಮಾಡಲು ಹಾಗೂ ದೋಸೆ ಹಂಚನ್ನು ಸ್ವಚ್ಛ ಮಾಡಲು ಪೊರಕೆಯನ್ನು ಬಳಸಿರುವುದು ಹಾಗೂ ದೋಸೆ ಮೇಲೆ ತುಪ್ಪ ಹೊಯ್ಯುವ ಪ್ರಮಾಣದ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ದೋಸೆ ಮಾಡುತ್ತಿರುವ ರೀತಿಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದರಲ್ಲಿ ಬಾಣಸಿಗ, ದೋಸೆ ಹೊಯ್ಯುವ ಮೊದಲು ಬಿಸಿಯಾದ ಹೆಂಚಿಗೆ ನೀರು ಹಾಕಿ ಬಳಿಕ ಪೊರಕೆಯಿಂದ ಸ್ವಚ್ಛ ಮಾಡಿದ್ದಾನೆ. ಆಮೇಲೆ ಒಂದೇ ಸಮಯಕ್ಕೆ ಹಲವಾರು ದೋಸೆಗಳನ್ನು ಹೊಯ್ದು ಎಲ್ಲದರ ನಡುವೆ ಭಾರೀ ಪ್ರಮಾಣದಲ್ಲಿ ತುಪ್ಪ ಸುರಿದಿದ್ದು, ಜೊತೆಗೆ ಆಲೂ ಮಸಾಲಾವನ್ನು ಹಾಕಿದ್ದಾನೆ.
ಇದನ್ನು ನೋಡಿರುವ ನೆಟ್ಟಿಗರು ಮೋಸ್ಟ್ ಹೈಟೆಕ್ ದೋಸೆ ಎಂದು ಲೇಬಲ್ ಮಾಡಿರುವುದು ಯಾಕೆ , ಎಣ್ಣೆಯನ್ನು ಎಲ್ಲಾ ಕಡೆ ಹಾಕುವ ಸಲುವಾಗಿ ಪೊರಕೆಯನ್ನು ಬಳಕೆ ಮಾಡಬೇಡಿ. ಆಯಿಲ್ ಬ್ರಶ್‌ಗಳನ್ನು ಖಂಡಿತವಾಗಿ ಬಳಕೆ ಮಾಡಬಹುದು. ಪೊರಕೆಗಳನ್ನು ಅಡುಗೆ ಉದ್ದೇಶಗಳಿಗಾಗಿ ಬಳಸುವುದು ನೋಡುವುದು ಕೆಟ್ಟದಾಗಿರುತ್ತದೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ತುಪ್ಪದ ಅತಿಯಾದ ಬಳಕೆ ಬಗ್ಗೆ ಕಾಮೆಂಟ್ ಮಾಡಿರುವ ಒಬ್ಬರು ಈ ದೋಸೆಯನ್ನು ಎರಡು ಬಾರಿ ತಿಂದರೆ ಸ್ವರ್ಗ ಕಾಣುವಿರಿ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಹೊಟೇಲ್ ನಲ್ಲಿ ರುಚಿಯಾದ ತಿನಿಸು ಸಿಗಬಹುದು. ಆದರೆ ಆರೋಗ್ಯಕ್ಕೆ ಪೂರಕವಾದ ಆಹಾರ ಸಿಗುವುದು ಸಾಧ್ಯವೇ ಇಲ್ಲ. ನಾವು ಹಣ ಕೊಟ್ಟು ನಮ್ಮ ಆರೋಗ್ಯವನ್ನೇ ಹಾಳು ಮಾಡಿಕೊಂಡಂತಾಗುತ್ತದೆ.