ಡಿ.1ರ ನಂತರ ಹೊಸ ಸಿಮ್ ಖರೀದಿಸೋ ಪ್ಲ್ಯಾನ್ ನಲ್ಲಿದ್ದೀರಾ..? – ಹಾಗಾದ್ರೆ ಈ ಎಲ್ಲಾ ರೂಲ್ಸ್ ಫಾಲೋ ಮಾಡ್ಲೇಬೇಕು…!!

ಡಿ.1ರ ನಂತರ ಹೊಸ ಸಿಮ್ ಖರೀದಿಸೋ ಪ್ಲ್ಯಾನ್ ನಲ್ಲಿದ್ದೀರಾ..? – ಹಾಗಾದ್ರೆ ಈ ಎಲ್ಲಾ ರೂಲ್ಸ್ ಫಾಲೋ ಮಾಡ್ಲೇಬೇಕು…!!

ನ್ಯೂಸ್ ಆ್ಯರೋ : ಇತ್ತೀಚೆಗೆ ಕೇವಲ ನಿಮ್ಮ ಮೊಬೈಲ್ ನಂಬರ್ ವೊಂದಿದ್ದರೆ ಸಾಕು. ಅನೇಕ ವಂಚನೆ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಸೈಬರ್ ವಂಚಕರಂತೂ ಮೊಬೈಲ್ ನಂಬರಿಂದ ಹಿಡಿದು ಪ್ರತಿಯೊಂದು ದತ್ತಾಂಶ ಸಂಗ್ರಹಣೆ ಮಾಡಿ ಹೇಗೆ ಮೋಸ ಮಾಡಿ ಹಣ ಲಪಟಾಯಿಸಬಹುದು ಎಂಬ ಯೋಚನೆಯಲ್ಲೇ ಇರುತ್ತಾರೆ. ಇಂತಹ ಮೋಸದ ಜಾಲವನ್ನು ಭೇಧಿಸುವ ನಿಟ್ಟಿನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾನೂನುಗಳು, ನಿಯಮಗಳು ಜಾರಿಯಾಗುತ್ತಲೇ ಇರುತ್ತದೆ.

ಮೊಬೈಲ್’ ನಂಬರ್ ಬಳಸಿ ಮೋಸ, ವಂಚನೆ ಮಾಡೋದು ಇತ್ತೀಚಿಗೆ ಹೆಚ್ಚಾಗಿದೆ. ಹೀಗಾಗಿ ಇದನ್ನು ತಡೆಯಲು ಹೊಸ ಸಿಮ್ ಕಾರ್ಡ್ ನಿಯಮಗಳನ್ನು ಜಾರಿಗೆ ತರಲು ಟೆಲಿಕಾಂ ಇಲಾಖೆ ಮುಂದಾಗಿದೆ. ಡಿಸೆಂಬರ್ 1ರ ನಂತರ ಹೊಸ ಸಿಮ್ ಖರೀದಿಸುವ ಮೊದಲು ನೀವು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಸಿಮ್ ಕಾರ್ಡ್‌ಗಳ ಮೋಸದ ಮಾರಾಟವನ್ನು ತಡೆಯಲು, ಟೆಲಿಕಾಂ ಇಲಾಖೆ (DoT) ಈ ವರ್ಷದ ಆಗಸ್ಟ್‌ನಲ್ಲಿ ಟೆಲಿಕಾಂ ಆಪರೇಟರ್‌ಗಳಿಗೆ ಹೊಸ ನಿಯಮಗಳನ್ನು ಘೋಷಿಸಿತ್ತು. ಆರಂಭದಲ್ಲಿ ಅಕ್ಟೋಬರ್ 1ರಿಂದ ನಿಯಮಗಳನ್ನು ಜಾರಿಗೆ ಬರಲು ನಿರ್ಧರಿಸಲಾಯಿತು ಆದರೆ ನಿಯಮಗಳ ಜಾರಿಯನ್ನು ಎರಡು ತಿಂಗಳ ಕಾಲ ಮುಂದೂಡಲಾಯಿತು.

ಇದೀಗ, ಹೊಸ ನಿಯಮಗಳು ಡಿಸೆಂಬರ್ 1ರಿಂದ ಅನ್ವಯವಾಗಲಿದ್ದು, ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮೊಬೈಲ್ ಫೋನ್ ಬಳಕೆದಾರರು ಈ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಹೊಸ ಸಿಮ್ ಕಾರ್ಡ್ ನಿಯಮಗಳು, ಮೊಬೈಲ್‌ ನಂಬರ್‌ನ್ನು ಬಳಸಿ ನಡೆಯುವ ವಂಚಕ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಹೊಸ ಕ್ರಮವಾಗಿದೆ.

ಹೊಸ ಸಿಮ್ ಕಾರ್ಡ್ ನಿಯಮಗಳ ಪ್ರಕಾರ, ಡಿಸೆಂಬರ್ 1ರ ನಂತರ ಹೊಸ ಸಿಮ್ ಖರೀದಿಸುವ ಮೊದಲು ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

  1. ವ್ಯಕ್ತಿಗಳು ವ್ಯಾಪಾರ ಸಂಪರ್ಕದ ಮೂಲಕ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿಸಲಾಗುತ್ತದೆ. ಸಾಮಾನ್ಯ ಬಳಕೆದಾರರು ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದು.
  2. SIM ಕಾರ್ಡ್‌ನ ಬಳಕೆಯನ್ನು ನಿಲ್ಲಿಸಿದ ನಂತರ, 90 ದಿನಗಳ ಅವಧಿಯ ನಂತರ ಮಾತ್ರವಷ್ಟೇ ಸಂಖ್ಯೆಯು ಇನ್ನೊಬ್ಬ ವ್ಯಕ್ತಿಗೆ ಅನ್ವಯಿಸುತ್ತದೆ.
  3. ಅಸ್ತಿತ್ವದಲ್ಲಿರುವ ಫೋನ್ ಸಂಖ್ಯೆಗಳಿಗೆ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ ಮತ್ತು ಡೇಟ್‌ ಆಫ್‌ ಬರ್ತ್‌ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.
  4. ನೋಂದಾಯಿಸದ ಡೀಲರ್‌ಗಳ ಮೂಲಕ ಸಿಮ್ ಕಾರ್ಡ್‌ಗಳ ಮಾರಾಟವು ಹೊಸ ನಿಯಮಗಳ ಪ್ರಕಾರ ಟೆಲಿಕಾಂ ಆಪರೇಟರ್‌ಗಳ ಮೇಲೆ ರೂ 10 ಲಕ್ಷ ದಂಡಕ್ಕೆ ಕಾರಣವಾಗುತ್ತದೆ. ನೋಂದಾಯಿತವಲ್ಲದ ರೀತಿಯಲ್ಲಿ ಸಕ್ರಿಯಗೊಳಿಸಲಾದ ಎಲ್ಲಾ ಮೊಬೈಲ್ ಸಂಪರ್ಕಗಳನ್ನು ಸುತ್ತೋಲೆಯ ಪ್ರಕಾರ ಅಸ್ತಿತ್ವದಲ್ಲಿರುವ ಸೂಚನೆಗಳ ಪ್ರಕಾರ ಮರು-ಪರಿಶೀಲಿಸಬೇಕಾಗುತ್ತದೆ.
  5. ಅಸ್ತಿತ್ವದಲ್ಲಿರುವ ಎಲ್ಲಾ ಪಿಒಎಸ್‌ಗಳು ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಚಿಲ್ಲರೆ ವ್ಯಾಪಾರಿಯು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಗುರುತಿನ ಸಂಖ್ಯೆ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಅಥವಾ ಪಾಸ್‌ಪೋರ್ಟ್, PAN, ಸರಕು ಮತ್ತು ಸೇವಾ ತೆರಿಗೆ ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.
  6. PoS (ಪಾಯಿಂಟ್‌ ಆಫ್‌ ಸೇಲ್‌)ನಲ್ಲಿ , ಇನ್ಕಾರ್ಪೊರೇಶನ್ ಪ್ರಮಾಣಪತ್ರ, PAN ಮತ್ತು GST ಪ್ರಮಾಣಪತ್ರವಿಲ್ಲದಿದ್ದರೆ, ಅದು ಅಫಿಡವಿಟ್ ಮತ್ತು ಈ ದಾಖಲೆಗಳನ್ನು ಲಭ್ಯವಾದ ತಕ್ಷಣ ಸಲ್ಲಿಸಬೇಕಾಗುತ್ತದೆ. ಒಂದು PoS ನಕಲಿ ದಾಖಲೆಗಳನ್ನು ಸಲ್ಲಿಸಿದರೆ, ಟೆಲಿಕಾಂ ಆಪರೇಟರ್‌ಗಳು ಅದರ ID ಅನ್ನು ನಿರ್ಬಂಧಿಸಬೇಕಾಗುತ್ತದೆ. PoSನಿಂದ ನೋಂದಾಯಿಸಲ್ಪಟ್ಟ ಎಲ್ಲಾ ಗ್ರಾಹಕರನ್ನು ಮರು-ಪರಿಶೀಲಿಸಬೇಕಾಗುತ್ತದೆ.

ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಬಹುಶಃ ನಾವು ಸೈಬರ್ ಕ್ರೈಮ್ ನಂತಹ ವಂಚನೆಗೆ ಬಲಿಯಾಗುವ ಪ್ರಮೇಯ ಕಡಿಮೆಯಾಗಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *