ಏರ್‌ಟೆಲ್‌ ಗ್ರಾಹಕರಿಗೆ ಗುಡ್‌ನ್ಯೂಸ್: ಎರಡು ಹೊಸ ಪ್ಲ್ಯಾನ್‌ನಲ್ಲಿದೆ ಭರ್ಜರಿ 5ಜಿ ಡೇಟಾ

ಏರ್‌ಟೆಲ್‌ ಗ್ರಾಹಕರಿಗೆ ಗುಡ್‌ನ್ಯೂಸ್: ಎರಡು ಹೊಸ ಪ್ಲ್ಯಾನ್‌ನಲ್ಲಿದೆ ಭರ್ಜರಿ 5ಜಿ ಡೇಟಾ

ನ್ಯೂಸ್ ಆ್ಯರೋ : ಟೆಲಿಕಾಂ ಲೋಕದಲ್ಲಿ ಸ್ಪರ್ಧೆ ಜಾಸ್ತಿಯಾಗುತ್ತಿರುವ ಹಿನ್ನೆಲೆ ಕಂಪೆನಿಗಳು ಅನೇಕ ಅಗ್ಗದ ಯೋಜನೆಗಳನ್ನು ಜನರಿಗೆ ಪರಿಚಯಿಸುತ್ತಿದೆ. ಅನೇಕ ಟೆಲಿಕಾಂ ಕಂಪೆನಿಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಏರ್‌ಟೆಲ್‌ ಇದೀಗ ಎರಡು ಹೊಸ ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದೆ.

ಈ ಯೋಜನೆಗಳ ಬೆಲೆ ₹489 ಮತ್ತು ₹509. ಈ ಯೋಜನೆಯ ವಿಶೇಷತೆ ಎಂದರೆ ಇದರಿಂದ ಗ್ರಾಹಕರಿಗೆ ಉತ್ತಮ ಡೇಟಾ ಸಿಗಲಿದೆ. ಪ್ರಸ್ತುತ ಮೊಬೈಲ್ ಬಳಕೆ ಜಾಸ್ತಿಯಾಗಿರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಈ ಡೇಟಾವನ್ನು ಏರ್‌ಟೆಲ್ ಬಿಡುಗಡೆ ಮಾಡಿದೆ.

ಈ ಯೋಜನೆಯ ಮೂಲಕ ಗ್ರಾಹಕರಿಗೆ 5ಜಿ ಸೇವೆಯ ಸೌಲಭ್ಯವು ಸಿಗಲಿದೆ. ನಿಮ್ಮ ಪ್ರದೇಶದಲ್ಲಿ ಏರ್‌ಟೆಲ್‌ನ 5ಜಿ ಸೇವೆಯು ಲಭ್ಯವಿದ್ದರೆ, ನೀವು ಈ ರೀಚಾರ್ಜ್​ನ ಲಾಭವನ್ನು ಸುಲಭದಲ್ಲಿ ಪಡೆಯಬಹುದು.

₹489ರ ಯೋಜನೆಯಲ್ಲಿ ಏನೆಲ್ಲ ವಿಶೇಷತೆಯಿದೆ: ₹489 ಯೋಜನೆಯನ್ನು ಪಡೆಯುವ ಗ್ರಾಹಕರಿಗೆ ಒಂದು ತಿಂಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಇನ್ನು ಈ ಯೋಜನೆಯಲ್ಲಿ ಅನಿಯಮಿತ ಕಾಲ್ ಸೌಲಭ್ಯ, ಎಸ್​​ಟಿಡಿ ಮತ್ತು ರೋಮಿಂಗ್​ ಕಾಲ್​ ಮಾಡುವ ಸೌಲಭ್ಯ ದೊರೆಯಲಿದೆ. 50ಜಿಬಿ ಡೇಟಾವನ್ನು ಪಡೆಯಬಹುದಾಗಿದ್ದು, ಈ ಡೇಟಾವನ್ನು ದೈನಂದಿನ ಮಿತಿಯಿಲ್ಲದೆ ಬಳಸಬಹುದು. ಅಲ್ಲದೆ. ಗ್ರಾಹಕರು ಈ ಯೋಜನೆಯಲ್ಲಿ 300 ಎಸ್​​ಎಮ್​ಎಸ್​ ಅನ್ನು ಉಚಿತವಾಗಿ ಪಡೆಯುತ್ತಾರೆ.

ಅದಲ್ಲದೆ ಹೆಚ್ಚುವರಿ ಪ್ರಯೋಜನವಾಗಿ, ಗ್ರಾಹಕರಿಗೆ ಹೆಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್, ಅಪೊಲೊ 24×7ನ ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ.

ಏರ್‌ಟೆಲ್ ₹509 ಯೋಜನೆ ವಿಶೇಷತೆಯೇನು: ಏರ್‌ಟೆಲ್‌ನ ₹509 ರೀಚಾರ್ಜ್ ಯೋಜನೆಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಬಳಕೆದಾರರಿಗೆ 30 ದಿನಗಳ ಮಾನ್ಯತೆಯನ್ನು ನೀಡಲಾಗುತ್ತದೆ. ಅಂದರೆ ₹489 ಪ್ಲಾನ್‌ನಂತೆ ಗ್ರಾಹಕರು ಒಂದು ತಿಂಗಳ ವ್ಯಾಲಿಡಿಟಿಯನ್ನು ಇದರಲ್ಲಿ ಪಡೆಯುತ್ತಾರೆ.

ಈ ಯೋಜನೆಯಲ್ಲಿ ಅನಿಯಮಿತ ಸ್ಥಳೀಯ ಕರೆಗಳು, ಎಸ್​​ಟಿಡಿ ಮತ್ತು ರೋಮಿಂಗ್ ಕರೆಗಳನ್ನು ನೀಡಲಾಗುತ್ತದೆ. ಇನ್ನು ಈ ಯೋಜನೆ ಮೂಲಕ ಗ್ರಾಹಕರು ವಿಶೇಷವಾಗಿ 60ಜಿಬಿ ಡೇಟಾವನ್ನು ಪಡೆಯುತ್ತಾರೆ. ಈ ಡೇಟಾವನ್ನು ಯಾವುದೇ ದೈನಂದಿನ ಡೇಟಾ ಮಿತಿಯಿಲ್ಲದೆಯೂ ಬಳಸಬಹುದು. ಇದರೊಂದಿಗೆ 300 ಎಸ್‌ಎಂಎಸ್ ಉಚಿತವಾಗಿ ನೀಡಿದ್ದಾರೆ.

ಹೆಚ್ಚುವರಿ ಪ್ರಯೋಜನಗಳಾಗಿ, ಗ್ರಾಹಕರು ಹೆಲೋ ಟ್ಯೂನ್ಸ್​, ವಿಂಕ್ ಮ್ಯೂಸಿಕ್​ ಅಪ್ಲಿಕೇಶನ್‌ಗಳು ಮತ್ತು ಅಪೋಲೋ 24×7 ಅಪ್ಲಿಕೇಶನ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *