ಬೆಂಗಳೂರಿನ ನಡುರಸ್ತೆಯಲ್ಲಿ ಪತ್ತೆಯಾಯ್ತು ವಿಶಿಷ್ಟ ವೆಹಿಕಲ್ – ಇದು ಕಾರೋ ಬೈಕೋ ಸೈಕಲೋ? ನಿಬ್ಬೆರಗಾದ ದಾರಿಹೋಕರು..!!

ಬೆಂಗಳೂರಿನ ನಡುರಸ್ತೆಯಲ್ಲಿ ಪತ್ತೆಯಾಯ್ತು ವಿಶಿಷ್ಟ ವೆಹಿಕಲ್ – ಇದು ಕಾರೋ ಬೈಕೋ ಸೈಕಲೋ? ನಿಬ್ಬೆರಗಾದ ದಾರಿಹೋಕರು..!!

ನ್ಯೂಸ್ ಆ್ಯರೋ‌ : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಶಿಷ್ಟ ರೀತಿಯ ವೆಹಿಕಲ್ ಒಂದು ಕಾಣಿಸಿಕೊಂಡಿದ್ದು,ಈಸ್ಟ್ ಎಂಡ್ ಸರ್ಕಲ್‌ನಲ್ಲಿ ಪ್ರತ್ಯಕ್ಷವಾದ ಆ ವಾಹನವನ್ನು ನೋಡಿ ಜನರು ಚಕಿತಗೊಂಡಿದ್ದಾರೆ. ಜನರು ನಿಂತಲ್ಲೇ ನಿಂತು ನಿಬ್ಬೆರಗಾಗಿ ಆ ವಾಹನವನ್ನು ನೋಡಿದ್ದು, ಆ ವಾಹನದ ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡಿ ಎಲ್ಲರ ಗಮನ ಸೆಳೆದಿದೆ.

ಅಲ್ಲದೇ ಈ ವಾಹನವನ್ನು ನೋಡಿ ಕೆಲವರು ಆಶ್ಚರ್ಯಕ್ಕೆ ಒಳಗಾಗಿದ್ದು, ಹಲವಾರು ಮಂದಿ ಇದನ್ನು ಆಟಿಕೆ ರೇಸ್ ಕಾರು ಎಂದುಕೊಂಡರೆ, ಮತ್ತೆ ಕೆಲವರು ಇದರಲ್ಲಿ ರಸ್ತೆ ಮೇಲೆ ಸಂಚರಿಸುವುದು ಸುರಕ್ಷಿತವೇ? ಎಲ್ಲಿ ಪಾರ್ಕ್ ಮಾಡುವುದು? ಕಾರು ಅಥವಾ ಸೈಕಲ್ ಲೇನ್‌ನಲ್ಲೋ ಎಂಬ ಪ್ರಶ್ನೆ ಕಾಡಿದೆ.

ಯೂರೋಪ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ವೆಹಿಕಲ್ ಅನ್ನು ‘ವೆಲೊಮೊಬೈಲ್’ (ಸೈಕಲ್ ರೀತಿಯಲ್ಲೇ ತುಳಿಯುವ ಸೈಕಲ್ ಕಾರು) ಎನ್ನಲಾಗಿದ್ದು, 3 ಚಕ್ರದ ಈ ಸೈಕಲ್ ಭಾರತದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಂಡಿದೆ. ಇದೊಂದು ಪೆಡಲ್ ಟ್ರೈಸಿಕಲ್ ಆಗಿದ್ದು, ಮಳೆ, ಬಿಸಿಲು ಮತ್ತು ಧೂಳಿನಿಂದ ರಕ್ಷಣೆ ಒದಗಿಸಲು ಹೊರ ಕವಚವಿದೆ. ಬ್ಯಾಗೇಜ್ ಸ್ಥಳವೂ ಇದರಲ್ಲಿ ಇರಲಿದ್ದು, ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಗೋಕಾರ್ಟ್ ರೀತಿಯ ವಿನ್ಯಾಸ ಇರುವ ವೆಲೊಮೊಬೈಲ್ ನ ಹಿಂಬದಿ ಕುಳಿತು ಕೊಳ್ಳುವ ವ್ಯಕ್ತಿ ಪೆಡಲ್ ಮಾಡಿದರೆ ಸೈಕಲ್ ಚಲಿಸಲಿದೆ.

ದಾರಿಹೋಕರ ಆಕರ್ಷಣೆಗೆ ಕಾರಣವಾಗಿರುವ ಈ ನೀಲಿ ಮತ್ತು ಬಿಳಿ ಬಣ್ಣದ ‘ವೆಲೊಮೊಬೈಲ್’, ವಿಶಿಷ್ಟ ಸೈಕಲ್‌ಗಳ ಸಂಗ್ರಹಕಾರ, ಸೈಕ್ಲಿಸ್ಟ್ 41 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಫಣೀಶ್ ನಾಗರಾಜ ಅವರದ್ದು. ಇದು ರೊಮೇನಿಯಾ ಕಂಪನಿಯೊಂದರ ಕಸ್ಟಮ್ ಮೇಡ್ ಸೈಕಲ್ ಆಗಿದ್ದು, ಬೆಂಗಳೂರಿನ ಸೈಕಲ್ ಶೋರೂಮ್ Cadence90 ಎಕ್ಸ್‌ಕ್ಲೂಸಿವ್ ಡೀಲರ್ ಮೂಲಕ ‘ಆಲ್ಫಾ–7’ಮಾದರಿಯ ಈ ವೆಲೊಮೊಬೈಲ್ ಅನ್ನು ನಾಗರಾಜ ಅವರಿಗೆ ತರಿಸಿಕೊಟ್ಟಿದೆ.

ಈ ವಿಶಿಷ್ಟ ಸೈಕಲ್ ಬೆಲೆ ತೆರಿಗೆ ಸೇರಿ 18ರೂ. ಲಕ್ಷವಾಗಿದ್ದು, ಜೆ.ಪಿ. ನಗರದ ನಿವಾಸಿಯಾಗಿರುವ ಫಣೀಶ್, ಮನೆಗೆ ದಿನಸಿ ಪದಾರ್ಥಗಳನ್ನು ತರಲು ಅಥವಾ ವೀಕೆಂಡ್ ಲಾಂಗ್ ರೈಡ್‌ಗೆ ತಮ್ಮ ಸೈಕಲ್ ಬದಲಿಗೆ ಇದನ್ನು ಪರ್ಯಾಯವಾಗಿ ಬಳಸುತ್ತಿದ್ದಾರೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *