
ಹುಲಿ ಉಗುರಿನ ಮೇಲೆ ಅದ್ಯಾಕೆ ಸೆಲೆಬ್ರಿಟಿಗಳಿಗೆ ಇಷ್ಟು ಪ್ರೀತಿ? – ಪುರಾಣದಲ್ಲೂ ಹುಲಿ ಉಗುರಿಗೆ ಪ್ರಾಮುಖ್ಯತೆ ಇದ್ದಿದ್ದೇಕೆ?
- ಕರ್ನಾಟಕಕೌತುಕ-ವಿಜ್ಞಾನಟಾಪ್ ನ್ಯೂಸ್
- October 30, 2023
- No Comment
- 111
ನ್ಯೂಸ್ ಆ್ಯರೋ : ಹುಲಿ ಉಗುರು ಈಗ ಹೆಚ್ಚು ಚರ್ಚೆಯಲ್ಲಿದೆ. ಯಾರಲ್ಲಿ ಹುಲಿ ಉಗುರಿನ ಆಭರಣಗಳು ಇವೆಯೋ ಅವರೆಲ್ಲರ ಮೇಲೆ ಅರಣ್ಯಾಧಿಕಾರಿಗಳು ಕಣ್ಣಿಟ್ಟು ಕ್ರಮಕ್ಕೆ ಮುಂದಾಗುತ್ತಿದ್ದಾರೆ.
ಜನಪ್ರಿಯ ರಿಯಾಲಿಟಿ ಶೋ ಬಿಗ್‍ಬಾಸ್ ಮನೆಯಿಂದಲೇ ವರ್ತೂರ್ ಸಂತೋಷ್ ಬಂಧನವಾಗುತ್ತಿದ್ದಂತೆ ಹುಲಿ ಉಗುರು ಚರ್ಚೆ ಜೋರಾಗಿ ನಡೆಯುತ್ತಿದೆ.
ರಾಜಕಾರಣಿಗಳು, ಸೆಲೆಬ್ರಿಟಿಗಳು, ಸ್ವಾಮೀಜಿಗಳಿಗೆ ಕಂಟಕವಾಗಿ ಕಾಡುತ್ತಿರುವ ಹುಲಿ ಉಗುರಿನ ಬಗ್ಗೆ ಜನರಲ್ಲಿ ಇಷ್ಟೊಂದು ಕ್ರೇಜ್ ಯಾಕೆ ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಇದನ್ನು ಧರಿಸುವುದರಿಂದ ಏನಾದರೂ ಲಾಭವಿದೆಯೇ ಎನ್ನುವ ಚರ್ಚೆಯೂ ಜೋರಾಗಿ ನಡೆಯುತ್ತಿದೆ.
ಇತಿಹಾಸ, ಪುರಾಣದ ಕತೆಗಳಲ್ಲಿ ರಾಜಾ ಮಹಾರಾಜರು ಹುಲಿ ಉಗುರು ಧರಿಸುತ್ತಿದ್ದರು. ಆಗಿನ ಕಾಲದಲ್ಲಿ ವನ್ಯಜೀವಿ ಕಾಯ್ದೆ ಇರಲಿಲ್ಲ. ರಾಜರು ಪ್ರಾಣಿಗಳನ್ನು ಬೇಟೆಯಾಡುವುದು ತಮ್ಮ ಗೌರವದ ಪ್ರತೀಕ ಎಂದೇ ಭಾವಿಸುತ್ತಿದ್ದರು. ಹೀಗಾಗಿ ಅವರು ತಮ್ಮ ಪೂರ್ವಜರಿಂದ ಬಂದ, ತಾವೇ ಭೇಟೆಯಾಡಿದ ಪ್ರಾಣಿಗಳ ಕೋಡು, ಉಗುರು, ದಂತವನ್ನು ತಮ್ಮ ಆಭರಣಗಳಲ್ಲಿ ಬಳಸುತ್ತಿದ್ದದ್ದು ಸಾಮಾನ್ಯ.
ಇನ್ನು ಋಷಿ ಮುನಿಗಳು ಹುಲಿ ಚರ್ಮವನ್ನು ನೆಲದ ಮೇಲೆ ಹಾಸಿ ಅದರ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದರು. ಇದಕ್ಕೆ ಕಾರಣವೂ ಇದೆ. ಧ್ಯಾನ ಮಾಡುವಾಗ ಇದು ಬೆನ್ನುಹುರಿಯ ಉದ್ದಕ್ಕೂ ಶಾಖವನ್ನು ಹೆಚ್ಚಿಸುತ್ತದೆ. ಅಲ್ಲದೇ ಇತರ ಪ್ರಾಣಿಗಳನ್ನು ದೂರವಿರಿಸಲು ಇದು ಸಹಾಯ ಮಾಡುತ್ತದೆ.
ಹುಲಿ ಉಗುರನ್ನು ಪದಕವನ್ನು ಹೃದಯಕ್ಕೆ ಹತ್ತಿರವಾಗಿ ಧರಿಸುವುದು ಅದೃಷ್ಟ ತರುತ್ತದೆ, ನಕಾರಾತ್ಮಕ ಶಕ್ತಿಗಲಿಂದ ರಕ್ಷಣೆ ನೀಡುತ್ತದೆ, ಕಷ್ಟ ಕಾಲದಲ್ಲಿ ಧೈರ್ಯ- ಶಕ್ತಿ ತುಂಬುತ್ತದೆ, ರೋಗ ಅಥವಾ ಅನಾರೋಗ್ಯದಿಂದ ದೂರವಿರಲು ಸಹಾಯ ಮಾಡುತ್ತದೆ ಎನ್ನುವ ನಂಬಿಕೆಯೂ ಇದೆ. ಹೀಗಾಗಿ ಹುಲಿ ಉಗುರಿನ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ.