ಹತ್ತು ವರ್ಷಗಳ ಬಳಿಕ ತೆರೆದ ಮೈಸೂರು ಅರಮನೆಯ ಖಜಾನೆ – ಅಮೂಲ್ಯ 369 ವಸ್ತುಗಳು ಪತ್ತೆ

ಹತ್ತು ವರ್ಷಗಳ ಬಳಿಕ ತೆರೆದ ಮೈಸೂರು ಅರಮನೆಯ ಖಜಾನೆ – ಅಮೂಲ್ಯ 369 ವಸ್ತುಗಳು ಪತ್ತೆ

ನ್ಯೂಸ್ ಆ್ಯರೋ‌ : ವಿಶ್ವ ಪ್ರಸಿದ್ಧ ಮೈಸೂರು ಅರಮನೆಗೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಪರಿಶೀಲನೆ ನಡೆಸಿದರು. ಅವರ ಸಮ್ಮುಖದಲ್ಲಿ ಸುಮಾರು ಹತ್ತು ವರ್ಷಗಳ ಬಳಿಕ ಅರಮನೆಯ ಖಜಾನೆ ತೆರಯಲಾಗಿದ್ದು, ಅಪರೂಪದ, ಬೆಲೆ ಬಾಳುವ ವಸ್ತುಗಳು ಕಂಡು ಬಂದಿವೆ.

ಪಾರಂಪರಿಕ ಪ್ರವಾಸೋದ್ಯಮ

ಪಾರಂಪರಿಕ ಪ್ರವಾಸೊದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸಚಿವರಿಗೆ ಸಲಹೆ ನೀಡಲಾಗಿತ್ತು. ಅದರ ಭಾಗವಾಗಿ ಅವರು ಅರಮನೆಗೆ ಭೇಟಿ ನೀಡಿದ್ದರು. ಖಜಾನೆಯಲ್ಲಿ 369 ಅಪರೂಪದ ವಸ್ತುಗಳಿವೆ. ಇದು ತಾಮ್ರಪತ್ರ, ನಟರಾಜ ವಿಗ್ರಹ, ನಾಣ್ಯ ಇತ್ಯಾದಿಗಳನ್ನು ಒಳಗೊಂಡಿದೆ. ಇದನ್ನೆಲ್ಲ ನೋಡುವ ಅವಕಾಶ ಸಾರ್ವಜನಿಕರಿಗೆ ಸಿಗಬೇಕು ಎಂದು ಪಾಟೀಲ್ ಹೇಳಿದರು.

ವಸ್ತು ಪ್ರದರ್ಶನಕ್ಕೆ ವ್ಯವಸ್ಥೆ

ಜಿಲ್ಲಾಧಿಕಾರಿ ಹಳೆ ಕಚೇರಿ ಕಟ್ಟಡವು ಪಾರಂಪರಿಕ ಕಟ್ಟಡವಾಗಿದ್ದು, ಅದನ್ನು ವಸ್ತು ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುವುದು ಮತ್ತು ಅದರ ರಕ್ಷಣೆ, ನಿರ್ವಹಣೆ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಖಜಾನೆಯಲ್ಲಿ ಕಂಡುಬಂದ ಕೆಲವು ನಾಣ್ಯಗಳು ಅಕ್ಕಿಕಾಳಿನ ಗಾತ್ರದಲ್ಲಿದ್ದರೆ ಕೆಲವು ಅವರೆ ಕಾಳಿನ ಗಾತ್ರದಲ್ಲಿದ್ದವು. ಶತಮಾನಗಳ ಹಿಂದೆ ಬಳಕೆಯಲ್ಲಿದ್ದ ಚಿನ್ನದ ನಾಣ್ಯಗಳೂ ಇಲ್ಲಿವೆ. ಶಾತವಾಹನರು, ರೋಮನ್ನರು, ವಿಜಯ ನಗರ ಸಾಮ್ರಾಜ್ಯ, ಮೈಸೂರು ಅರಸರ ಕಾಲದ ನಾಣ್ಯಗಳೂ ಇಲ್ಲಿವೆ. ಹಲವು ವರ್ಷಗಳ ಹಿಂದೆ ಉತ್ಖನನ ಮಾಡಲಾಗಿದ್ದ ಇವನ್ನು ಖಜಾನೆಯಲ್ಲಿ ಸಂಗ್ರಹಿಸಿಡಲಾಗಿದೆ.

ಬಹು ದೊಡ್ಡ ತಾಮ್ರ ಪತ್ರವೂ ಪತ್ತೆಯಾಗಿದ್ದು, ಅದರಲ್ಲಿ ಸಾಕಷ್ಟು ಲಿಪಿಗಳಿವೆ. ಇದು ಶತಮಾನಗಳ ಇತಿಹಾಸ ಹೊಂದಿದೆ. ಆಡಳಿತಗಾರರು ಆದೇಶಗಳನ್ನು ಬರೆಯಲು ಇದನ್ನು ಬಳಸುತ್ತಿದ್ದರು ಎನ್ನುತ್ತದೆ ಇತಿಹಾಸ.

ಏನಿದು ಖಜಾನೆ?

ಕರ್ನಾಟಕದಲ್ಲಿ ಪಾರಂಪರಿಕ, ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆ ಕೇಂದ್ರ ಸ್ಥಾನ ಮೈಸೂರಿನಲ್ಲಿದೆ. ದಶಕಗಳಿಂದ ಪಾರಂಪರಿಕ, ಪುರಾತತ್ವ ಇಲಾಖೆಗೆ ಸಂಬಂಧಿಸಿದ ತಾಣಗಳು, ವಸ್ತು ಸಂಗ್ರಹಾಲಯ, ಕಟ್ಟಡಗಳು, ವಸ್ತುಗಳ ನಿರ್ವಹಣೆ ಮಾಡಲಾಗುತ್ತಿದೆ. ಈ ಇಲಾಖೆ ಸುಪರ್ದಿಯಲ್ಲಿ ಹಲವು ಪಾರಂಪರಿಕ ಮಹತ್ವದ ವಸ್ತುಗಳಿದ್ದು, ಇವುಗಳನ್ನು ಮೈಸೂರು ಅರಮನೆಯ ಆವರಣದ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ರಾಜ್ಯದ ಏಕೈಕ ಪುರಾತನ ವಸ್ತುಗಳ ಟ್ರಜರಿ ಇದಾಗಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *