ಇಂದು ಮಹಿಳಾ ಪ್ರೀಮಿಯರ್ ಲೀಗ್ ಹರಾಜು – ವೀಕ್ಷಣೆಗೆ ನೇರಪ್ರಸಾರ ಅವಕಾಶ, ಯಾವುದರಲ್ಲಿದೆ ಲೈವ್?

ಇಂದು ಮಹಿಳಾ ಪ್ರೀಮಿಯರ್ ಲೀಗ್ ಹರಾಜು – ವೀಕ್ಷಣೆಗೆ ನೇರಪ್ರಸಾರ ಅವಕಾಶ, ಯಾವುದರಲ್ಲಿದೆ ಲೈವ್?

ನ್ಯೂಸ್‌ ಆ್ಯರೋ : ಬಹುನಿರೀಕ್ಷಿತ ಐಪಿಎಲ್ ಮಹಿಳಾ ಪ್ರೀಮಿಯರ್ ಲೀಗ್​ ಮಾರ್ಚ್‌ 4ರಿಂದ ಆರಂಭಗೊಳ್ಳಲಿದ್ದು, ಅದರ ಹರಾಜು ಪ್ರಕ್ರಿಯೆ ಇಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ನಲ್ಲಿ ನಡೆಯಲಿದೆ.

ಮಹಿಳಾ ಐಪಿಎಲ್​ಗಾಗಿ ಈಗಾಗಲೇ ಐದು ತಂಡಗಳು ಫ್ರಾಂಚೈಸಿ ಹಕ್ಕು ಪಡೆದುಕೊಂಡಿದ್ದು, ನೂರಾರು ಮಹಿಳಾ ಕ್ರಿಕೆಟಿಗರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹರಾಜು ಪ್ರಕ್ರಿಯೆಯ ಸಂ‍ಪೂರ್ಣ ಮಾಹಿತಿ ಇಲ್ಲಿದೆ.

ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಇಂದು ಮಧ್ಯಾಹ್ನ 2:30 ರಿಂದ ಪ್ರಾರಂಭವಾಗುತ್ತದೆ. ಟೂರ್ನಿಯ ಮೊದಲ ಸೀಸನ್‌ನಲ್ಲಿ ಒಟ್ಟು 5 ತಂಡಗಳಿದ್ದು, ಗುಜರಾತ್ ಜೈಂಟ್ಸ್ (ಅದಾನಿ ಸ್ಪೋರ್ಟ್ಸ್‌ಲೈನ್), ಮುಂಬೈ ಇಂಡಿಯನ್ಸ್ (ಇಂಡಿಯಾವಿನ್ ಸ್ಪೋರ್ಟ್ಸ್ ರಿಲಯನ್ಸ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ ಸ್ಪೋರ್ಟ್ಸ್), ಡೆಲ್ಲಿ ಕ್ಯಾಪಿಟಲ್ಸ್ (ಜಿಎಂಆರ್-ಜೆಎಸ್‌ಡಬ್ಲ್ಯೂ) ಮತ್ತು ಲಕ್ನೋದ ಯುಪಿ ವಾರಿಯರ್ಸ್ (ಕ್ಯಾಪ್ರಿ ಗ್ಲೋಬಲ್) ಆಗಿದೆ.

ಈ ಬಾರಿಯ ಹರಾಜಿನಲ್ಲಿ ಒಟ್ಟು 1525 ಆಟಗಾರ್ತಿಯರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಬಿಸಿಸಿಐ 409 ಆಟಗಾರ್ತಿಯರನ್ನು ಆಯ್ಕೆ ಮಾಡಿದೆ. ಈ 409 ಪ್ಲೇಯರ್ಸ್ ಪೈಕಿ 246 ಭಾರತೀಯರು, 163 ವಿದೇಶಿಯರು ಇದ್ದಾರೆ. ಈ ವಿದೇಶಿಯರಲ್ಲಿ 8 ಆಟಗಾರ್ತಿಯರು ಸಹ ಸದಸ್ಯ ರಾಷ್ಟ್ರಗಳಿಂದ ಬಂದವರು.

ಡಬ್ಲ್ಯುಪಿಎಲ್‌ ನಿಯಮದ ಪ್ರಕಾರ, ಒಂದು ತಂಡದಲ್ಲಿ ಗರಿಷ್ಠ 18 ಆಟಗಾರ್ತಿಯರು ಇರಬಹುದು. ಈ ರೀತಿಯಾಗಿ, ಐದು ಫ್ರಾಂಚೈಸಿಗಳು ಒಟ್ಟಾಗಿ 90 ಆಟಗಾರ್ತಿಯರನ್ನು ಮಾತ್ರ ಖರೀದಿಸಬಹುದಾಗಿದೆ. ಇದರಲ್ಲಿ ಒಟ್ಟು 30 ಆಟಗಾರ್ತಿಯರು ವಿದೇಶಿಯರಾಗಿರಲಿದ್ದು, ಈ ವಿದೇಶಿಯರಲ್ಲಿಯೂ ಸಹ, ಪ್ರತಿ ತಂಡವು ಕನಿಷ್ಠ ಒಬ್ಬ ಸಹಾಯಕ ಸದಸ್ಯರನ್ನಾದರೂ ಖರೀದಿಸಬೇಕಾಗುತ್ತದೆ.

ಇನ್ನು ಪ್ರತಿ ಫ್ರಾಂಚೈಸಿಯೂ 12 ಕೋಟಿ ರೂ. ಗಳ ಹರಾಜು ಪರ್ಸ್ ಹೊಂದಿದೆ. ಅಂದರೆ ಒಟ್ಟು 18 ಆಟಗಾರ್ತಿಯರನ್ನು ಖರೀದಿಸಲು ಪ್ರತಿ ಫ್ರಾಂಚೈಸಿಗೆ 12 ಕೋಟಿ ರೂ. ನೀಡಲಾಗುತ್ತದೆ. ಮೂಲ ಬೆಲೆಗೆ ಸಂಬಂಧಿಸಿದಂತೆ, ಹರಾಜಿನಲ್ಲಿ ಆಟಗಾರ್ತಿಯ ಅತ್ಯಧಿಕ ಮೂಲ ಬೆಲೆ 50 ಲಕ್ಷ ರೂ. ಆಗಿದೆ. ಇದರಲ್ಲಿ ಸ್ಮೃತಿ ಮಂದಾನ, ಹರ್ಮನ್​ಪ್ರೀತ್ ಕೌರ್ ಸೇರಿದಂತೆ ಇತರೆ 8 ಭಾರತೀಯ ಆಟಗಾರರಿದ್ದಾರೆ. ಒಟ್ಟು 24 ಆಟಗಾರರಿದ್ದಾರೆ.

ಅಂತೆಯೇ 40 ಲಕ್ಷ, 20 ಲಕ್ಷ ಮತ್ತು 10 ಲಕ್ಷ ಮೂಲ ಬೆಲೆಯಲ್ಲಿಯೂ ಆಟಗಾರ್ತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಹರಾಜು ಪ್ರಕ್ರಿಯೆಯನ್ನು ನೆಟ್‌ವರ್ಕ್ 18 ನಲ್ಲಿ ನೇರಪ್ರಸಾರ ಮಾಡಲಿದ್ದು, ಜಿಯೋ ಸಿನಿಮಾದ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *